ಬೆಂಗಳೂರು: ಸಾರಿಗೆ ಬಸ್ಸುಗಳು ಅಪಘಾತ, ಅವಘಡದಂತ ಸಂದರ್ಭದಲ್ಲಿ ರಿಪೇರಿ ಮಾಡೋದು ಕಷ್ಟವಾಗಿತ್ತು. ಇನ್ಮುಂದೆ ಇದು ಆಗೋದಿಲ್ಲ. ಕಾರಣ ಅಪಘಾತ ಹಾಗೂ ಅವಘಡ ಉಂಟಾದ ಸಂದರ್ಭದಲ್ಲಿ ತುರ್ತು ಸ್ಪಂದಿಸಲು ನೆರವಾಗುವಂತ ಅಪಘಾತ ತುರ್ತು ಸ್ಪಂದನ ವಾಹನಗಳಿಗೆ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಇಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಅಪಘಾತ ಹಾಗೂ ಅವಘಡ ಉಂಟಾದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಲು “ಅಪಘಾತ ತುರ್ತು ಸ್ಪಂದನ ವಾಹನ” ಗಳಿಗೆ (Accident Emergency Response Vehicle) ಚಾಲನೆ ನೀಡಿದರು. ಈ ವಾಹನಗಳು ನಿಗಮದ ಬಸ್ಸುಗಳು ಮಾರ್ಗ ಮಧ್ಯೆ ಅಪಘಾತ/ ಅವಘಡಕ್ಕೀಡಾಗಿ (ಬ್ರೇಕ್ ಡೌನ್) ದುರಸ್ಥಿಗೊಂಡಲ್ಲಿ ಸದರಿ ವಾಹನವನ್ನು ಶೀಘ್ರವಾಗಿ ರಿಪೇರಿಗೊಳಿಸುವ ಸಲುವಾಗಿ ಮೊಬೈಲ್ ವರ್ಕಷಾಪ್ ಮಾದರಿಯಲ್ಲಿ ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
- ಈ ಎರಡು ವಾಹನಗಳನ್ನು ಬೆಂಗಳೂರು ಹಾಗೂ ಮೈಸೂರು ಕೇಂದ್ರ ಸ್ಥಳಗಳಲ್ಲಿ ನಿಯೋಜಿಸಲಾಗುವುದು. ಇದರಿಂದ ಬೆಂಗಳೂರು ಸುತ್ತಮುತ್ತ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಪ್ರದೇಶದಲ್ಲಿ ಉಂಟಾಗುವ ಅಪಘಾತ/ಅವಘಢಗಳನ್ನು ಶೀಘ್ರದಲ್ಲಿ ಸ್ಪಂದಿಸಲು ಅನುಕೂಲವಾಗುತ್ತದೆ.
- ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ರಾಜ್ಯದ ಹಾಗೂ ಅಂತರರಾಜ್ಯದ ಭಾಗಗಳಿಗೆ ವಿವಿಧ ಮಾದರಿಯ ಬಸ್ಸುಗಳು ವಿವಿಧ ಸ್ಥಳಗಳಿಗೆ ಕಾರ್ಯಾಚರಣೆಯಾಗುತ್ತಿದೆ.
- ಸದರಿ ಬಸ್ಸುಗಳು ವಿವಿಧ ಸ್ಥಳಗಳಲ್ಲಿ ತಾಂತ್ರಿಕ ದೋಷದಿಂದಾಗಿ ಕೆಟ್ಟು ನಿಲ್ಲುವ ಸಂದರ್ಭದಲ್ಲಿ, ಉಂಟಾಗುವ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಈ ವಾಹನವು ಸಹಕಾರಿಯಾಗಲಿದ್ದು, ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ.
- ಆದುದರಿಂದ, ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದ ತಾಂತ್ರಿಕ ಸಿಬ್ಬಂದಿಗಳು ವಾಹನ ಅವಘಡ/ ಅಪಘಾತ ಸಮಯದಲ್ಲಿ ಶೀಘ್ರವಾಗಿ ಬಿಡಿಭಾಗಗಳು / ಇತರೆ ಪರಿಕರಗಳೊಂದಿಗೆ ಸದರಿ ಸ್ಥಳಗಳಿಗೆ ತೆರಳಿ ವಾಹನ ದುರಸ್ಥಿಗೊಳಿಸಲು ಮೊಬೈಲ್ ವರ್ಕಷಾಪ್ ವಾಹನವನ್ನು ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ.
- ಬಸ್ಸುಗಳು ಅಪಘಾತ/ಅವಘಡಕ್ಕೀಡಾದಲ್ಲಿ (ಬ್ರೇಕ್ ಡೌನ್) ಚಾಲಕ, ನಿರ್ವಾಹಕರಿಗೆ ತಕ್ಷಣದಲ್ಲಿ ಸಹಾಯ ನೀಡಲು ಹಾಗೂ ಗಾಯಗೊಂಡಿದಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಸಹ ಸ್ಪಂದನ ವಾಹನವು ಉಪಯುಕ್ತವಾಗುತ್ತದೆ.
