ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿರುವಂತ ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆ ರಂಗೇರಿದೆ. ಡಿಸೆಂಬರ್.29ರಂದು ನಡೆಯಲಿರುವಂತ ಚುನಾವಣೆಯಲ್ಲಿ ಸಾಗರ ನಗರಸಭೆ ಸದಸ್ಯರಾದಂತ ಮಧುಮಾಲತಿ ಅಂಡ್ ಟೀಂ ಕೂಡ ಕಣದಲ್ಲಿದ್ದಾರೆ. ಸಾಮಾಜಿಕ ಸೇವೆಯ ಮನೋಭಾವದೊಂದಿಗೆ ಕಣಕ್ಕೆ ಇಳಿದಿರುವಂತ ಅವರು, ಮತಯಾಚನೆಯಲ್ಲಿ ತೊಡಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಗಣಪತಿ ಅರ್ಬನ್ ಕೋ ಆಪರೇಟೀವ್ ಬ್ಯಾಂಕ್ ನ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಡಿಸೆಂಬರ್.29ಕ್ಕೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಸಾಗರ ನಗರಸಭೆ ಸದಸ್ಯರಾದಂತ ಮಧು ಮಾಲತಿ, ಪ್ರೇಮ ಕಿರಣ್ ಸಿಂಗ್, ಬಿ.ಹೆಚ್ ಲಿಂಗರಾಜು ಹಾಗೂ ಸಾಗರ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ನಾಗರಾಜ.ಎಂ.ಹೆಚ್ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
ಬ್ಯಾಂಕ್ ಶ್ರೇಯೋಭಿವೃದ್ಧಿ, ಸದಸ್ಯರ ಹಿತ ಕಾಪಾಡುವುದೇ ನಮ್ಮ ಪಣ
ಸಾಮಾನ್ಯ ವರ್ಗ, ಮಹಿಳಾ ಮೀಸಲಾತಿಯ ಅಡಿಯಲ್ಲಿ ಸ್ಪರ್ಧೆಯಲ್ಲಿರುವಂತ ಈ ಟೀಂ, ಸಾಮಾಜಿಕ ಕಾರ್ಯವನ್ನು ಮಾಡುವ ದೃಷ್ಟಿಯಿಂದ ಕಣದಲ್ಲಿದ್ದೇವೆ. ಗಣಪತಿ ಬ್ಯಾಂಕ್ ನ ಸದಸ್ಯರು ತಮಗೆ ಮತ ಹಾಕಿ, ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಮಧು ಮಾಲತಿ ಅಂಡ್ ಟೀಂ ತಮ್ಮ ಪರಿಚಿತ ಸದಸ್ಯರು ಸೇರಿದಂತೆ ಇತರರ ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಿದ್ದಾರೆ. ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಸದಸ್ಯರ ಹಿತ ಕಾಯುವ ಎಲ್ಲಾ ಕೆಲಸ ಮಾಡುವ ಆಶಯ ಹೊಂದಿರುವಂತ ಈ ತಂಡಕ್ಕೆ ಸದಸ್ಯರ ಕೃಪಾ ಕಟಾಕ್ಷವನ್ನು ತೋರುತ್ತಾರಾ? ಜಯದ ಸರಮಾನೆಯನ್ನು ಧರಿಸುತ್ತಾರ ಅಂತ ಕಾದು ನೋಡಬೇಕಿದೆ.
ಹೀಗಿದೆ ಮಧು ಮಾಲತಿ ಅಂಡ್ ಟೀಂ ಚುನಾವಣಾ ಕ್ರಮ ಸಂಖ್ಯೆ ಮತ್ತು ಗುರುತು
ಸಾಮಾನ್ಯ ವರ್ಗದಿಂದ ಕ್ರಮ ಸಂಖ್ಯೆ 14ರಲ್ಲಿ ಸಾಗರ ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾಗರಾಜ ಎಂ.ಹೆಚ್(ಟೇಬಲ್ ಲ್ಯಾಂಪ್ ಗುರುತು) ಕಣದಲ್ಲಿದ್ದಾರೆ. ಕ್ರಮ ಸಂಖ್ಯೆ 18ರಲ್ಲಿ ಮಹಿಳಾ ಮೀಸಲು ವರ್ಗದಿಂದ ನಗರಸಭಾ ಸದಸ್ಯೆ ಪ್ರೇಮಾ ಕಿರಣ್ ಸಿಂಗ್( ಮಿಕ್ಸಿ ಗುರುತು) ಕಣದಲ್ಲಿದ್ದರೇ, ಕ್ರಮ ಸಂಖ್ಯೆ 20ರಲ್ಲಿ ಮಹಿಳಾ ಮೀಸಲು ವರ್ಗದಿಂದ ನಗರಸಭಾ ಸದಸ್ಯೆ ಮಧುಮಾಲತಿ ಕಲ್ಲಪ್ಪ ( ಕುಡಿಕೆ ಗುರುತು) ಅವರಿದ್ದಾರೆ. ಕ್ರಮ ಸಂಖ್ಯೆ 25ರಲ್ಲಿ ಸಾಮಾನ್ಯ ವರ್ಗದಿಂದ ನಗರಸಭಾ ಸದಸ್ಯ ಬಿ.ಹೆಚ್ ಲಿಂಗರಾಜು ( ಗ್ಯಾಸ್ ಸ್ಟೌವ್ ಗುರುತು) ಕಣಕ್ಕೆ ಇಳಿದಿದ್ದಾರೆ.
ಮತದಾನ ಯಾವಾಗ?
ಅಂದಹಾಗೇ ದಿನಾಂಕ 29-12-2024ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಸಾಗರದ ವಿನೋಬನಗರದಲ್ಲಿರುವಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಯಲಿದೆ. ತಪ್ಪದೇ ಮತದಾರರು ಭಾಗಿಯಾಗಿ, ನಿಮ್ಮ ಅಮೂಲ್ಯ ಮತವನ್ನು ಚಲಾಯಿಸೋದು ಮರೆಯಬೇಡಿ ಅನ್ನೋದು ಕನ್ನಡ ನ್ಯೂಸ್ ನೌ ಮನವಿ ಕೂಡ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಡಿ.27, 28, 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ವಿಶ್ವ ಹವ್ಯಕ ಮಹಾ ಸಮ್ಮೇಳನ’ ಆಯೋಜನೆ