Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಸೂಪರ್ ವುಡ್’.! ಉಕ್ಕಿಗಿಂತ 10 ಪಟ್ಟು ಬಲಶಾಲಿ, 6 ಪಟ್ಟು ಹಗುರ, ಭೂಕಂಪಕ್ಕೂ ಅಲುಗಾಡಲ್ಲ ; ವೈಶಿಷ್ಟ್ಯ ತಿಳಿದ್ರೆ ಶಾಕ್ ಆಗ್ತೀರಾ!

15/10/2025 5:51 PM

ನ.1ರಿಂದ ಬೆಂಗಳೂರಲ್ಲಿ 100 ದಿನಗಳ ಕಾಲ ‘ಎ‌’ ಖಾತಾ ಅಭಿಯಾನ: ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ

15/10/2025 5:26 PM

Good News : ವಿಮಾನಯಾನಿಗಳಿಗೆ ದೀಪಾವಳಿ ಗಿಫ್ಟ್ ; ವಿಮಾನಯಾನ ಸಂಸ್ಥೆಗಳು ‘ರಿಯಾಯಿತಿ ದರ’ದಲ್ಲಿ ಟಿಕೆಟ್ ಮಾರಾಟ

15/10/2025 5:25 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನ.1ರಿಂದ ಬೆಂಗಳೂರಲ್ಲಿ 100 ದಿನಗಳ ಕಾಲ ‘ಎ‌’ ಖಾತಾ ಅಭಿಯಾನ: ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ
KARNATAKA

ನ.1ರಿಂದ ಬೆಂಗಳೂರಲ್ಲಿ 100 ದಿನಗಳ ಕಾಲ ‘ಎ‌’ ಖಾತಾ ಅಭಿಯಾನ: ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ

By kannadanewsnow0915/10/2025 5:26 PM

ಬೆಂಗಳೂರು : “ನವೆಂಬರ್ 1 ನೇ‌ ತಾರೀಕಿನಿಂದ ಬಿ ಖಾತೆಗಳನ್ನು ಎ ಖಾತೆಗಳಾಗಿ ಬದಲಾವಣೆ ಮಾಡುವ ಐತಿಹಾಸಿಕ ನಿರ್ಣಯಕ್ಕೆ ಸರ್ಕಾರ ತೀರ್ಮಾನ ಮಾಡಿದೆ. ಇದು ಬೆಂಗಳೂರಿನ 15 ಲಕ್ಷ ಆಸ್ತಿಗಳ ಮಾಲೀಕರಿಗೆ ಉಪಯೋಗವಾಗುತ್ತದೆ. ಇದೊಂದು ಕ್ರಾಂತಿಕಾರಕ ತೀರ್ಮಾನ.‌ ಆಸ್ತಿ ಶುದ್ಧೀಕರಣಕ್ಕೆ ನಾಂದಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ‌ಅವರು ಹೇಳಿದರು.

ಜಿಬಿಎ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ನೀಡಲು ಹೊಸದಾಗಿ ಜಾರಿಗೊಳಿಸಿರುವ ಆನ್ ಲೈನ್ ವ್ಯವಸ್ಥೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ರವರು ವಿಧಾನಸೌಧದಲ್ಲಿ ಬುಧವಾರ ಚಾಲನೆ ನೀಡಿ, ಮಾತನಾಡಿದರು.

“2 ಸಾವಿರ ಚ.ಮೀ. ವಿಸ್ತೀರ್ಣದ ಆಸ್ತಿಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತವೆ. 2 ಸಾವಿರ ಚದರ ಮೀಟರ್ ಗಿಂತ ಹೆಚ್ಚು ವಿಸ್ತೀರ್ಣದ ಆಸ್ತಿಗಳಿಗೆ ಕ್ಯಾಡ್ ಡ್ರಾಯಿಂಗ್ ಸೇರಿದಂತೆ ಇತರೇ ದಾಖಲೆಗಳನ್ನು ನೀಡಬೇಕಾಗುತ್ತದೆ. ನವೆಂಬರ್ 1 ರಿಂದ ಪ್ರಾರಂಭವಾಗುವ ಈ ಅಭಿಯಾನ 100 ದಿನಗಳ ನಡೆಯಲಿದೆ. 500 ರೂಪಾಯಿ ಅರ್ಜಿ ಶುಲ್ಕವನ್ನು ಕಟ್ಟಿ ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡರೆ ಪಾಲಿಕೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಾರೆ” ಎಂದು ಮಾಹಿತಿ ನೀಡಿದರು.

