Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ‘ಪ್ರೇಮಿಗಳ ದಿನಾಚರಣೆ’ ಹಿನ್ನೆಲೆ ಫೆ.14 ರಂದು ನಂದಿ ಗಿರಿಧಾಮ ಬಂದ್

06/02/2026 4:54 PM

BREAKING : ಇಸ್ಲಾಮಾಬಾದ್’ನಲ್ಲಿ ಶಿಯಾ ಮಸೀದಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ ; ಕನಿಷ್ಠ 24 ಮಂದಿ ಸಾವು, 101 ಜನರಿಗೆ ಗಾಯ

06/02/2026 4:50 PM

BREAKING : ಪಾಕ್ ಇಸ್ಲಾಮಾಬಾದ್’ನಲ್ಲಿ ಶಿಯಾ ಮಸೀದಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ ; 31 ಮಂದಿ ಸಾವು, 169ಕ್ಕೂ ಹೆಚ್ಚು ಜನರಿಗೆ ಗಾಯ

06/02/2026 4:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಿ ರಾಮ್ ಜಿ ಕಾಯ್ದೆ : ನ್ಯಾಯ ಸಿಗವವರೆಗೂ ಹೋರಾಟ ನಿಲ್ಲಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್
KARNATAKA

ಜಿ ರಾಮ್ ಜಿ ಕಾಯ್ದೆ : ನ್ಯಾಯ ಸಿಗವವರೆಗೂ ಹೋರಾಟ ನಿಲ್ಲಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್

By kannadanewsnow0916/01/2026 7:56 PM

ಮಂಡ್ಯ : ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಹೊರಟಿರುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಹಿಂಪಡೆದು, ಹಿಂದಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಮುಂದುವರೆಸುವವರೆಗೂ ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಬೋರನದೊಡ್ಡಿ, ನಿಡಘಟ್ಟ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡಿರುವ ನೂತನ ಮಳಿಗೆಗಳನ್ನು ಉದ್ಘಾಟನೆ ಮಾಡಿ ಶುಕ್ರವಾರ ಮಾತನಾಡಿದರು.

ಗ್ರಾಮೀಣ ಪ್ರದೇಶದಿಂದ ನಗರದತ್ತ ಕೃಷಿ ಕೂಲಿ ಕಾರ್ಮಿಕರು ವಲಸೆ ತಡೆಯುವುದು, ಸಮಾನ ಕೂಲಿ, ಆರ್ಥಿಕ ಚೈತನ್ಯದಿಂದ ಗ್ರಾಮ ಸ್ವರಾಜ್ಯ ಕಾಣುವ ಉದ್ದೇಶದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸಿದ್ದರು. ಈ ಯೋಜನೆಯಿಂದಾಗಿ ಸಾವಿರಾರು ಕೆರೆ ಕಟ್ಟೆ, ರಸ್ತೆ, ಚರಂಡಿ, ಕಾಲುವೆಗಳು, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಕೃಷಿ ಚಟುವಟಿಕೆಗಳಿಗೂ ಕಾಯ್ದೆ ಅನುಕೂಲವಾಗುತ್ತಿತ್ತು ಎಂದರು.

ಸ್ಥಳೀಯ ಪಂಚಾಯಿತಿಗಳಲ್ಲಿ ತುರ್ತಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ಪಡೆಯಬಹುದಿತ್ತು. ಈ ನೂತನ ಯೋಜನೆಯಿಂದ ದೆಹಲಿಯಲ್ಲಿ ಅನುಮೋದನೆ ಪಡೆಯುವ ಹಾಗೆ ಯೋಜನೆ ಜಾರಿಯಾಗುತ್ತಿದ್ದು, ಒಟ್ಟಾರೆ ಗ್ರಾಮೀಣಾಭಿವೃದ್ಧಿಯಲ್ಲಿ ನರೇಗಾ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ನರೇಗಾ ಯೋಜನೆಯ ಆಶಯಗಳಿಗೆ ಜಿ ರಾಮ್ ಜಿ ಯೋಜನೆ ತದ್ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಶೇ.60:40 ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡಬೇಕು ಎಂಬ ನಿಯಮವನ್ನು ಸೇರಿಸಲಾಗಿದೆ. ಆರ್ಥಿಕ ಹಿನ್ನಡೆಯಲ್ಲಿರುವ ರಾಜ್ಯಗಳ ಬಳಿ ಶೇ.40 ರಷ್ಟು ಅನುದಾನವಿಲ್ಲದೆ, ಕೂಲಿ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗುತ್ತದೆ. ಇದರಿಂದಾಗಿ ಗ್ರಾಮೀಣಾಭಿವೃದ್ಧಿಯೂ ಸಹ ಕುಂಠಿತವಾಗಲಿದೆ. ಈ ಹಿಂದೆ ಗುತ್ತಿಗೆದಾರರಿಗೆ ನರೇಗಾ ಯೋಜನೆಯಲ್ಲಿ ನಿಷೇಧಿಸಲಾಗಿತ್ತು. ಆದರೆ ಈಗ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡಲಾಗಿದ್ದು, ಉಳ್ಳವರಿಗೆ ಅನುಕೂಲ ಮಾಡುವ ಯೋಜನೆ ಇದಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ವಿಚಾರವಾಗಿ ರಾಜ್ಯ ಸರ್ಕಾರ ವಿಶೇಷ ಜಂಟಿ ಅಧಿವೇಶನವನ್ನು ನಡೆಸುತ್ತಿದ್ದು, ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು. ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ 10 ಕಿ.ಮೀ ಪಥ ಸಂಚಲನವನ್ನು ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ಜನರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದರು.

