- ಉಮಾ
ಬೆಂಗಳೂರು: ಇಲಾಖೆಯ ನೌಕರರು ಮತ್ತು ಸಿಬ್ಬಂದಿಗಳು ಸ್ಥಿರ/ಚರಾಸ್ತಿಯನ್ನು ಖರೀದಿ/ಮಾರಾಟ ಮಾಡಲು ಅನುಮತಿ ಕೋರಿ ಸಲ್ಲಿಸಬೇಕಾದ ವಿವರ/ದಾಖಲೆಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ.
ಸಿಎಂ ವಿರುದ್ಧ ‘ಏಕವಚನ’ದಲ್ಲಿ ವಾಗ್ದಾಳಿ ವಿಚಾರ : ಸಂಸದ ಅನಂತ ಕುಮಾರ್ ಹೆಗ್ಡೆ ವಿರುದ್ಧ ‘ಸುಮೊಟೊ’ ಕೇಸ್ ದಾಖಲು
3 ತಿಂಗಳಲ್ಲಿ ತಿದ್ದುಪಡಿಯಾದ ‘ದತ್ತಿ ಕಾಯಿದೆ’ ಅಂಗೀಕಾರ : ಡಿಕೆ ಶಿವಕುಮಾರ್
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಪೊಲೀಸ್ ಪ್ರಧಾನ ಕಛೇರಿಯ ಸುತ್ತೋಲೆ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲಾಗಿದೆ. ಸದರಿ ಸುತ್ತೋಲೆಯಲ್ಲಿ ಇಲಾಖೆಯ ನೌಕರರು ಮತ್ತು ಸಿಬ್ಬಂದಿಗಳು ಸ್ಥಿರ/ಚರಾಸ್ತಿಯನ್ನು ಖರೀದಿ/ಮಾರಾಟ ಮಾಡಲು ಅನುಮತಿ ಕೋರಿ ಸಲ್ಲಿಸಬೇಕಾದ ವಿವರ/ ದಾಖಲೆಗಳ ಬಗ್ಗೆ ವಿವರಿಸಲಾಗಿದೆ. ಸದರಿ ಸುತ್ತೋಲೆಯ ಪ್ರತಿಯನ್ನು ಠಾಣೆಯ/ಕಛೇರಿಯ ನಾಮಫಲಕದಲ್ಲಿ ಆಳವಡಿಸಿ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ ಅಂತ ತಿಳಿಸಿದೆ.
ಇನ್ನೂ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ‘ಎ’ ಮತ್ತು ‘ಬಿ’ ದರ್ಜೆ ಅಧಿಕಾರಿಗಳು (ಐ.ಪಿ.ಎಸ್ ಅಧಿಕಾರಿಗಳನ್ನು ಹೊರತುಪಡಿಸಿ) ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಖರೀದಿಸಲು / ಮಾರಾಟ ಮಾಡಲು / ಉಡುಗೊರ ಪಡೆಯಲು | ಗೃಹ ನಿರ್ಮಾಣ ಮಾಡಲು ಅನುಮತಿ ಕೋರಿ ಮನವಿಗಳನ್ನು ಪೊಲೀಸ್ ಪ್ರಧಾನ ಕಛೇರಿಗೆ ಸಲ್ಲಿಸುತ್ತಿದ್ದು, ಸದರಿಯವರುಗಳು ಸಲ್ಲಿಸುತ್ತಿರುವ ಮನವಿ | ಪ್ರಸ್ತಾವನೆಗಳನ್ನು ಪರಿಶೀಲಿಸಲಾಗಿ, ಸಲ್ಲಿಸುತ್ತಿರುವ ಮನವಿಗಳು ಅಪೂರ್ಣವಾಗಿದ್ದು, ಸಂಬಂಧಪಟ್ಟ ದಾಖಲೆಗಳನ್ನು ಮನವಿಯೊಂದಿಗೆ ಸಲ್ಲಿಸದಿರುವುದು ಕಂಡುಬಂದಿರುತ್ತದೆ. ಇದರಿಂದ ಅನಗತ್ಯ ವಿಳಂಬಕ್ಕೆ ಕಾರಣವಾಗಿರುತ್ತದೆ.
ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 2021, ದಿನಾಂಕ: 07/01/2021 ರ ನಿಯಮ 24 ರಂತೆ ಚರ, ಸ್ಥಿರ ಮತ್ತು ಬೆಲೆಬಾಳುವ ಸ್ವತ್ತು ಎಂಬುದರಡಿಯಲ್ಲಿ ಉಪ ನಿಯಮ (3) ರನ್ವಯ ಯಾರೇ ಸರ್ಕಾರಿ ನೌಕರನು ಅಥವಾ ಅವನ ಕುಟುಂಬದ ಯಾರೇ ಸದಸ್ಯನು ನಿಯಮಿಸಲಾದ ಪ್ರಾಧಿಕಾರಕ್ಕೆ ಮೊದಲೇ ತಿಳಿಸಿದ ಹೊರತು, ತನ್ನ ಸ್ವಂತ ಹೆಸರಿನಲ್ಲಾಗಲೀ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನ ಹೆಸರಿನಲ್ಲಾಗಲೀ ಗುತ್ತಿಗೆಯ, ಅಡಮಾನದ, ಖರೀದಿಯ, ಮಾರಾಟದ ಉಡುಗೊರೆಯ ಮೂಲಕ ಅಥವಾ ಅನ್ಯಥಾ ಯಾವುದೇ ಸ್ಥಿರ ಸ್ವತ್ತನ್ನು ಅರ್ಜಿಸತಕ್ಕದ್ದಲ್ಲ ಅಥವಾ ವಿಲೇ ಮಾಡತಕ್ಕದ್ದಲ್ಲ; ಪರಂತು ಒಬ್ಬ ಸರ್ಕಾರಿ ನೌಕರನು ಸಮರ್ಥನೀಯ ಕಾರಣಗಳಿಂದಾಗಿ ನಿಯಮಿತ ಪ್ರಾಧಿಕಾರಿಗೆ ಮೊದಲೇ ತಿಳಿಸದೇ ಯಾವುದೇ ಸ್ಥಿರ ಸ್ವತ್ತನ್ನು ಅರ್ಜಿಸಿದ್ದಲ್ಲಿ ಅಥವಾ ವಿಲೇ ಮಾಡಿದಲ್ಲಿ ಆತ ಅಂತಹ ವ್ಯವಹಾರ ಕೈಗೊಂಡ ಎರಡು ತಿಂಗಳ ಒಳಗಾಗಿ ವಿವರಗಳು ಹಾಗೂ ಪೂರಕ ದಾಖಲೆಗಳನ್ನು ಹಾಗೂ ಸಮರ್ಥನೀಯ ಕಾರಣಗಳೊಂದಿಗೆ ನಿಯಮಿತ ಪ್ರಾಧಿಕಾರಿಗೆ ವರದಿ ಮಾಡತಕ್ಕದ್ದು, ನಿಯಮಿತ ಪ್ರಾಧಿಕಾರಿಯು ಸರ್ಕಾರಿ ನೌಕರನು ನೀಡಿದ ಕಾರಣಗಳು ಅಂಗೀಕಾರ್ಹವೆಂದು ತೃಪ್ತಿಪಟ್ಟಲ್ಲಿ ಸರ್ಕಾರಿ ನೌಕರನು ಸಲ್ಲಿಸಿದ ದಾಖಲೆಗಳು ಹಾಗೂ ವಿವರಗಳನ್ನು ಪರಿಶೀಲಿಸಿ ಅಂತಹ ವ್ಯವಹರಣೆಯನ್ನು ಘಟನೋತ್ತರವಾಗಿ ಟಿಪ್ಪಣಿ ಮಾಡಿಕೊಳ್ಳಬಹುದು ಎಂದು ನಮೂದಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 2021 ರಲ್ಲಿ ವಿವರಿಸಿರುವಂತೆ ಸರ್ಕಾರಿ ನೌಕರನು ಅಥವಾ ಅವನ ಕುಟುಂಬದ ಯಾರೇ ಸದಸ್ಯನು ನಿಯಮಿಸಲಾದ ಪ್ರಾಧಿಕಾರಕ್ಕೆ ಮೊದಲೇ ತಿಳಿಸಿದ ಹೊರತು ಅಥವಾ ಸಮರ್ಥನೀಯ ಕಾರಣಗಳಿಂದಾಗಿ ನಿಯಮಿತ ಪ್ರಾಧಿಕಾರಿಗೆ ಮೊದಲೇ ತಿಳಿಸದೇ ಯಾವುದೇ ಸ್ಥಿರ ಸ್ವತ್ತನ್ನು ಅರ್ಜಿಸಿದ್ದಲ್ಲಿ ಅಥವಾ ವಿಲೇ ಮಾಡಿದಲ್ಲಿ ಆತ ಅಂತಹ ವ್ಯವಹಾರ ಕೈಗೊಂಡ ಎರಡು ತಿಂಗಳ ಒಳಗಾಗಿ ವಿವರಗಳು ಹಾಗೂ ಪೂರಕ ದಾಖಲೆಗಳನ್ನು ಹಾಗೂ ಸಮರ್ಥನೀಯ ಕಾರಣಗಳೊಂದಿಗೆ ನಿಯಮಿಸಿದ ಪ್ರಾಧಿಕಾರಿಗೆ ವರದಿ ಮಾಡದೇ ಆನಂತರದಲ್ಲಿ ಸಲ್ಲಿಸುವ ಅಧಿಕಾರಿಗಳ ವಿರುದ್ಧ ಕೆ.ಎಸ್.ಪಿ (ನಡತೆ) ನಿಯಮಗಳನ್ನು ಉಲ್ಲಂಗಿಸಿದ ಆರೋಪದಡಿ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.
ಆದ್ದರಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ‘ಎ’ ‘ಬಿ’ ಮತ್ತು ‘ಸಿ’ ದರ್ಜೆ ಅಧಿಕಾರಿಗಳು (ಐ.ಪಿ.ಎಸ್ ಅಧಿಕಾರಿಗಳನ್ನು ಹೊರತುಪಡಿಸಿ) ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಖರೀದಿಸಲು / ಮಾರಾಟ ಮಾಡಲು | ಗೃಹ ನಿರ್ಮಾಣ ಮಾಡಲು ಸಲ್ಲಿಸುವ ಮನವಿಗಳನ್ನು ಪರಿಶೀಲಿಸಿ ಟಿಪ್ಪಣೀಕರಿಸಿಕೊಳ್ಳಬೇಕಾಗಿರುವುದರಿಂದ ಈ ಕಛೇರಿಗೆ / ನಿಯಮಿಸಿದ ಪ್ರಾಧಿಕಾರಿಗಳಿಗೆ ಸಲ್ಲಿಸುವ ಮನವಿಯೊಂದಿಗೆ ಈ ಸುತ್ತೋಲೆ ಸಂದೇಶದೊಂದಿಗೆ ಲಗತ್ತಿಸಿರುವ ಅನುಬಂಧದ (ಎ.ಬಿ.ಸಿ) ಅನ್ವಯ (Annexure A.B.C) ಪರಿಶೀಲನಾ ಪಟ್ಟಿ (Check list) ಯಲ್ಲಿರುವ ವಿಷಯ/ಅಂಶಗಳನ್ವಯ ಪರಿಶೀಲಿಸಿ, ಭರ್ತಿಮಾಡಿ ಸಂಬಂಧಪಟ್ಟ ಎಲ್ಲಾ ಪೂರಕ ದಾಖಲೆಗಳೊಂದಿಗೆ ನಿಯಮಿಸಿದ ಪ್ರಾಧಿಕಾರಿಗಳಿಗೆ ಸಲ್ಲಿಸುವಂತೆ ತಮ್ಮ ಅಧೀನ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಲಾಗಿದೆ. (ಅವಶ್ಯಕವಿದ್ದಲ್ಲಿ ನಿಯಮಿಸಿದ ಪ್ರಾಧಿಕಾರಿಗಳು ಹೆಚ್ಚಿನ ಮಾಹಿತಿ/ದಾಖಲೆಗಳನ್ನು ಪಡೆದು ಪರಿಶೀಲಿಸುವ ಷರತ್ತುಗೊಳಪಟ್ಟಿರುತ್ತದೆ. ಅಂತ ತಿಳಿಸಿದೆ.
ಬೆಂಗಳೂರಿನಲ್ಲಿ ಬಾಲಕಿ ಮೇಲೆ ‘ಮಲತಾಯಿ’ ಕ್ರೌರ್ಯ: ಕಬ್ಬಿಣ್ಣದಿಂದ ಬರೆ ಹಾಕಿ ವಿಕೃತಿ!