ಕೆಎನ್ಎನ್ ಸ್ಪೆಷಲ್ ಡೆಸ್ಕ್: ಶನಿವಾರ ದಿಂದ ಗಣೇಶ ಚತುರ್ಥಿ ಹಬ್ಬ. ನಾಡು, ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಾರ್ವಜನಿಕರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಸರ್ಜಿಸುವುದು ಕಾಮನ್. ಆದರೇ ರಾಜ್ಯದ ಈ ಪೊಲೀಸ್ ಠಾಣೆಯಲ್ಲಿ ಮಾತ್ರ ಸಾರ್ವಜನಿಕರಂತೆ ಪ್ರತಿ ವರ್ಷ ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿಯನ್ನು ಕೂರಿಸಿ, ವಿಸರ್ಜನೆ ಮಾಡಲಾಗುತ್ತದೆ. ಅದು ಎಲ್ಲಿ? ಏಕೆ ಎನ್ನುವ ಬಗ್ಗೆ ಮುಂದೆ ಓದಿ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಾಗರ ಟೌನ್ ಠಾಣೆಯಲ್ಲೇ ಪ್ರತಿ ವರ್ಷ ಸಾರ್ವಜನಿಕರು ಕೂರಿಸುವಂತೆಯೇ ಗಣೇಶ ಮೂರ್ತಿಯನ್ನು ಪ್ರತಿಸ್ಠಾಪಿಸುವಂತ ಪರಿಪಾಟ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಗಣೇಶ ಚತುರ್ಥಿ ಹಬ್ಬದಂದು ಪ್ರತಿವರ್ಷ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಕೂರಿಸದೇ ಇರೋದೇ ಇಲ್ಲ.
ಹೀಗಿದೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಹಿಂದಿನ ಕಾರಣ..
ಹತ್ತಿಪ್ಪತ್ತು ವರ್ಷಗಳ ಹಿಂದೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯ ವೇಳೆಯಲ್ಲಿ ಗಲಾಟೆಯಾಗಿತ್ತಂತೆ. ಅಂದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಲು ಲಾಠಿ ಚಾರ್ಜ್ ಮಾಡಿದ್ದರಂತೆ. ಪೊಲೀಸರ ಲಾಠಿ ಚಾರ್ಜ್ ನಿಂದಾಗಿ ಹೆದರಿ ಗಣೇಶ ಮೂರ್ತಿಯನ್ನು ವಿಸರ್ಜಿಸದೇ ಹಾಗೆಯೇ ಸಾರ್ವಜನಿಕರು ಬಿಟ್ಟು ಹೋಗಿದ್ದರಂತೆ. ಅಂದು ಪೊಲೀಸರೇ ಮುಂದೆ ನಿಂತು ಗಣೇಶ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಪೂಜಿಸಿ ವಿಸರ್ಜನೆ ಮಾಡಿದ್ದರಂತೆ.
ಈ ಹಿನ್ನಲೆಯಲ್ಲಿ ಅಂದಿನಿಂದ ಇಂದಿನವರೆಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರತಿವರ್ಷ ಕೂರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಮಾತ್ರ ಪ್ರತಿ ವರ್ಷ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಅದರಂತೆ ಶನಿವಾರ ಗಣೇಶ ಚತುರ್ಥಿ ಹಬ್ಬದಂದು ಕೂರಿಸಿ, ಪೂಜಿಸಲಾಯಿತು.
ಗಣೇಶ ಚತುರ್ಥಿಯ ಮೊದಲ ದಿನ ಪೂಜಿಸಿ ವಿಸರ್ಜನೆ
ಸೆ.7ರ ಶನಿವಾರ ಗಣೇಶ ಹಬ್ಬದ ಮೊದಲ ದಿನವಾಗಿದೆ. ಈ ದಿನದಂದು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿಯನ್ನು ಸಾರ್ವಜನಿಕರಂತೆ ಪೊಲೀಸರು ಮೆರವಣಿಗೆಯ ಮೂಲಕ ತಂದು, ಪೊಲೀಸ್ ಠಾಣೆಯಲ್ಲಿ ಸಾಂಪ್ರದಾಯಿಕವಾಗಿ ಪೂಜೆಯೊಂದಿಗೆ ಪ್ರತಿಷ್ಠಾಪಿಸಲಾಗುತ್ತದೆ.
ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಅವರ ಕುಟುಂಬಸ್ಥರು ಸೇರಿಕೊಂಡು ಇಡೀ ದಿನ ಗಣೇಶ ಮೂರ್ತಿಗೆ ಪೂಜಿಸಲಾಗುತ್ತದೆ. ಶನಿವಾರ ಸಂಜೆಯ ವೇಳೆಗೆ ಸಾಗರ ನಗರ, ಗ್ರಾಮಾಂತರ, ಗ್ರಾಮಾಂತರ ವೃತ್ತದ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಪೂಜಿಸಿ, ಗಣಪತಿ ಕೆರೆಯಲ್ಲಿ ವಿಸರ್ಜನೆ ಮಾಡಿದರು.
ನಿನ್ನೆಯ ಸಾಗರ ಟೌನ್ ಠಾಣೆಯ ಗಣೇಶ ಮೂರ್ತಿ ವಿಸರ್ಜನೆಯ ವೇಳೆಯಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್, ಸಾಗರ ಟೌನ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸೀತಾರಾಮಂ ಜೆ.ಬಿ, ಸಬ್ ಇನ್ಸ್ ಪೆಕ್ಟರ್ ನಾಗರಾಜ್, ಯಲ್ಲಪ್ಪ ಹಿರಿಗಣ್ಣನವರು, ಟಿ.ಡಿ ಸಾಗರಕರ್ ಭಾಗಿಯಾಗುತ್ತಾರೆ. ಇವರಲ್ಲದೇ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ ನಾಯಕ್, ಎಸ್ಐಗಳಾದಂತ ಸಿದ್ದರಾಮಪ್ಪ, ಸಾಗರ ಗ್ರಾಮಾಂತರ ವೃತ್ತದ ಪಿಐ ಸಂತೋಷ್ ಶೆಟ್ಟಿ ಸೇರಿದಂತೆ ಕುಟುಂಬಸ್ಥರು ಕೂಡ ಭಾಗಿಯಾಗಿ, ಮೆರವಣಿಗೆಯ ಮೂಲಕ ಕೊಂಡೊಯ್ದು, ಗಣಪತಿ ಕೆರೆಯಲ್ಲಿ ವಿಸರ್ಜಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ನಿಮ್ಮ ಊರಿನ ‘ಕಂದಾಯ ನಕ್ಷೆ’ ಬೇಕೆ? ಈ ವಿಧಾನ ಅನುಸರಿಸಿ, ಕುಳಿತಲ್ಲೇ ‘ಡೌನ್ ಲೋಡ್’ ಮಾಡಿ | Revenue Maps Online
ಪ್ರಯಾಣಿಕರೇ ದಯವಿಟ್ಟು ಗಮನಿಸಿ : ಇನ್ಮುಂದೆ ಈ ವಯಸ್ಸಿನ ಮಕ್ಕಳು ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು!