ಬೆಂಗಳೂರು: ಹೈಕೋರ್ಟ್ ಸಾರಿಗೆ ನೌಕರರ ಮುಷ್ಕರಕ್ಕೆ ಮತ್ತೆ ಎರಡು ದಿನ ಬ್ರೇಕ್ ಹಾಕಿದ ನಂತ್ರ, ಮುಷ್ಕರ ಮುಂದುವರೆಸಿದ್ರೇ ಸರ್ಕಾರ ಎಸ್ಮಾ ಜಾರಿಗೊಳಿಸಬಹುದು ಎಂಬುದಾಗಿ ಎಚ್ಚರಿಸಿತ್ತು. ಈ ಬೆನ್ನಲ್ಲೇ ಮುಷ್ಕರ ಮುಂದೂಡಿಕೆ ಮಾಡಿರುವಂತ ಸಾರಿಗೆ ಸಂಘಟನೆಗಳು, ಕೂಡಲೇ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಕೋರಿದ್ದರು. ಈ ಹಿನ್ನಲೆಯಲ್ಲಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದು, 18,434 ಬಸ್ಸುಗಳಲ್ಲಿ 11,752 ರಸ್ತೆಗೆ ಇಳಿದಿವೆ.
ಈ ಕುರಿತಂತೆ ಕೆಎಸ್ ಆರ್ ಟಿಸಿ ಮಾಹಿತಿ ನೀಡಿದ್ದು, 5,918 ಕೆ ಎಸ್ ಆರ್ ಟಿಸಿ ಬಸ್ಸುಗಳಲ್ಲಿ 2572 ಬಸ್ಸುಗಳು ಸಂಚಾರ ಆರಂಭಿಸಿದ್ದಾವೆ. ಬಿಎಂಟಿಸಿಯ 6014 ಬಸ್ಸುಗಳಲ್ಲಿ 6010 ಸಂಚಾರ ಆರಂಭಿಸಿವೆ. ಎನ್ ಡಬ್ಯೂಕೆಆರ್ ಟಿಸಿ 3515 ಬಸ್ಸುಗಳಲ್ಲಿ 2258 ಸಂಚಾರ ಆರಂಭಿಸಿದ್ದರೇ, ಕೆಕೆಆರ್ ಟಿಸಿಯ 2987 ಬಸ್ಸುಗಳಲ್ಲಿ 912 ಆರಂಭಿಸಿವೆ ಎಂದಿದೆ.
ಒಟ್ಟಾರೆಯಾಗಿ ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆಯ ಬಳಿಕ ಹಂತ ಹಂತವಾಗಿ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಹೀಗಾಗಿ ರಾಜ್ಯಾಧ್ಯಂತ ನಿಗದಿಗೊಂಡಿದ್ದಂತ ಒಟ್ಟು 18,434 ಸಾರಿಗೆ ಬಸ್ಸುಗಳಲ್ಲಿ 11,752 ಸಂಚಾರ ಆರಂಭಿಸಿವೆ. ಇದರ ಪ್ರಮಾಣ ಶೇ.63.8 ಆಗಿದೆ ಎಂಬುದಾಗಿ ಮಾಹಿತಿ ನೀಡಿದೆ.
ಸಾಗರದ ಆಸ್ಪತ್ರೆಯ ಜನರೇಟ್ ಕದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ
BREAKING: ಕಾಂಗ್ರೆಸ್ ಕಾರ್ಯಕರ್ತರಿಂದಲೇ ‘ಕಾಂಗ್ರೆಸ್ MLC ಶರಣಗೌಡ ಬಯ್ಯಾಪುರ’ ಮೇಲೆ ಹಲ್ಲೆಗೆ ಯತ್ನ