Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಮನೆಗೆ ಹೊಸ `PNG’ ಗ್ಯಾಸ್ ಸಂಪರ್ಕ ಪಡೆಯಬೇಕೇ? ಹಾಗಿದ್ದರೆ ಈ ದಾಖಲೆಗಳು ನಿಮ್ಮ ಬಳಿ ಇರಲಿ!

06/04/2026 10:10 AM

BREAKING : ಬೆಂಗಳೂರಲ್ಲಿ ನಟ ನಿರಂಜನ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು : ‘FIR’ ದಾಖಲು!

06/04/2026 10:10 AM

ಮಧ್ಯದಾರಿಯಲ್ಲೇ ಸಿಲುಕಿದ ಸಾವಿರಾರು ವಾಹನಗಳು! ಬೆಟ್ಟ ಕುಸಿದು ಜಮ್ಮು-ಶ್ರೀನಗರ ರಸ್ತೆ ಸಂಪರ್ಕ ಕಟ್: ಪ್ರಯಾಣಿಕರ ಪರದಾಟ

06/04/2026 10:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ 688 ಕೋಟಿ ರೂಪಾಯಿ ಬಾಕಿ ಆಸ್ತಿ ತೆರಿಗೆ ವಸೂಲಾತಿ ಮಾಡಿದ GBA
KARNATAKA

ಬೆಂಗಳೂರಲ್ಲಿ 688 ಕೋಟಿ ರೂಪಾಯಿ ಬಾಕಿ ಆಸ್ತಿ ತೆರಿಗೆ ವಸೂಲಾತಿ ಮಾಡಿದ GBA

By kannadanewsnow0923/02/2026 9:32 PM

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐಟಿ ವಿಭಾಗವು National Informatics Centre(NIC) ಸಹಯೋಗದೊಂದಿಗೆ, ನಗರ ಪಾಲಿಕೆಗಳಡಿ ಕಾರ್ಯನಿರ್ವಹಿಸುವ ಜಿಪಿಎಸ್ ತಂಡದ ವಿಶೇಷ ಮನೆ-ಮನೆ ಭೇಟಿ ಮೂಲಕ ಆಸ್ತಿ ತೆರಿಗೆ ಮರುಪರಿಶೀಲನೆ ಕಾರ್ಯವನ್ನು 2ನೇ ಹಂತದಲ್ಲಿ ಯಶಸ್ವಿಯಾಗಿ ನಡೆಸಿದೆ.

ಈ ಹಂತದಲ್ಲಿ ಸುಮಾರು 13,600 ಆಸ್ತಿಗಳ ಮಾಲೀಕರು ಕಳೆದ ಸರಾಸರಿ 5 ವರ್ಷಗಳಿಂದ ಕಡಿಮೆ ತೆರಿಗೆ ಪಾವತಿಸಿರುವುದು ಪತ್ತೆಯಾಗಿದೆ. ಪ್ರತಿ ವರ್ಷಕ್ಕೆ ಪ್ರತ್ಯೇಕವಾಗಿ ನೀಡಲಾದ ನೋಟಿಸ್‌ಗಳನ್ನು ಒಳಗೊಂಡಂತೆ ಒಟ್ಟು ಸುಮಾರು 67,000 ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ.

ಈ ಮರುಪರಿಶೀಲನೆಯಿಂದ ಸುಮಾರು 318 ಕೋಟಿ ರೂ.ಗಳ ತೆರಿಗೆ ತಪ್ಪು ಪಾವತಿ(evasion) ಪತ್ತೆಯಾಗಿದೆ. ಮೊದಲ ಮತ್ತು ಎರಡನೇ ಹಂತಗಳನ್ನು ಸೇರಿಸಿ ಒಟ್ಟು 23,600 ಆಸ್ತಿಗಳಿಂದ 688 ಕೋಟಿ ರೂ.ಗಳ ವಸೂಲಾತಿ ಪ್ರಕ್ರಿಯೆ ಆರಂಭಿಸಲಾಗಿದೆ.

ನೋಟಿಸ್ ಮತ್ತು ಪಾವತಿ ಮಾಹಿತಿ:

* ಸಂಬಂಧಿತ ನಾಗರಿಕರಿಗೆ ಶೋ ಕಾಸ್ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದ್ದು, SMS ಹಾಗೂ IVRS ಮುಖಾಂತರವೂ ಮಾಹಿತಿ ಕಳುಹಿಸಲಾಗಿದೆ.