“ಆಸ್ತಿ ಮಾಲೀಕರು ಸದರಿ ಆಸ್ತಿಯ ಗೈಡೆನ್ಸ್ ದರದ ಶೇ.‌5 ರಷ್ಟನ್ನು ಶುಲ್ಕವಾಗಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಇಂತಹ ಬಡಾವಣೆಗಳಿಗೆ ವಿದ್ಯುತ್, ನೀರು, ಒಳಚರಂಡಿ ಸೇರಿದಂತೆ ಇತರೇ ಮೂಲಸೌಕರ್ಯ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಈ ದೃಷ್ಟಿಯಿಂದ ಗೈಡೆನ್ಸ್ ದರದ ಶೇ.5 ರಷ್ಟು ‌ಮಾತ್ರ ಶುಲ್ಕ ವಿಧಿಸಲಾಗಿದೆ.‌ 100 ದಿನದ ನಂತರ ಹೆಚ್ಚುವರಿ ಶುಲ್ಕ ನಿಗದಿ ಮಾಡಲಾಗುತ್ತದೆ.‌ ಹೆಚ್ಚುವರಿ ಶುಲ್ಕದ ಪ್ರಮಾಣ ಆನಂತರ ತಿಳಿಸಲಾಗುವುದು” ಎಂದರು.

“ಪ್ರತಿ ಪಾಲಿಕೆಯು ಎರಡೆರಡು ಸ್ಥಳಗಳಲ್ಲಿ ‘ಹೆಲ್ಪ್ ಡೆಸ್ಕ್’ (ಕಚೇರಿ) ಗಳನ್ನು ತೆಗೆಯಲಾಗುವುದು. ಬೆಂಗಳೂರು ಒನ್ ಕೇಂದ್ರದಲ್ಲಿಯೂ ನೋಂದಣಿಯಾಗಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು ಯಾರೂ ಸಹ ಒಂದೇ ಒಂದು ರೂಪಾಯಿ ಲಂಚ ನೀಡುವಂತಿಲ್ಲ” ಎಂದರು.

“ಓಸಿ, ಸಿಸಿಗೂ ಇದಕ್ಕೂ ಸಂಬಂಧವಿಲ್ಲ. ಬಿ ಖಾತಾ ಮಾಲೀಕರಿಗೆ ಕಟ್ಟಡ ಯೋಜನೆ ಅನುಮೋದನೆ ಸಧ್ಯಕ್ಕೆ ದೊರೆಯುವುದಿಲ್ಲ. ಬಿ ಖಾತಾ ಬಹುಮಹಡಿ ಕಟ್ಟಡಗಳು ಎ‌ ಖಾತೆಗಳಾಗಿ ಬದಲಾವಣೆ ಆಗುವುದಿಲ್ಲ. ಮೊದಲು ಭೂಮಿಗೆ ನಾವು ಖಾತೆ ನೀಡುತ್ತೇವೆ. ಆ ಜಾಗದಲ್ಲಿರುವ ಕಟ್ಟಡ ಕಾನೂನಿನ ವ್ಯಾಪ್ತಿಯಲ್ಲಿ ಇದೆಯೇ ಇಲ್ಲವೇ ಎಂದು ಮೊದಲು ನೋಡುತ್ತೇವೆ. ಆನಂತರ ಕಟ್ಟಡ ಅದಕ್ಕೆ ಏನು ಶುಲ್ಕ ಎಂದು ನಿಗಧಿ ಮಾಡುತ್ತೇವೆ. ಅನಿಯಂತ್ರಿತ, ಅನಧಿಕೃತ‌ ಮಾರಾಟ ಮತ್ತು ಅಕ್ರಮ ಆಸ್ತಿಗಳಿಗೆ ಮುಂದಕ್ಕೆ ಅವಕಾಶ ದೊರೆಯದಂತೆ ಮಾಡುವುದು, ನಕಲಿ ಖಾತೆಗಳನ್ನು ಸೃಷ್ಟಿಸಿ ಮೋಸ ಮಾಡುವುದನ್ನು ತಪ್ಪಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದರು.

