ಕಲಬುರ್ಗಿ: ಜಿಲ್ಲೆಯ ಪ್ರಸಿದ್ಧ ದೇಗುಲಗಳಲ್ಲಿ ಒಂದು ಗಾಣಗಾಪುರದ ದತ್ತ ದೇಗುಲ. ಈ ದೇವಾಲಯದ ಅರ್ಚಕರ ಗುಂಪಿನ ನಡುವೆ ಮಾರಾಮಾರಿಯೇ ನಡೆದಿದೆ. ಅದು ದೇವಾಲಯದ ಗರ್ಭಗುಡಿಯ ಎದುರಿಗೆ.
ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದಂತ ದೇವಲಗಾಣಗಾಪುರದ ದತ್ತಾತ್ರೆಯ ಮಹಾರಾಜರ ದೇವಸ್ಥಾನದ ಅರ್ಚಕರ ನಡುವೆ ಮಾರಾಮಾರಿಯಾಗಿದೆ.
ಗಾಣಾಗಾಪುರದ ದತ್ತ ದೇಗುಲದ ಅರ್ಚಕರಾದಂತ ಕಿರಣ ಪೂಜಾರಿ ಹಾಗೂ ವಲ್ಲಭ ಪೂಜಾರಿ ನಡುವೆ ದೇವಾಲಯದ ಗರ್ಭಗುಡಿಯ ಮುಂದೆಯೇ ಹೊಡೆದಾಡಿಕೊಂಡಿದ್ದಾರೆ.
ಈ ಹೊಡೆದಾಟದ ದೃಶ್ಯವು ದೇವಾಲಯದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪರಸ್ಪರ ಕೈಕೈ ಮಿಲಾಯಿಸಿಕೊಂಡಿರೋದು ವೀಡಿಯೋ ದೃಶ್ಯಾವಳಿಯಲ್ಲಿ ಕಾಣಬಹುದಾಗಿದೆ.
ಗಾಣಗಾಪುರ ದತ್ತ ದೇಗುಲದ ಅರ್ಚಕರ ಮಾರಾಮಾರಿ ವೀಡಿಯೋ ವೈರಲ್ ಆಗುತ್ತಿದ್ದಂತೇ, ಈ ಸಂಬಂಧ ಗಾಣಗಾಪುರದ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಣಗಾಪುರ ದತ್ತ ದೇಗುಲದ ಅರ್ಚಕರ ಮಾರಾಮಾರಿ– ಅಫಜಲಪುರ ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ದೇವಲಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನ ಅರ್ಚಕರಾದ ಕಿರಣ ಪೂಜಾರಿ ಹಾಗೂ ವಲ್ಲಭ ಪೂಜಾರಿ ವಿರುದ್ಧ ದೇವಲ ಗಾಣಗಾಪುರದ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.#kalaburgi pic.twitter.com/VX504YXxL4
— Prajavani (@prajavani) November 17, 2024
ಕಾಂಗ್ರೆಸ್ ನಲ್ಲೂ ‘ಕಿಂಡರ್ ಗಾರ್ಡನ್’ ಪದ್ಧತಿ ಇದೆ : ಸಚಿವ ಸ್ಥಾನದ ಕುರಿತು ಶಾಸಕ ನರೇಂದ್ರ ಸ್ವಾಮಿ ಅಸಮಾಧಾನ
BREAKING : ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಕ್ರಿಕೇಟರ್ ಸೂರ್ಯ ಕುಮಾರ ಯಾದವ್ ಭೇಟಿ, ಪೂಜೆ ಸಲ್ಲಿಕೆ