Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ದೇಶದಲ್ಲಿ ‘ನಿಫಾ ವೈರಸ್’ಗೆ ಮತ್ತೊಂದು ಬಲಿ: ಪಶ್ಚಿಮ ಬಂಗಾಳದಲ್ಲಿ ನರ್ಸ್ ಸಾವು

12/02/2026 7:19 PM

‘PF’ ಇರುವವರಿಗೆ ಕೇಂದ್ರದಿಂದ ಮತ್ತೊಂದು ಪ್ರಯೋಜನ ; ಪ್ರತಿ ತಿಂಗಳು ಖಾತೆಗೆ ನಗದು ಜಮಾ, ಈ ಯೋಜನೆ ಪ್ರಯೋಜನ!

12/02/2026 7:17 PM

ಬಿಕ್ಲು ಶಿವ ಕೊಲೆ ಕೇಸ್: 20ನೇ ಆರೋಪಿ ಅಜಿತ್ ಮಧ್ಯಂತರ ಜಾಮೀನು ತೆರವು, ಶರಣಾಗಲು ಕೋರ್ಟ್ ಆದೇಶ

12/02/2026 7:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: `BBMP’ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ‘ಇ-ಖಾತಾ’ ಕಡ್ಡಾಯ : ಜುಲೈ 1 ರಿಂದಲೇ ಜಾರಿ
KARNATAKA

BIG NEWS: `BBMP’ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ‘ಇ-ಖಾತಾ’ ಕಡ್ಡಾಯ : ಜುಲೈ 1 ರಿಂದಲೇ ಜಾರಿ

By kannadanewsnow0917/06/2025 5:52 AM

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸುವವರಿಗೆ ಜುಲೈ 1 ರಿಂದ ಇ-ಖಾತಾ ಕಡ್ಡಾಯವಾಗಿರುತ್ತದೆ. ಸೂಕ್ತ ದಾಖಲೆಗಳೊಂದಿಗೆ ಆನ್‌ಲೈನ್‌ https://bbmp.karnataka.gov.in/newkhata/ ಮೂಲಕ ಅರ್ಜಿ ಸಲ್ಲಿಸಿ ಇ – ಖಾತಾ ಪಡೆದುಕೊಳ್ಳಬಹುದು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸುವವರಿಗೆ ಜುಲೈ 1 ರಿಂದ ಇ-ಖಾತಾ ಕಡ್ಡಾಯವಾಗಿರುತ್ತದೆ.

ಸೂಕ್ತ ದಾಖಲೆಗಳೊಂದಿಗೆ ಆನ್‌ಲೈನ್‌ https://t.co/SeOQz6Bwai ಮೂಲಕ ಅರ್ಜಿ ಸಲ್ಲಿಸಿ ಇ – ಖಾತಾ ಪಡೆದುಕೊಳ್ಳಬಹುದು.#EKhata pic.twitter.com/xeR9ogcazD

— DIPR Karnataka (@KarnatakaVarthe) June 16, 2025

ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಇಒಡಿಬಿ-ಒಬಿಪಿಎಸ್ (EoDB-OBPS) ತಂತ್ರಾಂಶದ ಮೂಲಕ ಕಟ್ಟಡ ನಕ್ಷೆ ಮಂಜೂರಾತಿಯನ್ನು ಆನ್‌ಲೈನ್ ನಲ್ಲಿ ನೀಡಲಾಗುತ್ತಿರುತ್ತದೆ. ಪಾಲಿಕೆಯ ಕಂದಾಯ ವಿಭಾಗದಿಂದ ಇ-ಆಸ್ತಿ ತಂತ್ರಾಂಶವನ್ನು ಜಾರಿ ಮಾಡಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಈಗಾಗಲೇ ಇ-ಖಾತಾ ನೀಡಲಾಗುತ್ತಿರುತ್ತದೆ. ಇಂತಹ ಸ್ವತ್ತುಗಳ ದತ್ತಾಂಶವು ಇ-ಆಸ್ತಿ ತಂತ್ರಾಂಶದಲ್ಲಿ ಲಭ್ಯವಿರುತ್ತದೆ.