“ಅರ್ಜಿ ಹಾಕಿದ ನಂತರ ಪಾಲಿಕೆ ಅಧಿಕಾರಿಗಳು ಪ್ರತಿ ಆಸ್ತಿಯ ಮುಂದೆ ಮಾಲೀಕನ ನಿಲ್ಲಿಸಿ ವಿಡಿಯೋ, ಫೋಟೊ ದಾಖಲೀಕರಣ ಮಾಡಿ ಅಪ್‌ ಲೋಡ್ ಮಾಡುತ್ತಾರೆ. ಇದನ್ನು ಪರಿಶೀಲಿಸಲು ಹಾಗೂ ತಕರಾರುಗಳನ್ನು ಸಲ್ಲಿಸಲು ಸಹ ಅವಕಾಶ ನೀಡಲಾಗಿದೆ. ಸರ್ಕಾರಿ ಜಾಗ, ಪಿಟಿಸಿಎಲ್ ಪ್ರಕರಣಗಳ ಆಸ್ತಿಗಳು, 94 ಸಿ ಸೇರಿದಂತೆ ಇತರೇ ಪ್ರಕರಣಗಳ ಜಾಗ ಇಲ್ಲಿ ಒಳಪಡುವುದಿಲ್ಲ” ಎಂದರು.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿ:

“ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಎಲ್ಲರಿಗೂ ಒಂದೇ ರೀತಿ ಖಾತ ನೀಡಲು ಮುಂದಾಗಿದ್ದೇವೆ. ಮೊದಲು ನಾವು ಇ ಖಾತಾ ನೀಡಲು ಆರಂಭಿಸಿದೆವು. ಇಲ್ಲಿ ಎದುರಿಸಿದ ಅಡಚಣೆಗಳನ್ನು ಸರಿಪಡಿಸಿದ್ದೇವೆ. ಆಸ್ತಿಗಳ ದಾಖಲೆ ಡಿಜಿಟಲೀಕರಣ ಮಾಡಲು ಸ್ಕ್ಯಾನ್ ಮಾಡಿದ್ದೇವೆ. ಆನ್ ಲೈನ್ ಖಾತಾ ವ್ಯವಸ್ಥೆ ತಂದಿದ್ದೇವೆ. ಇದೆಲ್ಲದರ ನಂತರ ನಾವು ಈ ಖಾತಾ ಪರಿವರ್ತನೆ ಮಾಡುತ್ತಿದ್ದೇವೆ. ಕಳೆದ 50 ವರ್ಷಗಳಿಂದ ಇಂತಹ ತೀರ್ಮಾನ ಆಗಿರಲಿಲ್ಲ. ನಮ್ಮ ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಇದು ನಮ್ಮ ಸರ್ಕಾರದ ಆರನೇ ಗ್ಯಾರಂಟಿಯಾಗಿದೆ. ನಿಮ್ಮ ಆಸ್ತಿ, ನಿಮ್ಮ ಹಕ್ಕು. ನಿಮ್ಮ ಹಕ್ಕನ್ನು ನಾವು ಸರಿಪಡಿಸುತ್ತಿದ್ದೇವೆ” ಎಂದು ತಿಳಿಸಿದರು.

“ಜಿಬಿಎ ವ್ಯಾಪ್ತಿಯಲ್ಲಿನ ಐದು ಪಾಲಿಕೆಗಳಲ್ಲಿರುವ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸುವ ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೀಪಾವಳಿ ಹಬ್ಬದ ನಂತರ ಬೆಂಗಳೂರಿನ ನಾಗರೀಕರ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ನಮ್ಮ ಸರ್ಕಾರ ಮುಂದಾಗಿದೆ. ನಗರದಲ್ಲಿ 25 ಲಕ್ಷ‌‌‌ ಆಸ್ತಿಗಳಿದ್ದು, ಇದರಲ್ಲಿ 7.5 ಲಕ್ಷ‌‌ ಎ‌ ಖಾತೆಗಳು, 7.5 ಲಕ್ಷ‌ ಆಸ್ತಿಗಳು ಬಿ ಖಾತೆ ಹೊಂದಿವೆ. ಇನ್ನು 7-8 ಲಕ್ಷ‌ ಆಸ್ತಿಗಳು ಬಿ ಖಾತೆ ಪಡೆಯಲೂ ಅನುಮೋದನೆ ಪಡೆದಿಲ್ಲ. ಈ ಕಾರ್ಯಕ್ರಮದ ಮೂಲಕ ಜನರ ಆಸ್ತಿ ದಾಖಲೆಗಳನ್ನು ಕಾಪಾಡಿಕೊಳ್ಳಲು ನಮ್ಮ ಸರ್ಕಾರ 6ನೇ ಗ್ಯಾರಂಟಿ ನೀಡುತ್ತಿದೆ” ಎಂದು ತಿಳಿಸಿದರು.

