ಬೆಂಗಳೂರು: ನಾಳೆಯಿಂದ ಆಗಸ್ಟ್.22ರವರೆಗೆ ಕರ್ನಾಟಕ ವಿಧಾನ ಮಂಡಲದ ಕಲಾಪ ನಡೆಯಲಿದೆ. ನಾಳೆ ಬೆಳಗ್ಗೆ 11ಕ್ಕೆ ವಿಧಾನಸಭೆ, ವಿಧಾನ ಪರಿಷತ್ ಕಲಾಪ ಪ್ರಾರಂಭಗೊಳ್ಳಲಿದೆ.
ನಾಳೆಯಿಂದ ಆಗಸ್ಟ್.33ರವರೆಗೆ ವಿಧಾನ ಮಂಡಲದ ಅಧಿವೇಶನ ನಡೆಯಲಿದೆ. ನಾಳೆ ಬೆಳಗ್ಗೆ 11ಕ್ಕೆ ವಿಧಾನಸಭೆ, ಪರಿಷತ್ ಕಲಾಪ ಪ್ರಾರಂಭವಾಗಲಿದೆ.
ಬಿಜೆಪಿ ಶಾಸಕರ ಅಮಾನತನ್ನು ಸ್ಪೀಕರ್ ಹಿಂಪಡೆದಿದ್ದಾರೆ. ಹೀಗಾಗಿ ಕಲಾಪದ ಪ್ರಾರಂಭದಲ್ಲಿ ಸದನವು ಸ್ಪೀಕರ್ ನಿರ್ಧಾರ ಸ್ವೀಕರಿಸಲಿದೆ. ಇದೇ ಸಂದರ್ಭದಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಕಾಲ್ತುಳಿತ ದುರಂತದ ಬಗ್ಗೆಯೂ ಚರ್ಚೆ ನಡೆಯಲಿದೆ. ಅಲ್ಲದೇ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.
ಇನ್ನೂ 25ಕ್ಕೂ ಹೆಚ್ಚು ವಿಧೇಯಕಗಳು ಈ ಬಾರಿಯ ವಿಧಾನ ಮಂಡಲದ ಕಲಾಪದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಆ ಬಗ್ಗೆ ನಾಳೆಯಿಂದ ಆರಂಭವಾಗುವಂತ ಕಲಾಪದ ಬಳಿಕ ಖಚಿತ ಮಾಹಿತಿ ಲಭ್ಯವಾಗಲಿದೆ.
ಮೆಟ್ರೋ ಯೋಜನೆ ಅನುದಾನದಲ್ಲಿ ಶೇ.80ರಷ್ಟು ನಮ್ಮದು, ಬಿಜೆಪಿಯದು ಶೇ.20 ಮಾತ್ರ: ಡಿಸಿಎಂ ಡಿಕೆಶಿ
BREAKING: ಮೋದಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಪ್ಲ್ಯಾನ್ ಮಾಡಿದ್ದ NSUI ಮುಖಂಡರಿಗೆ ಪೊಲೀಸರಿಂದ ಗೃಹ ಬಂಧನ