ಬೆಂಗಳೂರು: ನಗರದ ಆರ್‌ವಿ ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ಸೋಮವಾರ, ಆಗಸ್ಟ್ 11, 2025 ರಂದು ಬೆಳಿಗ್ಗೆಯಿಂದ ಪ್ರಾರಂಭವಾಗಲಿದೆ.
ಈ ಮಾರ್ಗದ ರೈಲು ಸಂಚಾರದ ವೇಳಾಪಟ್ಟಿಯನ್ನು ಹೀಗಾಗಿ ನಿಗದಿಪಡಿಸಲಾಗಿದೆ:
ಸೋಮವಾರದಿಂದ ಶನಿವಾರದವರೆಗೆ: ವಾರದ ಎಲ್ಲಾ ದಿನಗಳಲ್ಲಿ, ಆರ್.ವಿ. ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಬೆಳಿಗ್ಗೆ 6.30 ಕ್ಕೆ ರೈಲುಗಳು ಪ್ರಾರಂಭವಾಗುತ್ತವೆ. ಪ್ರತಿ ನಿಲ್ದಾಣದಲ್ಲಿ ನಿಲುಗಡೆ ಸಹಿತ ಈ ವಿಭಾಗದ ಒಟ್ಟು ಪ್ರಯಾಣ ಸಮಯವು ಒಂದು ದಿಕ್ಕಿನಲ್ಲಿ ಸುಮಾರು 35 ನಿಮಿಷಗಳಾಗಿರುತ್ತದೆ. ಒಟ್ಟು 16 ನಿಲ್ದಾಣಗಳಿವೆ, ಇದರಲ್ಲಿ ಎರಡು ಟರ್ಮಿನಲ್‌ಗಳು ಸೇರಿವೆ. ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 11.15 ಕ್ಕೆ ಮತ್ತು ಆರ್.ವಿ.ರೋಡ್ ಇಂಟರ್‌ಚೇಂಜ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 11.50 ಕ್ಕೆ ಹೊರಡುತ್ತದೆ. ಬೆಳಿಗ್ಗೆ 6.30 ರಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಹಾಗೂ ಬೆಳಿಗ್ಗೆ 7.10 ರಿಂದ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಪ್ರತಿ 25 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ. ರಾತ್ರಿ 10.00 ಗಂಟೆಯ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗುತ್ತದೆ.
ಭಾನುವಾರ:
ಭಾನುವಾರಗಳಲ್ಲಿ ರೈಲು ಸೇವೆಗಳು ಬೆಳಿಗ್ಗೆ 6.30 ಬದಲಾಗಿ 7.00 ಕ್ಕೆ ಪ್ರಾರಂಭವಾಗುತ್ತವೆ. ಅವಧಿ ಅದೇ ರೀತಿಯೇ ಇರುತ್ತದೆ.
ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣದ ದರ ರೂ.60/-. ಟೋಕನ್‌ಗಳು, NCMC ಕಾರ್ಡ್‌ಗಳು, ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್‌ಗಳು, QR ಟಿಕೆಟ್‌ಗಳು ಎಂದಿನಂತೆಯೇ ಲಭ್ಯವಿದ್ದು, ಹಾಲಿ ಮಾರ್ಗಗಳೊಂದಿಗೆ ನಯವಾಗಿ ಕಾರ್ಯನಿರ್ವಹಿಸಲಿವೆ. ಮತ್ತು ಯಾವುದೇ ಬದಲಾವಣೆ ಇರುವುದಿಲ್ಲ. ಐಫೋನ್ ಬಳಸುವ ಬಿಎಂಆರ್‌ಸಿಎಲ್ ಪ್ರಯಾಣಿಕರು 2025ರ ಆಗಸ್ಟ್ 11ರಿಂದ ಆಪಲ್ ಸ್ಟೋರ್‌ನಿಂದ ನಮ್ಮ ಮೆಟ್ರೋ ಅಧಿಕೃತ ಆಪ್‌ನ್ನು ಡೌನ್‌ಲೋಡ್ ಮಾಡಿಕೊಂಡು, QR ಟಿಕೆಟ್‌ಗಳನ್ನು ಖರೀದಿಸಲು ಹಾಗೂ ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಬಳಸಿಕೊಳ್ಳಬಹುದು.
ಹೆಚ್ಚು ರೈಲು ಸೆಟ್‌ಗಳನ್ನು ಸೇವೆಗೆ ಸೇರಿಸುತ್ತಿದ್ದಂತೆ ರೈಲು ಸಂಚಾರದ ಅವಧಿಯನ್ನು ಹೆಚ್ಚಿಸಲಾಗುವುದು.
ಅಮೆರಿಕ ನೆಲದಿಂದ ಭಾರತಕ್ಕೆ ಪರಮಾಣು ಸಂಘರ್ಷದ ಬೆದರಿಕೆ ಹಾಕಿದ ಪಾಕ್ ಸೇನಾ ಮುಖ್ಯಸ್ಥ: ವರದಿ
BIG NEWS: ‘SSLC ಪರೀಕ್ಷೆ’ಯಲ್ಲಿ ಕಡಿಮೆ ಫಲಿತಾಂಶ: ‘ಶಾಲೆ’ಗಳ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರ ಆದೇಶ