ನಿವೇಶನಗಳಿಗೆ ಮಾತ್ರ ಎ ಖಾತೆ, ಕಟ್ಟಡಗಳ ಸಕ್ರಮವಿಲ್ಲ

“ಕೆಟಿಸಿಪಿ ಕಾಯ್ದೆ 61 ರ ಅಡಿಯಲ್ಲಿ ಅನುಮೋದನೆಗೊಂಡ‌ ಕಂದಾಯ ಜಮೀನಿನಲ್ಲಿ ಇರುವ ನಿವೇಶನಗಳು. ಅಂದರೆ ಈ ಭೂಮಿಯಲ್ಲಿ ಒಂದಷ್ಟು ‌ಜನರು ಭೂ ಪರಿವರ್ತನೆ ಮಾಡಿಕೊಳ್ಳದೆ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ಈ ಆಸ್ತಿಗಳಿಗೆ ಬಿ ಖಾತಾ ನೀಡಲಾಗಿತ್ತು. ಇಂತಹವರಿಗೆ ಬ್ಯಾಂಕ್ ಸಾಲ ದೊರೆಯುತ್ತಿರಲಿಲ್ಲ, ಕಾನೂನು ಪ್ರಕಾರ ಕಟ್ಟಡ ನಕ್ಷೆಗೆ ಅನುಮತಿ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಪರದಾಡಬೇಕಿತ್ತು. ಸರ್ಕಾರದ ಈ ಕ್ರಮದಿಂದ ಜನರಿಗೆ ಈ ಪರದಾಟ ತಪ್ಪಲಿದೆ. ನಾವು ಈ ನಿವೇಶನಗಳಲ್ಲಿ ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ಈಗ ಕೈಹಾಕುತ್ತಿಲ್ಲ” ಎಂದು ಹೇಳಿದರು.

“ನಾವು ಮೊದಲನೆಯದಾಗಿ ಕಂದಾಯ ಜಮೀನಿನಲ್ಲಿ ಇರುವ ಎಲ್ಲಾ ಬಡಾವಣೆ ರಸ್ತೆಗಳನ್ನು ಸರ್ಕಾರಿ ರಸ್ತೆಗಳು ಎಂದು ಘೋಷಣೆ ಮಾಡಿದ್ದೇವೆ. ಏಕೆಂದರೆ ಜಮೀನಿನ ಮಾಲೀಕರು ಎರಡಕ್ಕಿಂತ ಹೆಚ್ಚು ಖರೀದಿದಾರರಿಗೆ ನಿವೇಶನ ನೋಂದಣಿ ಮಾಡಿಸಿ ದೋಖಾ ಮಾಡುತ್ತಿದ್ದರು.‌ ಇದನ್ನು ತಪ್ಪಿಸಲು ಕಳೆದ ವಿಧಾನಸಭಾ ಅಧಿವೇಶನದಲ್ಲಿಯೇ ಈ ತೀರ್ಮಾನ ‌ತೆಗೆದುಕೊಳ್ಳಲಾಯಿತು” ಎಂದರು.

“ನಗರ ಯೋಜನಾ ಪ್ರಾಧಿಕಾರವಾಗಿ ಬಿಡಿಎ ನಿರ್ವಹಣೆ ಮಾಡುತ್ತಿದ್ದ ಕೆಲಸವನ್ನು ಇನ್ನುಮುಂದೆ ಜಿಬಿಎ ನಿರ್ವಹಿಸಲಿದೆ. ಇಲ್ಲಿ ಏಕಗವಾಕ್ಷಿ ಯೋಜನೆ ತಂದಿದ್ದೇವೆ. ಆಮೂಲಕ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸಿದ್ದೇವೆ. ಅಲಿನೇಷನ್ ಹಣವನ್ನು ನಾವೇ ತೆಗೆದುಕೊಂಡು ಕಂದಾಯ ಇಲಾಖೆಗೆ ಪಾವತಿ ಮಾಡುವುದು. ಆನಂತರ ನಮ್ಮ ಶುಲ್ಕವನ್ನು ಪಡೆಯುವುದು ಎಲ್ಲವೂ ಒಂದೇ ಕಡೆ ನಡೆಯುತ್ತದೆ. ಕಳೆದ 50 ವರ್ಷಗಳಿಂದ ಯಾರೂ ಮಾಡದ ಕೆಲಸವನ್ನು ಈಗ ಮಾಡಲಾಗುತ್ತಿದೆ” ಎಂದರು.