- ಪ್ರತಿ ವಾಹನದ ಬೆಲೆ ರೂ.7.22 ಲಕ್ಷಗಳಾಗುತ್ತದೆ. ಜನವರಿ-2026ರ ಅಂತ್ಯಕ್ಕೆ ಹೆಚ್ಚುವರಿಯಾಗಿ 10 ಹೊಸ ವಾಹನಗಳು ಸೇರ್ಪಡೆಗೊಳ್ಳಲಿದ್ದು, ಸದರಿ ವಾಹನಗಳನ್ನು ಉಳಿದ ಜಿಲ್ಲೆಗಳಿಗೆ ಕ್ರಮವಾಗಿ ನಿಯೋಜನೆ ಮಾಡಲಾಗುವುದು.
- ಅವಘಡ/ ಅಪಘಾತ ಸಮಯದಲ್ಲಿ ಶೀಘ್ರವಾಗಿ ಬಿಡಿಭಾಗಗಳು / ಇತರೆ ಪರಿಕರಗಳೊಂದಿಗೆ ಸದರಿ ಸ್ಥಳಗಳಿಗೆ ತೆರಳಿ ವಾಹನ ದುರಸ್ಥಿಗೊಳಿಸಲು Ashok Leyland DOST XL High Side Deck – BS-VI ಮಾದರಿಯ ವಾಹನವನ್ನು ಖರೀದಿಸಿದ್ದು ಇದರ ಪ್ರಮುಖ ವೈಶಿಷ್ಟ್ಯಗಳನ್ನು ಕೆಳಕಂಡಂತೆ ತಿಳಿಸಲಾಗುತ್ತದೆ:
o ಮಾದರಿ: Ashok Leyland DOST XL High Side Deck (HSD)
o ಮಾನದಂಡ: BS-VI
o ವರ್ಗ: Built-Up Truck (V2)
o ಎಂಜಿನ್ ಮತ್ತು ಕಾರ್ಯಕ್ಷಮತೆ: ಟರ್ಬೋ ಚಾರ್ಜ್ಡ್ ಮತ್ತು ಇಂಟರ್ಕೂಲ್ಡ್ ಡೀಸೆಲ್ ಎಂಜಿನ್
o BS-VI ಮಾನದಂಡಗಳಿಗೆ ಅನುಗುಣವಾಗಿರುವ ಕಡಿಮೆ ಮಾಲಿನ್ಯ ಹೊರಸೂಸುವ ವ್ಯವಸ್ಥೆ
o ಉತ್ತಮ ಇಂಧನ ದಕ್ಷತೆ ಮತ್ತು ಶಕ್ತಿ ಉತ್ಪಾದನೆ
o High Side Deck (HSD) ವಿನ್ಯಾಸ – ಸರಕುಗಳನ್ನು ಸುರಕ್ಷಿತವಾಗಿ ಸಾಗಿಸಲು ಅನುಕೂಲ
ಈ ಸಂದರ್ಭದಲ್ಲಿ ಅಧ್ಯಕ್ಷರುಗಳಾದ ಭರಮಗೌಡ (ರಾಜು) ಅಲಗೌಡ ಕಾಗೆ, ವಾ.ಕ.ರ.ಸಾ. ಸಂಸ್ಥೆ ಹಾಗೂ ಅರುಣ್ ಕುಮಾರ್ ಎಂ.ವೈ. ಪಾಟೀಲ, ಕ.ಕ.ರ.ಸಾ. ನಿಗಮ, ವಿ.ಎಸ್. ಆರಾಧ್ಯ, ಬೆಂ.ಮ.ಸಾ. ಸಂಸ್ಥೆ, ಮೊಹಮ್ಮದ್ ರಿಜ್ವಾನ್ ನವಾಬ್, ಮಾನ್ಯ ಉಪಾಧ್ಯಕ್ಷರು, ಕರಾರಸಾ ನಿಗಮ, ನಿಕೇತ್ ರಾಜ್ ಎಂ, ಉಪಾಧ್ಯಕ್ಷರು, ಬಿ ಎಂ ಟಿಸಿ, ಅಕ್ರಂ ಪಾಷ, ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ, ಶಿವಕುಮಾರ್ ಕೆ.ಬಿ., ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಬೆಂ.ಮ.ಸಾ.ಸಂಸ್ಥೆ, ಪ್ರಿಯಾಂಗಾ ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ವಾ.ಕ.ರ.ಸಾ.ಸಂಸ್ಥೆ ಮತ್ತು ಡಾ|| ಸುಶೀಲಾ ಬಿ. ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಕ.ಕ.ರ.ಸಾ. ನಿಗಮ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಾಗರದ ‘ಅಡಿಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘ’ದ 2026ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ
ಪೋಷಕರೇ ಗಮನಿಸಿ : ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸುವುದು ಹೇಗೆ.? ಇಲ್ಲಿದೆ ಮಾಹಿತಿ








