ಮಂಡ್ಯ :ಸ್ವಾತಂತ್ರ್ಯ ಕೊಡಿಸಿದ ಮಹಾನ್ ನಾಯಕನ ಸ್ಮಾರಕಕ್ಕಿಲ್ಲ ನೆರಳಿನ ರಕ್ಷಣೆ. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಮಹಾತ್ಮ ಗಾಂಧಿಯ ಚಿತಾಭಸ್ಮ ವಿಸರ್ಜನಾ ಸ್ಮಾರಕ ಅನಾಥವಾಗಿದೆ.
ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಂದಿಗೂ ಅನಾಥವಾಗಿ ನಿಂತಿದೆ ಗಾಂಧಿ ಸ್ಮಾರಕ. 1948 ರಲ್ಲಿ ಅಂದಿನ ಸಿಎಂ ಕೆ.ಸಿ.ರೆಡ್ಡಿ ನೇತೃತ್ವದಲ್ಲಿ ಗಾಂಧಿಜಿಯ ಚಿತಾಭಸ್ಮ ವಿಸರ್ಜನೆಯ ನೆನಪಿಗಾಗಿ ನೆಟ್ಟಿರೋ ಸ್ಮಾರಕ ಕಲ್ಲು. 1948 ರಿಂದ ಇಲ್ಲಿಯವರೆಗೂ ಬಿಸಿಲು ಮಳೆಗೆ ಮೈಯೊಡ್ಡಿ ನಿಂತಿದ್ರು ರಕ್ಷಣೆಗೆ ನಿರ್ಲಕ್ಷ್ಯ ಮಾಡಲಾಗಿದೆ. ಹಲವು ಬಾರಿ ಈ ಸ್ಮಾರಕದ ಸಂರಕ್ಷಣೆಗೆ ಅನುದಾನ ಬಿಡುಗಡೆ ಮಾಡಿದ್ರು ಈ ಸ್ಮಾರಕ ರಕ್ಷಣೆ ಮಾತ್ರ ಆಗಿಲ್ಲ.
ಶ್ರೀರಂಗಪಟ್ಟಣದ ಪಶ್ವಿಮವಾಹಿನಿ ಬಳಿಯ ಕಾವೇರಿ ನದಿ ದಂಡೆಯ ಮೇಲಿರುವ ಗಾಂಧಿ ಸ್ಮಾರಕ. ಗಾಂಧಿ ಸ್ಮಾರಕ ಸಂರಕ್ಷಣೆ ಮಾಡಿದ ಜಿಲ್ಲಾಡಳಿತ ಮತ್ತು ಕ್ಷೇತ್ರದ ಶಾಸಕರ ವಿರುದ್ದ ಸ್ಥಳಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಾದ್ರು ಈ ಸ್ಥಳದಲ್ಲಿ ಸ್ಮಾರಕ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.