ಆಸ್ತಿ ದಾಖಲೆ ಡಿಜಿಟಲೀಕರಣಕ್ಕೆ ಮೋದಿ ಸರ್ಕಾರದಿಂದ ಪ್ರಶಸ್ತಿ:

“ನಮ್ಮ ಸರ್ಕಾರದ ಈ ಕೆಲಸವನ್ನು ನೋಡಿ ಪ್ರಧಾನಿ ನರೇಂದ್ರ ‌ಮೋದಿ ಅವರ ಕೇಂದ್ರ ಸರ್ಕಾರ ನಮ್ಮ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿದೆ. ದೇಶದಲ್ಲಿಯೇ ಯಾರೂ ಇಂತಹ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿಲ್ಲ ಎಂದು ಪ್ರಶಂಸೆ ಮಾಡಿ ಶುಭ ಹಾರೈಸಿದೆ. ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಪ್ರಶಸ್ತಿ ನೀಡಿದ್ದಾರೆ. ಇದಕ್ಕೆ ಶ್ರಮಿಸುತ್ತಿರುವ ಎಲ್ಲ ಅಧಿಕಾರಿಗಳಿಗೆ ಜನರು ಹಾಗೂ ಸರ್ಕಾರದ ಪರವಾಗಿ ಅಭಿನಂದಿಸುತ್ತೇನೆ” ಎಂದರು.

ಈ ಎಲ್ಲಾ ಪ್ರಕ್ರಿಯೆ ನಡೆಸಲು ಮಾನವ ಸಂಪನ್ಮೂಲ ನಿಮ್ಮ ಬಳಿ ಇದೆಯೇ ಎಂದು ಕೇಳಿದಾಗ, “ನಾವು ಸಕಲ ಸಿದ್ಧತೆ ಮಾಡಿಕೊಂಡೇ ಈ ತೀರ್ಮಾನಕ್ಕೆ ಬಂದಿದ್ದೇವೆ. ನಾಗರೀಕರಿಗೆ ಅನುಕೂಲ ಮಾಡಿಕೊಡಬೇಕು, ನಗರದ ಆಸ್ತಿಗಳನ್ನು ಒಂದು ವ್ಯವಸ್ಥೆಯೊಳಗೆ ತರಲು ಅಧಿಕಾರಿಗಳು ಕಳೆದ ಒಂದು ವರ್ಷದಿಂದ ಹಗಲು ರಾತ್ರಿ ಈ ಯೋಜನೆ ಜಾರಿಗೆ ಶ್ರಮಿಸಿದ್ದಾರೆ” ಎಂದರು.

ಸರ್ಕಾರಿ ರಸ್ತೆ ಎಂದು ಎಷ್ಟು ರಸ್ತೆಗಳು ಘೋಷಣೆಯಾಗಿಲ್ಲ ಎಂದು ಕೇಳಿದಾಗ, “ಈ ಯೋಜನೆ ಜಾರಿ ನಂತರ ಒಂದು ಆಸ್ತಿ ಪಕ್ಕ ರಸ್ತೆ ಇದ್ದರೂ ಅದನ್ನು ಸರ್ಕಾರಿ ರಸ್ತೆ ಎಂದೇ ಪರಿಗಣಿಸಲಾಗುವುದು. ಕೆಲವರು ಗೇಟೆಡ್ ಕಮ್ಯುನಿಟಿ ಎಂದು ಮಾಡಿಕೊಂಡಿದ್ದರು. ಆಗ ರಸ್ತೆ ಜಾಗದ ಪಹಣಿ ಆ ಜಮೀನಿನ ಮಾಲೀಕ ಹೆಸರಿನಲ್ಲೇ ಇರುತ್ತಿತ್ತು. ಈಗ ಇದೆಲ್ಲವನ್ನು ಸರಿಪಡಿಸುತ್ತಿದ್ದೇವೆ” ಎಂದು ತಿಳಿಸಿದರು.

