ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ತಾಲ್ಲೂಕಿನ 19 ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಸರ್ಕಾರ ಘೋಷಿಸಿದೆ. ಈ ನೀತಿಯಡಿ ಅಭಿವೃದ್ದಿಗೆ ಅನುದಾನ ಬಳಕೆಗೂ ಸೂಚಿಸಿದೆ.
ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ರಾಜ್ಯದ ಒಟ್ಟು 1275 ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದೆ. ಇವುಗಳಲ್ಲಿ ಶಿವಮೊಗ್ಗ ಜಿಲ್ಲೆಯ 64 ಸ್ಥಳಗಳು ಸೇರಿದ್ದರೇ, ಸಾಗರ ತಾಲ್ಲೂಕಿನ 15, ಸೊರಬ ತಾಲ್ಲೂಕಿನ 4 ಸೇರಿದ್ದಾವೆ. ಇವುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಅನುದಾನ ಲಭ್ಯತೆಯ ಅನುಸಾರ ವಿವರವಾದಂತ ಕ್ರಿಯಾಯೋಜನೆಯನ್ನು ರೂಪಿಸೋದಕ್ಕೆ ತಿಳಿಸಿದೆ.
ಅಂದಾಜು ಪಟ್ಟಿ, ನಕ್ಷೆಗಳನ್ನು ಸಿದ್ಧಪಡಿಸಿ, ತಾಂತ್ರಿಕ ಪರಿಶೀಲನೆಗೆ ಒಳಪಡಿಸಿ, ಟೆಂಡರ್ ಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯುವಂತೆಯೂ ಸೂಚಿಸಿದೆ.
ಹೀಗಿವೆ ಪ್ರವಾಸಿ ತಾಣಗಳಾಗಿ ಘೋಷಿಸಿದ ಸೊರಬದ ಸ್ಥಳಗಳು
- ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನ
- ಬಂಗಾರಧಾಮ
- ಕೈತಭೇಶ್ವರ ಕೋಟಿಪುರ ದೇವಸ್ಥಾನ
- ಗುಡವಿ ಪಕ್ಷಿಧಾಮ
ಹೀಗಿವೆ ಪ್ರವಾಸಿ ತಾಣಗಳಾಗಿ ಘೋಷಿಸಿದ ಸಾಗರ ತಾಲ್ಲೂಕಿನ ಸ್ಥಳಗಳು
- ಜೋಗ ಜಲಪಾತ
- ಸಿಗಂದೂರು ಚೌಡೇಶ್ವರಿ ದೇವಸ್ಥಾನ
- ವರದಹಳ್ಳಿ ಶ್ರೀ ಶೀಧರ ಸ್ವಾಮಿ ಆಶ್ರಮ
- ಬಳೆ ಪದ್ಮಾವತಿ ದೇವಸ್ಥಾನ ವಡಂಬೈಲು
- ಇಕ್ಕೇರಿ ಅಘೋರೇಶ್ವರ ದೇವಸ್ಥಾನ
- ಕಾನೂರು ಕೋಟೆ
- ಹೊನ್ನೆಮರಡು ಜಲಕ್ರೀಡೆ
- ದ್ವಿಮುಖ ಚಾಮುಂಡೇಶ್ವರಿ ದೇವಸ್ಥಾನ
- ಕೂಗಾರು ಭೀಮೇಶ್ವರ ದೇವಸ್ಥಾನ, ಸಾಗರ
- ಶ್ರೀ ಉಮಾ ಮಹೇಶ್ವರ ದೇವಸ್ಥಾನ, ಹೊಸಗುಂದ
- ವರದಾಮೂಲ, ವರದ ನದಿ ಜನ್ಮಸ್ಥಳ
- ಲಿಂಗನಮಕ್ಕಿ ಜಲಾಶಯ
- ನಾಡಕಲಸಿ ನೀಲಕಂಠೇಶ್ವರ ದೇವಸ್ಥಾನ
- ಹೆಗ್ಗೋಡು ನೀನಾಸಂ
- ಕೆಳದಿ ರಾಮೇಶ್ವರ ದೇವಸ್ಥಾನ
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ರಾಜ್ಯದ ‘1,275 ಸ್ಥಳ’ಗಳನ್ನು ‘ಪ್ರವಾಸಿ ತಾಣ’ಗಳಾಗಿ ಸರ್ಕಾರ ಘೋಷಣೆ
ಅಸ್ಪೃಶ್ಯತೆ ಇನ್ನೂ ಜೀವಂತವಾಗಿ ಇರುವುದು ನಾಗರೀಕ ಸಮಾಜಕ್ಕೆ ಶೋಭೆಯಲ್ಲ: ಮಂಡ್ಯ ಡಿಸಿ ಡಾ.ಕುಮಾರ