ಕೊಪ್ಪಳ: ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಂತ ಆಕೆ ಬದುಕಲೇ ಇಲ್ಲ. ಬದುಕದೇ ಇದ್ದರೂ ಸಾವಿನ ನಂತ್ರವೂ ಇತರರಿಗೆ ತನ್ನ ಅಂಗಾಂಗ ದಾನದ ಮೂಲಕ ಜೀವದಾನವಾಗಿದ್ದಾಳೆ.
ಹೌದು ಡಿಸೆಂಬರ್.15ರಂದು ಮೂಡಬಿದ್ರೆಯ ಕಾಲೇಜಿನಲ್ಲಿ ಓದುತ್ತಿದ್ದಂತ ಪುತ್ರಿಯನ್ನು ನೋಡಿಕೊಂಡು ವಾಪಾಸ್ಸು ಆಗುತ್ತಿದ್ದಂತ ವೇಳೆಯಲ್ಲಿ ಶಿವಮೊಗ್ಗದ ಬೇಡರಹೊಸಳ್ಳಿ ಬಳಿಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಕಾರಿನಲ್ಲಿದ್ದಂತ ಗೀತಾ ಸಂಗನಗೌಡ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಗೀತಾ ಸಂಗನಗೌಡ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೇ ಅವರ ಮೆದುಳು ನಿಷ್ಕ್ರೀಯಗೊಂಡ ಕಾರಣ, ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಇಂದು ಆಕೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಆಕೆಯ ಕುಟುಂಬಸ್ಥರನ್ನು ವೈದ್ಯರು ಮನವೊಲಿಸಿದ ಪರಿಣಾಮ, ಅಂಗಾಂಗ ದಾನ ಮಾಡಿದ್ದಾರೆ.
ಗೀತಾ ಅವರ ಕಿಡ್ನಿ, ಲಿವರ್, ಹೃದಯ, ಕಣ್ಣು ಸೇರಿದಂತೆ ಇತರೆ ಅಂಗಗಳನ್ನು ದಾನ ಮಾಡಲಾಗಿದೆ. ಹೀಗೆ ಅಂಗಾಂಗ ದಾನದ ಮೂಲಕ 7 ಜನರಿಗೆ ಜೀವದಾನವನ್ನು ಮಾಡಿ ಸಾವಿನಲ್ಲೂ ಸಾರ್ಥಕತೆಯನ್ನು ಮರೆಯಲಾಗಿದೆ.
ಕಾಂಗ್ರೆಸ್ ಶಕ್ತಿ ಏನು ಎಂಬುದು ನಮಗೂ ಗೊತ್ತಿದೆ, ಬಿಜೆಪಿಯವರಿಗೂ ಗೊತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್
BREAKING: ಇನ್ಮುಂದೆ ಡಿ.26ರಂದು ಪ್ರತಿ ವರ್ಷ ‘ಗ್ರಾ.ಪಂ ಡಾಟಾ ಆಪರೇಟರ್’ಗಳ ದಿನವಾಗಿ ಆಚರಣೆ: ಸಚಿವ ಪ್ರಿಯಾಂಕ್ ಖರ್ಗೆ