ಇದರಿಂದ ಆದಾಯ ಎಷ್ಟು ಬರಬಹುದು ಎಂದು ಕೇಳಿದಾಗ. “ಅದನ್ನು ಈಗಲೇ ಹೇಗೆ ಲೆಕ್ಕ ಹಾಕಲು ಸಾಧ್ಯ? ಮೊದಲು ಜನ ಖಾತಾ ಬದಲಾವಣೆಗೆ ಅರ್ಜಿ ಹಾಕಲಿ. ಆನಂತರ ಎಷ್ಟು ಬರಲಿದೆ ಎಂದು ಲೆಕ್ಕ ಹಾಕಬಹುದು. ಬೆಂಗಳೂರು ಪಾಲಿಕೆಗಳ ವ್ಯಾಪ್ತಿಯಲ್ಲಿ 25 ಲಕ್ಷ ಆಸ್ತಿಗಳಿವೆ. ಪಾಲಿಕೆ ವ್ಯಾಪ್ತಿಯ ಹೊರಗೆ ಶೇ.30 ರಷ್ಟು ಜಾಗ ಸೇರ್ಪಡೆಯಾಗಿದ್ದು, ಇವುಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಬೆಂಗಳೂರಿನ ಹೊರಗಿನ ಕೆಲವು ಪ್ರದೇಶಗಳನ್ನು ನನ್ನ ಇಲಾಖೆಗೆ ಸೇರಿಸಿಕೊಂಡಿದ್ದೇನೆ” ಎಂದು ತಿಳಿಸಿದರು.

ಒಬ್ಬರು ಇಬ್ಬರು ಮೂವರಿಗೆ ಖಾತಾ ಮಾಡಿದ್ದರೆ ಅಂತಹ ಪ್ರಕರಣಗಳನ್ನು ಹೇಗೆ ಬಗೆಹರಿಸುತ್ತೀರಿ ಎಂದು ಕೇಳಿದಾಗ, “ಇದಕ್ಕಾಗಿ ನಮ್ಮ ಕಂದಾಯ ಇಲಾಖೆಯಲ್ಲಿ ಐತಿಹಾಸಿಕ ಕಾನೂನು ತಂದಿದ್ದು, ಬೋಗಸ್ ಆಗಿ ನೋಂದಣಿಯಾಗಿರುವ ದಾಖಲೆಗಳನ್ನು ವಜಾಗೊಳಿಸಲು ಜಿಲ್ಲಾ ನೋಂದಣಧಿಕಾರಿಗೆ ಅಧಿಕಾರ ನೀಡಲಾಗಿದೆ. ಇದು ವಿಧಾನಸಭೆಯಲ್ಲಿ ಅನುಮೋದನನೆ ಪಡೆಯಲಾಗಿದೆ” ಎಂದು ತಿಳಿಸಿದರು.

ಸರ್ವರ್ ಸಮಸ್ಯೆ ಉಂಟಾಗಲಿದೆಯೇ ಎಂದು ಕೇಳಿದಾಗ, “ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ‌ಆದರೆ ನಾವು ಸರಿಪಡಿಸುತ್ತೇವೆ‌‌. ಐದು ಪಾಲಿಕೆಗಳು ಇರುವ ಕಾರಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸಮಸ್ಯೆಯಾಗಬಾರದು ಎಂದು 10 ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಅದು ಸಾಲದಿದ್ದರೆ ಇನ್ನೂ ಐದು ಕೇಂದ್ರಗಳನ್ನು ಸ್ಥಾಪಿಸುತ್ತೇವೆ” ಎಂದರು.

ಪಾಲಿಕೆಗಳ ಆದಾಯ ಸರ್ಕಾರಕ್ಕೆ ಸೇರಲಿದೆಯೇ ಎಂದಾಗ, “ಆಯಾಯ ಪಾಲಿಕೆಗಳ ಅದಾಯ ಅದೇ ಪಾಲಿಕೆಗಳಿಗೆ ಸೇರಲಿದೆ. ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲ. ಒಂದು ರೂಪಾಯಿಯೂ ಸರ್ಕಾರಕ್ಕೆ ಬರುವುದಿಲ್ಲ. ಭೂ ಪರಿವರ್ತನಾ ಶುಲ್ಕ ಒಂದೆರಡು ರೂಪಾಯಿ ಕಂದಾಯ ಇಲಾಖೆಗೆ ಹೋಗಬಹುದು” ಎಂದರು.

