ನವದೆಹಲಿ:ಲೋಕಸಭೆಯ ಉಪನಾಯಕನಾಗಿ ಗೌರವ್ ಗೋಗೊಯ್ ನೇಮಕ ಮಾಡಿ ಸೋನಿಯಾ ಗಾಂಧಿ ಆದೇಶಿದ್ದಾರೆ.ಅಸ್ಸಾಂ ನ ಜೋರ್ಹತ್ ಕ್ಷೇತ್ರದಲ್ಲಿ ಗೌರವ್ ಗೊಗೊಯ್ ಸಂಸದರಾಗಿ ಗೆದ್ದಿದ್ದರು.
ಸಂಸದ ಗೌರವ್ ಗೊಗೊಯ್ ಅವರನ್ನು ಲೋಕಸಭೆಯಲ್ಲಿ ಪಕ್ಷದ ಉಪನಾಯಕರಾಗಿ ಕಾಂಗ್ರೆಸ್ ನೇಮಿಸಿದೆ ಎಂದು ಕೆ.ಸಿ.ವೇಣುಗೋಪಾಲ್ ಭಾನುವಾರ (ಜುಲೈ 14) ಮಾಹಿತಿ ನೀಡಿದರು. ಸಂಸದ ಕೋಡಿಕುನ್ನಿಲ್ ಸುರೇಶ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸುವ ಇತ್ತೀಚಿನ ನೇಮಕಾತಿಗಳ ಬಗ್ಗೆ ಸೋನಿಯಾ ಗಾಂಧಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಸಂಸದರಾದ ಮಾಣಿಕಂ ಠಾಗೋರ್ ಮತ್ತು ಡಾ.ಎಂ.ಡಿ.ಜಾವೇದ್ ಅವರನ್ನು ಸಚೇತಕರನ್ನಾಗಿ ನೇಮಿಸಲಾಗಿದೆ.
“ಗೌರವಾನ್ವಿತ ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗೌರವಾನ್ವಿತ ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಪನಾಯಕ, ಮುಖ್ಯ ಸಚೇತಕ ಮತ್ತು ಇಬ್ಬರು ವಿಪ್ ಗಳನ್ನು ನೇಮಕ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ” ಎಂದು ವೇಣುಗೋಪಾಲ್ ಪೋಸ್ಟ್ ಮಾಡಿದ್ದಾರೆ.
ಲೋಕಸಭೆಯಲ್ಲಿ ಪ್ರತಿಪಕ್ಷಗಳೊಂದಿಗೆ ಕಾಂಗ್ರೆಸ್ ಜನರ ಹಿತಾಸಕ್ತಿಗಳನ್ನು “ಎತ್ತಿಹಿಡಿಯುತ್ತದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದರು.