ಬೆಂಗಳೂರು: 21ನೇ ಶತಮಾನ ಆತಂಕ ಮತ್ತು ಗಾಂಧೀಜಿ ವಿಚಾರ ಎನ್ನುವ ವಿಷಯದ ಮೇಲೆ ಸ್ಪರ್ಧೆ ವಿದ್ಯಾರ್ಥಿಗಳಿಗೆ ಗಾಂಧಿ ಪ್ರಬಂಧವನ್ನು ಆರನೇ ತರಗತಿಯ ನಂತರದ ಪ್ರತಿ ಶಾಲೆ-ಕಾಲೇಜು, ವಿಶ್ವವಿದ್ಯಾ ಲಯ ಮತ್ತು ಖಾಸಗಿ, ಸರಕಾರಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸುವಂತೆ ಪತ್ರದಲ್ಲಿ ಸಿಎಂ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಅವರು ಪತ್ರದಲ್ಲಿ ದಶಕಗಳು ಮುಗಿದವು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಯಾಗಿ ಏಳೂವರೆ ಗಾಂಧೀಜಿಯವರು ತಮ್ಮ ಜೀವಿತಾವಧಿಯುದ್ಧಕ್ಕೂ ಶಾಂತಿ, ಅಹಿಂಸೆ, ಸತ್ಯ, ವಿಕೇಂದ್ರೀಕರಣ, ಸಾಮಾಜಿಕ ನ್ಯಾಯ ಮುಂತಾದ ಜೀವಪರ ನಿಲುವುಗಳನ್ನು ಆಚರಿಸಿ ಪ್ರತಿಪಾದಿಸಿದ್ದರು. ಅದೇ ಸಂದರ್ಭದಲ್ಲಿ ದೇಶದ ವೈವಿಧ್ಯತೆ ಹಾಗೂ ಎಲ್ಲರನ್ನೂ ಒಳಗೊಂಡು ಬಾಳುವ ಅನಿವಾರ್ಯತೆಯನ್ನು ಪ್ರತಿಪಾದಿಸಿದ್ದರು. ಇಂಥ ಮಹಾನ್ ವ್ಯಕ್ತಿಯನ್ನು ಕೆಲವು ದುರುಳರು ಪಿತೂರಿ ಮಾಡಿ ಹತ್ಯೆ ಮಾಡಿದರು.
ಗಾಂಧೀಜಿಯವರ ಹತ್ಯೆಯ ನಂತರವೂ ದೇಶ ನಿರಂತರವಾಗಿ ಅವರ ಆದರ್ಶಗಳನ್ನು ಸಾಧ್ಯವಾದ ಮಟ್ಟಿಗೆ ಅನುಷ್ಠಾನ ಮಾಡಿಕೊಂಡೇ ಬಂದಿದೆ. ಆದರೆ ಇತ್ತೀಚಿಗೆ ದ್ವೇಷ-ಹಿಂಸೆಯನ್ನು ಪ್ರತಿಪಾದಿಸುವ, ವಿಕೇಂದ್ರೀಕರಣವನ್ನು ದಮನಿಸಿ ಕೇಂದ್ರೀಕರಣಕ್ಕೆ ಒತ್ತು ನೀಡುವ, ದೀನ-ದಲಿತ, ಮಹಿಳೆ, ಆದಿವಾಸಿ, ರೈತ, ಕಾರ್ಮಿಕ ಮತ್ತು ಯುವಜನರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರವೃತ್ತಿಯುಳ್ಳ ಶಕ್ತಿಗಳು ಕ್ರಿಯಾಶೀಲವಾಗುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರ ವಿರುದ್ಧ, ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದ ಶಕ್ತಿಗಳು ಪ್ರವರ್ಧಮಾನಕ್ಕೆ ಬರಲು ಪ್ರಯತ್ನಿಸುತ್ತಿವೆ.
ಇಂದು ಜಾಗತಿಕ ಪರಿಸರದ ಬಿಕ್ಕಟ್ಟುಗಳು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಹಿಂಸಾ ಏನೋದ ಮುಂತಾದವುಗಳಿಂದಾಗಿ ಮನುಷ್ಯರು ಈ ಭೂಮಿಯ ಮೇಲಿಂದಲೆ ಅಳಿಸಿ ಹೋಗುವ ದುಸ್ಥಿತಿಗೆ ತಲುಪಿಯಾಗಿದೆ ಎಂದು ಸ್ಟೀಫನ್ ಹಾಕಿಂಗ್ ಮುಂತಾದ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ದೊಡ್ಡ ಭಾಷೆಗಳು ಸಣ್ಣ ಸಣ್ಣ ಭಾಷೆಗಳನ್ನು ನುಂಗಿ ಹಾಕುತ್ತಿವೆ. ಯಾವುದೆ ಸಮಾಜ ಅಥವಾ ಸಮುದಾಯಗಳು ತಮ್ಮ ಭಾಷೆಗಳನ್ನು ಕಳೆದುಕೊಳ್ಳುವುದೆಂದರೆ ತಮ್ಮ ಅಸ್ತಿತ್ವವನ್ನೆ ಕಳೆದುಕೊಳ್ಳುವುದು ಎಂದರ್ಥ ಎಂಬುದು ಈಗಾಗಲೆ ಸಾಬೀತಾದ ವಿಚಾರವಾಗಿದೆ.
ಆದರೆ ಗಾಂಧೀಜಿಯವರ ಚಿಂತನೆಗಳಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರವಿದೆ. ಆದ್ದರಿಂದ “21ನೆ ಶತಮಾನದ ಆತಂಕಗಳು ಮತ್ತು ಗಾಂಧೀಜಿಯವರ ವಿಚಾರಗಳು ಪ್ರತಿಪಾದಿಸುವ ಪರಿಹಾರಗಳು” ಎಂಬ ವಿಷಯವನ್ನು ಪ್ರತಿ ಶಾಲೆ [6ನೆ ತರಗತಿಯ ನಂತರ] ಮತ್ತು ಪ್ರತಿ ಕಾಲೇಜಿನ ಪ್ರತಿ ವಿದ್ಯಾರ್ಥಿಗಳಿಗೆ ಖಾಸಗಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜು- ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳವರೆಗೆ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಮಕ್ಕಳನ್ನು ಹೊರತುಪಡಿಸಿ] ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಗಾಂಧೀಜಿಯವರನ್ನು ಅರಿತುಕೊಳ್ಳಲು ಅವಕಾಶ ಒದಗಿಸಿದಂತಾಗುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿ ತರಗತಿಯ ಮಕ್ಕಳಿಗೆ ಸೂಕ್ತ ಬಹುಮಾನವನ್ನು ನೀಡುವುದು, ಉಳಿದವರ ಭಾಗವಹಿಸುವಿಕೆಗಾಗಿ ಪ್ರಶಂಸನಾ ಪತ್ರಗಳನ್ನು ನೀಡಲು ಕ್ರಮವಹಿಸುವುದು. ಈ ದಿಶೆಯಲ್ಲಿ ತಾವುಗಳು ತುರ್ತಾಗಿ ಕಾರ್ಯಯೋಜನೆಯನ್ನು ರೂಪಿಸಿ, ಈ ತಿಂಗಳ ಅಂತ್ಯದೊಳಗೆ ಸ್ಪರ್ಧೆಗಳನ್ನು ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿಸುತ್ತೇನೆ ಅಂಥ ತಿಳಿಸಿದ್ದಾರೆ.