* ನೋಟಿಸ್ ಪಡೆದ ನಾಗರಿಕರು 15 ದಿನಗಳೊಳಗಾಗಿ ಆನ್‌ಲೈನ್ ಮೂಲಕ ಅಪೀಲ್ ಸಲ್ಲಿಸಬಹುದು: https://BBMPenyaya.karnataka.gov.in

* ಅಥವಾ ತಕ್ಷಣವೇ ತೆರಿಗೆ ಪಾವತಿಸಬಹುದು:
https://BBMPtax.karnataka.gov.in

ನೋಟಿಸ್‌ನ ಮಾದರಿ ಪ್ರತಿಯನ್ನು ಕೂಡ ಇದರೊಂದಿಗೆ ಲಗತ್ತಿಸಲಾಗಿದೆ. ಇದರಲ್ಲಿ ಪಾರದರ್ಶಕವಾಗಿ ತೆರಿಗೆ ತಪ್ಪು ಪಾವತಿ ಹೇಗೆ ಪತ್ತೆಯಾಯಿತು ಎಂಬುದು ಸ್ಪಷ್ಟವಾಗಿ ವಿವರಿಸಲಾಗಿದೆ. ನಾಗರಿಕರು ಅದೇ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅಪೀಲ್ ಸಲ್ಲಿಸುವ ಅವಕಾಶವೂ ಇದೆ.

ವ್ಯವಸ್ಥೆಯ ಕಾರ್ಯವಿಧಾನ (System Process):

1. ಜಿಪಿಎಸ್ ತಂಡದ ಮನೆ-ಮನೆ ಭೇಟಿ ವೇಳೆ ಮೊಬೈಲ್ ಆಪ್‌ನಲ್ಲಿ ಆಸ್ತಿ ತೆರಿಗೆ ಮಾಹಿತಿಯನ್ನು ಬಳಸಲಾಗುತ್ತದೆ.

2. ಪ್ರತಿಯೊಂದು ಆಸ್ತಿಯ ಜಿಪಿಎಸ್ ಮೂಲಕ ಸೆರೆ ಹಿಡಿಯುತ್ತಾರೆ (GPS Location), ಬಳಕೆ (ವಸತಿ/ವಾಣಿಜ್ಯ/ಮಿಶ್ರ ಇತ್ಯಾದಿ…) ಬಳಕೆಯ ವಿಸ್ತೀರ್ಣ ಮುಂತಾದ ಮಾಹಿತಿಗಳನ್ನು ದಾಖಲಿಸಲಾಗುತ್ತದೆ.

3. ಆಸ್ತಿಯ ಮಹಡಿಗಳ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿ ಮೊಬೈಲ್ ಆಪ್ ಮೂಲಕ ಬ್ಯಾಕ್ ಎಂಡ್‌ ಗೆ ಕಳುಹಿಸಲಾಗುತ್ತದೆ.

4. ಗುಣಮಟ್ಟ ಪರಿಶೀಲನಾ (QC) ತಂಡವು 100% ಪರಿಶೀಲನೆ ನಡೆಸುತ್ತದೆ. ತಿರಸ್ಕರಿಸಲಾದ ಪ್ರಕರಣಗಳನ್ನು ಮರುಪರಿಶೀಲನೆಗಾಗಿ ಜಿಪಿಎಸ್ ತಂಡಕ್ಕೆ ಹಿಂದಿರುಗಿಸಲಾಗುತ್ತದೆ.

5. QC ಅನುಮೋದಿತ ಮಾಹಿತಿಯನ್ನು ಡ್ರೋನ್ ಚಿತ್ರಗಳು ಹಾಗೂ ಡಿಜಿಟಲ್ ನಿರ್ಮಿತ ವಿಸ್ತೀರ್ಣದ ಮಾಹಿತಿಯೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಘೋಷಿತ ವಿಸ್ತೀರ್ಣಕ್ಕಿಂತ ಹೆಚ್ಚಿನ ನಿರ್ಮಾಣ ಅಥವಾ ಘೋಷಿಸದ ವಾಣಿಜ್ಯ ಬಳಕೆ (ಭಾಗಶಃ ಅಥವಾ ಸಂಪೂರ್ಣ) ಕಂಡುಬಂದಲ್ಲಿ ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಬಡ್ಡಿ ಮತ್ತು ದಂಡದೊಂದಿಗೆ ಶೋ ಕಾಸ್ ನೋಟಿಸ್ ಜಾರಿಗೊಳಿಸುತ್ತದೆ.

ಜಿಪಿಎಸ್ ತಂಡವು ಪ್ರತಿದಿನ ಸುಮಾರು 10,000 ಆಸ್ತಿಗಳನ್ನು ಭೇಟಿ ಮಾಡುತ್ತಿದೆ. ತೆರಿಗೆ ತಪ್ಪು ಪಾವತಿಸಿದ ಪ್ರತಿಯೊಬ್ಬರೂ ಶೀಘ್ರದಲ್ಲೇ ಹೊಣೆಗಾರರಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ ಮುನೀಶ್ ಮೌದ್ಗೀಲ್ ತಿಳಿಸಿದ್ದಾರೆ.