ಓಸಿ ಸಿಸಿ ವಿಚಾರವಾಗಿ ಸರ್ಕಾರದ ತೀರ್ಮಾನದ ಬಗ್ಗೆ ಹೇಳಿ ಎಂದು ಕೇಳಿದಾಗ, “1200 ಅಡಿಗಳವರೆಗಿನ ನಿವೇಶನಗಳಿಗೆ ಅನುಮತಿ ನೀಡಿದ್ದೇವೆ. ಉಳಿದಂತೆ ಸುಪ್ರೀಂ ಕೋರ್ಟ್ ತೀರ್ಪಿಗೆ ಧಕ್ಕೆಯಾಗದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾನೂನು ಇಲಾಖೆ, ತಜ್ಞರು ಚರ್ಚೆ ಮಾಡಿ ಸಲಹೆ ನೀಡಲಿದ್ದಾರೆ. ಜನರಿಗೆ ಸಹಾಯ ಮಾಡಬೇಕು ಎಂದು ಮುಖ್ಯಮಂತ್ರಿಗಳು ವಿಚಾರವಾಗಿಯೇ 8 ಸಭೆಗಳನ್ನು ನಡೆಸಿದ್ದಾರೆ. ಮೂರು ಬಾರಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ. ನಾವು ಪ್ರತ್ಯೇಕವಾಗಿ ಎರಡು ಮೂರು ಬಾರಿ ಸಭೆ ಮಾಡಿದ್ದೇವೆ” ಎಂದರು.

ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕೇಳಿದಾಗ, “ನಾವು ಹೆಚ್ಚು ಶಕ್ತಿಶಾಲಿಯಾದಷ್ಟು, ಶತ್ರುಗಳು ಹೆಚ್ಚು, ಕಡಿಮೆ ಶಕ್ತಿ ಇದ್ದರೆ ಕಡಿಮೆ ಶತ್ರುಗಳು, ಶಕ್ತಿಯೇ ಇಲ್ಲದಿದ್ದರೆ, ಶತ್ರುಗಳೂ ಇರುವುದಿಲ್ಲ” ಎಂದು ತಿಳಿಸಿದರು.

SHOCKING: ಒಬ್ಬನೇ ವ್ಯಕ್ತಿಯಿಂದ 476 RTI ಅರ್ಜಿ: ಅರ್ಜಿ ಸಲ್ಲಿಕೆಗೆ ನಿರ್ಬಂಧಿಸಿದ ಆದೇಶಕ್ಕೆ ತಡೆಗೆ ಹೈಕೋರ್ಟ್ ನಕಾರ

BREAKING: ರಾಜ್ಯದ ‘ಪೊಲೀಸ್ ಇಲಾಖೆ’ಯಲ್ಲಿ ಖಾಲಿ ಇರುವ ‘2032 ಹುದ್ದೆ’ಗಳ ಭರ್ತಿಗೆ ಸರ್ಕಾರ ಆದೇಶ | JOB ALERT

Share. Facebook Twitter LinkedIn WhatsApp Email

Related Posts

SHOCKING: ಒಬ್ಬನೇ ವ್ಯಕ್ತಿಯಿಂದ 476 RTI ಅರ್ಜಿ: ಅರ್ಜಿ ಸಲ್ಲಿಕೆಗೆ ನಿರ್ಬಂಧಿಸಿದ ಆದೇಶಕ್ಕೆ ತಡೆಗೆ ಹೈಕೋರ್ಟ್ ನಕಾರ

15/10/2025 5:22 PM1 Min Read

ಶಿವಮೊಗ್ಗದಲ್ಲಿ ‘HIV ನಿಯಂತ್ರಣ’ಕ್ಕೆ ಬೈಕ್ ಜಾಥಾ: DHO ಡಾ.ನಟರಾಜ್.ಕೆ ಎಸ್ ಚಾಲನೆ

15/10/2025 4:36 PM2 Mins Read

ಸಚಿವ ಪ್ರಿಯಾಂಕ ಖರ್ಗೆಗೆ ಬೆದರಿಕೆ: ಇಂಥಾ ಬೆದರಿಕೆಗೆ ನಾನು ಹೆದರಲ್ಲ, ಖರ್ಗೆನೂ ಹೆದರಲ್ಲ- ಸಿಎಂ ಸಿದ್ಧರಾಮಯ್ಯ