ನಂತರ ನಿಡಘಟ್ಟ ಗ್ರಾಪಂ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಡಘಟ್ಟ ಗ್ರಾಮ ಪಂಚಾಯಿತಿಯ ಅನುದಾನದಿಂದ ವಿಕಲಚೇತನರಿಗೆ ಸಹಾಯಧನದ ಚೆಕ್ ಮತ್ತು ಜೀತ ವಿಮುಕ್ತಿಯಾದವರಿಗೆ ನನ್ನ ಗುರುತು ಪ್ರಮಾಣ ಪತ್ರಗಳನ್ನು ಶಾಸಕ ಕೆ.ಎಂ.ಉದಯ್ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಗ್ರಾಪಂ ಅಧ್ಯಕ್ಷೆ ಉಮಾ, ಸದಸ್ಯರಾದ ಮಹೇಶ್, ಮಂಚಶೆಟ್ಟಿ, ಉದುಸ್, ಪವಿತ್ರ, ರಾಜಣ್ಣ, ಚಂದ್ರ, ಮುಖಂಡರಾದ ಮಹೇಶ್, ಸತೀಶ್, ಭೀಮಣ್ಣ, ಕೆ.ಎಂ.ರವಿ, ಪಿಡಿಒ ಶೀಲಾ ಸೇರಿದಂತೆ ಇತರರಿದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

BREAKING: ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡ ‘ಗ್ರಾಮ ಪಂಚಾಯಿತಿ’ಗಳಿಗೆ ‘ಆಡಳಿತಾಧಿಕಾರಿ’ ನೇಮಿಸಿ ಸರ್ಕಾರ ಆದೇಶ

SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!

Share. Facebook Twitter LinkedIn WhatsApp Email

Related Posts

BIG NEWS : ‘ಪ್ರೇಮಿಗಳ ದಿನಾಚರಣೆ’ ಹಿನ್ನೆಲೆ ಫೆ.14 ರಂದು ನಂದಿ ಗಿರಿಧಾಮ ಬಂದ್

06/02/2026 4:54 PM1 Min Read

ಚಿಕ್ಕಮಗಳೂರಲ್ಲಿ ಘೋರ ದುರಂತ : ನದಿಯ ದಡದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ವ್ಯಕ್ತಿ ಸಾವು!

06/02/2026 4:35 PM1 Min Read

BREAKING: ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಕಾಂಗ್ರೆಸ್ ನಾಯಕನ ‘ಧಮ್ಕಿ ಆಡಿಯೋ’ ವೈರಲ್: ‘BLO ಅಧಿಕಾರಿ’ಗೆ ಬೆದರಿಕೆ

06/02/2026 4:25 PM1 Min Read
Recent News

BIG NEWS : ‘ಪ್ರೇಮಿಗಳ ದಿನಾಚರಣೆ’ ಹಿನ್ನೆಲೆ ಫೆ.14 ರಂದು ನಂದಿ ಗಿರಿಧಾಮ ಬಂದ್

06/02/2026 4:54 PM

BREAKING : ಇಸ್ಲಾಮಾಬಾದ್’ನಲ್ಲಿ ಶಿಯಾ ಮಸೀದಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ ; ಕನಿಷ್ಠ 24 ಮಂದಿ ಸಾವು, 101 ಜನರಿಗೆ ಗಾಯ

06/02/2026 4:50 PM

BREAKING : ಪಾಕ್ ಇಸ್ಲಾಮಾಬಾದ್’ನಲ್ಲಿ ಶಿಯಾ ಮಸೀದಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ ; 31 ಮಂದಿ ಸಾವು, 169ಕ್ಕೂ ಹೆಚ್ಚು ಜನರಿಗೆ ಗಾಯ

06/02/2026 4:46 PM

ಚಿಕ್ಕಮಗಳೂರಲ್ಲಿ ಘೋರ ದುರಂತ : ನದಿಯ ದಡದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ವ್ಯಕ್ತಿ ಸಾವು!

06/02/2026 4:35 PM
State News
KARNATAKA

BIG NEWS : ‘ಪ್ರೇಮಿಗಳ ದಿನಾಚರಣೆ’ ಹಿನ್ನೆಲೆ ಫೆ.14 ರಂದು ನಂದಿ ಗಿರಿಧಾಮ ಬಂದ್

By kannadanewsnow0506/02/2026 4:54 PM KARNATAKA 1 Min Read

ಚಿಕ್ಕಬಳ್ಳಾಪುರ : ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ಎಲ್ಲೆಡೆ ಆಚರಿಸಲಾಗುತ್ತದೆ. ಆದರೆ ಪ್ರೇಮಿಗಳಿಗೆ ಶಾಕ್ ಎದುರಾಗಿದ್ದು, ಫೆಬ್ರವರಿ 14ರಂದು ಚಿಕ್ಕಬಳ್ಳಾಪುರ…

ಚಿಕ್ಕಮಗಳೂರಲ್ಲಿ ಘೋರ ದುರಂತ : ನದಿಯ ದಡದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ವ್ಯಕ್ತಿ ಸಾವು!

06/02/2026 4:35 PM

BREAKING: ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಕಾಂಗ್ರೆಸ್ ನಾಯಕನ ‘ಧಮ್ಕಿ ಆಡಿಯೋ’ ವೈರಲ್: ‘BLO ಅಧಿಕಾರಿ’ಗೆ ಬೆದರಿಕೆ

06/02/2026 4:25 PM

BREAKING : ಉದ್ಯಮಿ ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ : ಸ್ಯಾಂಡಲ್ ವುಡ್ ನಟಿಯ ಸ್ನೇಹಿತ ಅರೆಸ್ಟ್!

06/02/2026 4:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.