ಛೇ..! ಇವನೆಂಥ ಮಾವ! ಮಗಳನ್ನು ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಬೆಂಕಿ ಹಚ್ಚಿದ ಪಾಪಿ ತಂದೆ!

Share. Facebook Twitter LinkedIn WhatsApp Email

Related Posts

ನಿಮ್ಮ ಮನೆಗೆ ಹೊಸ `PNG’ ಗ್ಯಾಸ್ ಸಂಪರ್ಕ ಪಡೆಯಬೇಕೇ? ಹಾಗಿದ್ದರೆ ಈ ದಾಖಲೆಗಳು ನಿಮ್ಮ ಬಳಿ ಇರಲಿ!

06/04/2026 10:10 AM1 Min Read

BREAKING : ಬೆಂಗಳೂರಲ್ಲಿ ನಟ ನಿರಂಜನ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು : ‘FIR’ ದಾಖಲು!

06/04/2026 10:10 AM1 Min Read

BREAKING : ರಾಜ್ಯದಲ್ಲಿ ಘೋರ ದುರಂತ : ಹಾವೇರಿಯಲ್ಲಿ ಟ್ರಾಕ್ಟರ್ ಹರಿದು 2 ವರ್ಷದ ಮಗು ದುರ್ಮರಣ!

06/04/2026 10:08 AM1 Min Read
Recent News

ನಿಮ್ಮ ಮನೆಗೆ ಹೊಸ `PNG’ ಗ್ಯಾಸ್ ಸಂಪರ್ಕ ಪಡೆಯಬೇಕೇ? ಹಾಗಿದ್ದರೆ ಈ ದಾಖಲೆಗಳು ನಿಮ್ಮ ಬಳಿ ಇರಲಿ!

06/04/2026 10:10 AM

BREAKING : ಬೆಂಗಳೂರಲ್ಲಿ ನಟ ನಿರಂಜನ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು : ‘FIR’ ದಾಖಲು!

06/04/2026 10:10 AM

ಮಧ್ಯದಾರಿಯಲ್ಲೇ ಸಿಲುಕಿದ ಸಾವಿರಾರು ವಾಹನಗಳು! ಬೆಟ್ಟ ಕುಸಿದು ಜಮ್ಮು-ಶ್ರೀನಗರ ರಸ್ತೆ ಸಂಪರ್ಕ ಕಟ್: ಪ್ರಯಾಣಿಕರ ಪರದಾಟ

06/04/2026 10:10 AM

BREAKING : ರಾಜ್ಯದಲ್ಲಿ ಘೋರ ದುರಂತ : ಹಾವೇರಿಯಲ್ಲಿ ಟ್ರಾಕ್ಟರ್ ಹರಿದು 2 ವರ್ಷದ ಮಗು ದುರ್ಮರಣ!

06/04/2026 10:08 AM
State News
KARNATAKA

ನಿಮ್ಮ ಮನೆಗೆ ಹೊಸ `PNG’ ಗ್ಯಾಸ್ ಸಂಪರ್ಕ ಪಡೆಯಬೇಕೇ? ಹಾಗಿದ್ದರೆ ಈ ದಾಖಲೆಗಳು ನಿಮ್ಮ ಬಳಿ ಇರಲಿ!

By kannadanewsnow5706/04/2026 10:10 AM KARNATAKA 1 Min Read

ಇತ್ತೀಚಿನ ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ಗಳಿಗಿಂತ ಪಿಎನ್ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಬಳಕೆಯು ಹೆಚ್ಚು ಜನಪ್ರಿಯವಾಗುತ್ತಿದೆ. ಸಿಲಿಂಡರ್ ಖಾಲಿಯಾಗುವ ಆತಂಕವಿಲ್ಲದೆ ಮತ್ತು…

BREAKING : ಬೆಂಗಳೂರಲ್ಲಿ ನಟ ನಿರಂಜನ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು : ‘FIR’ ದಾಖಲು!

06/04/2026 10:10 AM

BREAKING : ರಾಜ್ಯದಲ್ಲಿ ಘೋರ ದುರಂತ : ಹಾವೇರಿಯಲ್ಲಿ ಟ್ರಾಕ್ಟರ್ ಹರಿದು 2 ವರ್ಷದ ಮಗು ದುರ್ಮರಣ!

06/04/2026 10:08 AM

BREAKING : ಹುಬ್ಬಳ್ಳಿ ಲವ್ ಜಿಹಾದ್ ಕೇಸ್ ಗೆ ಸ್ಪೋಟಕ ಟ್ವಿಸ್ಟ್ : ಕಾಂಗ್ರೆಸ್ ಮುಖಂಡನ ಕೈವಾಡ ಇದೆ ಎಂದ ಯುವತಿ!

06/04/2026 10:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.