ಬೆಂಗಳೂರು: ಎಂಎಸ್ಐಎಲ್ ಎಲ್ಲಾ ಸೇವೆಗಳು ಬೆರಳ ತುದಿಯಲ್ಲೇ ಲಭ್ಯವಾಗುವಂತೆ ನಾಳೆ ಹೊಸ ಸಾಫ್ಟ್ ವೇರ್ ಹಾಗೂ ಮೊಬೈಲ್ ಆಪ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ.
ಈ ಕುರಿತಂತೆ ಸಚಿವ ಎಂ.ಬಿ ಪಾಟೀಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ನಾಳೆ ಎಂಎಸ್ಐಎಲ್ ಚಿಟ್ಸ್ ನ ಹೊಸ ಸಾಫ್ಟ್ ವೇರ್ ಹಾಗೂ ಮೊಬೈಲ್ ಆಪ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದಿದ್ದಾರೆ.
ನಾಳೆ ಬೆಳಗ್ಗೆ ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ನಲ್ಲಿ 10.30ಕ್ಕೆ ಲೋಕಾರ್ಪಣೆಗೊಳಿಸಲಿದ್ದಾರೆ. ಡಿಜಿಟಲ್ ವ್ಯವಸ್ಥೆಯ ಮೂಲಕ ಚಿಟ್ ಸದಸ್ಯರಿಗೆ ಪಾರದರ್ಶಕತೆ, ವೇಗ, ಸುರಕ್ಷತೆ ಮತ್ತು ಸುಲಭ ಪ್ರವೇಶ-ಎಲ್ಲವೂ ಮೊಬೈಲ್ ಆಪ್ ನಲ್ಲಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಖಾತೆ ವಿವರಗಳು, ಕಂತು ಪಾವತಿ, ಹರಾಜು ಮಾಹಿತಿ ಸೇರಿದಂತೆ ಎಲ್ಲಾ ಸೇವೆಗಳು ಬೆರಳ ತುದಿಯಲ್ಲೇ! ಸಣ್ಣ ಉಳಿತಾಯದಿಂದ ದೊಡ್ಡ ಕನಸುಗಳವರೆಗೆ-MSIL ಚಿಟ್ಸ್ ಜನರ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ‘ಅರ್ಧ ಭಾಗ’ದಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ | Power Cut