15/10/2025 4:28 PM1 Min Read
Recent News

‘ಸೂಪರ್ ವುಡ್’.! ಉಕ್ಕಿಗಿಂತ 10 ಪಟ್ಟು ಬಲಶಾಲಿ, 6 ಪಟ್ಟು ಹಗುರ, ಭೂಕಂಪಕ್ಕೂ ಅಲುಗಾಡಲ್ಲ ; ವೈಶಿಷ್ಟ್ಯ ತಿಳಿದ್ರೆ ಶಾಕ್ ಆಗ್ತೀರಾ!

15/10/2025 5:51 PM

ನ.1ರಿಂದ ಬೆಂಗಳೂರಲ್ಲಿ 100 ದಿನಗಳ ಕಾಲ ‘ಎ‌’ ಖಾತಾ ಅಭಿಯಾನ: ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ

15/10/2025 5:26 PM

Good News : ವಿಮಾನಯಾನಿಗಳಿಗೆ ದೀಪಾವಳಿ ಗಿಫ್ಟ್ ; ವಿಮಾನಯಾನ ಸಂಸ್ಥೆಗಳು ‘ರಿಯಾಯಿತಿ ದರ’ದಲ್ಲಿ ಟಿಕೆಟ್ ಮಾರಾಟ

15/10/2025 5:25 PM

SHOCKING: ಒಬ್ಬನೇ ವ್ಯಕ್ತಿಯಿಂದ 476 RTI ಅರ್ಜಿ: ಅರ್ಜಿ ಸಲ್ಲಿಕೆಗೆ ನಿರ್ಬಂಧಿಸಿದ ಆದೇಶಕ್ಕೆ ತಡೆಗೆ ಹೈಕೋರ್ಟ್ ನಕಾರ

15/10/2025 5:22 PM
State News
KARNATAKA

ನ.1ರಿಂದ ಬೆಂಗಳೂರಲ್ಲಿ 100 ದಿನಗಳ ಕಾಲ ‘ಎ‌’ ಖಾತಾ ಅಭಿಯಾನ: ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ

By kannadanewsnow0915/10/2025 5:26 PM KARNATAKA 5 Mins Read

ಬೆಂಗಳೂರು : “ನವೆಂಬರ್ 1 ನೇ‌ ತಾರೀಕಿನಿಂದ ಬಿ ಖಾತೆಗಳನ್ನು ಎ ಖಾತೆಗಳಾಗಿ ಬದಲಾವಣೆ ಮಾಡುವ ಐತಿಹಾಸಿಕ ನಿರ್ಣಯಕ್ಕೆ ಸರ್ಕಾರ ತೀರ್ಮಾನ…

SHOCKING: ಒಬ್ಬನೇ ವ್ಯಕ್ತಿಯಿಂದ 476 RTI ಅರ್ಜಿ: ಅರ್ಜಿ ಸಲ್ಲಿಕೆಗೆ ನಿರ್ಬಂಧಿಸಿದ ಆದೇಶಕ್ಕೆ ತಡೆಗೆ ಹೈಕೋರ್ಟ್ ನಕಾರ

15/10/2025 5:22 PM

ಶಿವಮೊಗ್ಗದಲ್ಲಿ ‘HIV ನಿಯಂತ್ರಣ’ಕ್ಕೆ ಬೈಕ್ ಜಾಥಾ: DHO ಡಾ.ನಟರಾಜ್.ಕೆ ಎಸ್ ಚಾಲನೆ

15/10/2025 4:36 PM

ಸಚಿವ ಪ್ರಿಯಾಂಕ ಖರ್ಗೆಗೆ ಬೆದರಿಕೆ: ಇಂಥಾ ಬೆದರಿಕೆಗೆ ನಾನು ಹೆದರಲ್ಲ, ಖರ್ಗೆನೂ ಹೆದರಲ್ಲ- ಸಿಎಂ ಸಿದ್ಧರಾಮಯ್ಯ

15/10/2025 4:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.