ಬೆಳಗಾವಿ: ಇಲ್ಲಿನ ದರ್ಗಾ ಬಳಿಯೇ ಜಿಲೆಟಿನ್ ಕಟ್ಟಿಗಳು ಸ್ಪೋಟಗೊಂಡ ಪರಿಣಾಮ ಜನರು ಬೆಚ್ಚಿ ಬಿದ್ದಿರುವಂತ ಘಟನೆ ನಡೆದಿದೆ. ಕಲ್ಲು ಗಣಿಗಾರಿಕೆಯ ಕ್ರಷರ್ ನಲ್ಲಿದ್ದಂತ ಜಿಲೆಟಿನ್ ಕಟ್ಟಿ ಸ್ಪೋಟದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಬಳಿಯಲ್ಲಿ ದರ್ಗಾ ಬಳಿಯಲ್ಲೇ ಜಿಲೆಟಿನ್ ಕಟ್ಟಿಗಳು ಸ್ಪೋಟಗೊಂಡಿದ್ದಾವೆ. ಉದಯ್ ಶಿವಕುಮಾರ್ ಎಂಬುವರು ದರ್ಗಾ ಬಳಿಯೇ ಕ್ರಷರ್ ನಡೆಸುತ್ತಿದ್ದರು ಎನ್ನಲಾಗಿದೆ.
ಕ್ರಷರ್ ನಡೆಸುತ್ತಿದ್ದಂತ ಗುಡ್ಡಕ್ಕೆ ಸ್ಥಳೀಯರು ಬೆಂಕಿ ಹಚ್ಚಿದ್ದಾರೆ. ಈ ಬೆಂಕಿಯ ಕಿಡಿ ಕ್ರಷರ್ ನಲ್ಲಿದ್ದಂತ ಶೆಡ್ಡಿಗೆ ತಾಗಿದೆ. ಇದರಿಂದಾಗಿ ಶೆಡ್ಡಿನಲ್ಲಿದ್ದಂತ ಜಿಲೆಟಿನ್ ಕಟ್ಟಿಗಳು ಸ್ಪೋಟಗೊಂಡಿವೆ ಎನ್ನಲಾಗಿದೆ.
ಜಿಲೆಟಿನ್ ಕಟ್ಟಿಗಳು ಸ್ಪೋಟಗೊಂಡ ಹಿನ್ನಲೆಯಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ನಡುಕ ಕೂಡ ಆಗಿದೆ. ಹೀಗಾಗಿ ಅಕ್ಕಪಕ್ಕದ ಜನರು ಬೆಚ್ಚಿ ಬಿದ್ದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
BIG NEWS: ರಾಜ್ಯದಲ್ಲಿ ಇನ್ನೂ ಜೀವಂತ ‘ಸಾಮಾಜಿಕ ಬಹಿಷ್ಕಾರ’ ಪದ್ದತಿ: ನಿವಾರಣೆಗೆ ‘ಗ್ರಾಮ ಆಡಳಿತ’ ಮೀನಾಮೇಷ
ರಾಜ್ಯದ ಜನತೆಗೆ ಗುಡ್ ನ್ಯೂಸ್ : ಎಲ್ಲಾ ತಾಲೂಕುಗಳಿಗೂ `ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ’ ವಿಸ್ತರಣೆ.!