ಪಾಲಿಕೆಯ ನಗರ ಯೋಜನಾ ವಿಭಾಗದಿಂದ ನಕ್ಷೆ ಮಂಜೂರಾತಿ ನೀಡುತ್ತಿರುವ ಇಒಡಿಬಿ-ಒಬಿಪಿಎಸ್ ಆನ್‌ ಲೈನ್ ತಂತ್ರಾಂಶವನ್ನು ಪಾಲಿಕೆಯ ಕಂದಾಯ ವಿಭಾಗದಿಂದ ಇ-ಖಾತಾ ನೀಡುತ್ತಿರುವ ಇ-ಆಸ್ತಿ ತಂತ್ರಾಂಶದೊಂದಿಗೆ ಏಕೀಕರಣಗೊಳಿಸಲು ಕ್ರಮ ಜರುಗಿಸಲಾಗಿದೆ. ನಿವೇಶನ /ಸ್ವತ್ತಿನ ಕಂದಾಯ ದಾಖಲಾತಿಗಳ ಪರಿಶೀಲನಾ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಕೈಗೊಳ್ಳಲು ದಿನಾಂಕ: 01-07-2025 ರಿಂದ ಸ್ವತ್ತಿನ ಇ-ಖಾತಾ/ಇಪಿಐಡಿ ಸಂಖ್ಯೆಯನ್ನು ಆನ್‌ಲೈನ್ ತಂತ್ರಾಂಶದಲ್ಲಿ ನಮೂದಿಸುವುದು ಹಾಗೂ ಇ-ಖಾತಾ ಸಲ್ಲಿಸುವುದು ಅವಶ್ಯವಿರುತ್ತದೆ.

ಇದರಿಂದಾಗಿ ಪಾಲಿಕೆಯ ಕಂದಾಯ ವಿಭಾಗಕ್ಕೆ ಸ್ವತ್ತಿನ ದಾಖಲಾತಿಗಳ ಪರಿಶೀಲನೆಗಾಗಿ ಸಲ್ಲಿಸುವ ಕ್ರಮವನ್ನು ಹೊರತುಪಡಿಸಿರುವುದರಿಂದ ಪಾಲಿಕೆಯು ನೀಡುವ ಸೇವೆಗಳನ್ನು ಸರಳೀಕರಣಗೊಳಿಸಲು ಹಾಗೂ ಕಾಲಮಿತಿಯಲ್ಲಿ ನಕ್ಷೆ ಮಂಜೂರಾತಿ ನೀಡಲು ಸಹಕಾರಿಯಾಗಲಿದೆ.

ಆದ್ದರಿಂದ ದಿನಾಂಕ: 01-07-2025 ರಿಂದ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಪಾಲಿಕೆಗೆ ಆನ್‌ಲೈನ್‌ನಲ್ಲಿ ನಂಬಿಕೆ ನಕ್ಷೆ ಒಳಗೊಂಡಂತೆ ಎಲ್ಲಾ ಕಟ್ಟಡ ಅನುಮತಿಗಳಿಗೆ ಅರ್ಜಿ ಸಲ್ಲಿಸುವಾಗ ಇ-ಖಾತಾ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ ಹಾಗೂ ಸದರಿ ದಿನಾಂಕದಿಂದ ಕಟ್ಟಡ ನಕ್ಷೆಗಳ ಮಂಜೂರಾತಿ ಕೋರಿ ಸಲ್ಲಿಸುವ ಪ್ರಸ್ತಾವನೆಗಳ ಸ್ವತ್ತಿನ ದಾಖಲಾತಿಗಳನ್ನು ಪರಿಶೀಲನೆಗೆ ಪಾಲಿಕೆಯ ಕಂದಾಯ ವಿಭಾಗಕ್ಕೆ ಕಳುಹಿಸುವ ಕ್ರಮವನ್ನು ರದ್ದುಪಡಿಸಿ ಆದೇಶಿಸಿದೆ.

ಮುಂದುವರೆದು, ನಂಬಿಕೆಯೊಂದಿಗೆ ಪರಿಶೀಲಿಸುವ (Trust & Verify) ವಿಧಾನದಡಿ ಸೃಜನೆಗೊಳ್ಳುವ ತಾತ್ಕಾಲಿಕ ನಕ್ಷೆ ಮಂಜೂರಾತಿಗಳನ್ನು ಸಂಬಂಧಪಟ್ಟ ಸಹಾಯಕ ನಿರ್ದೇಶಕರು (ನಗರ ಯೋಜನೆ) ಇವರು ಕಾಲಮಿತಿಯೊಳಗೆ ದೃಢೀಕರಿಸುವುದು ಅಥವಾ ಸಕಾರಣಗಳೊಂದಿಗೆ ನಿರಾಕರಿಸದೆ ಇದ್ದಲ್ಲಿ, ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಸ್ವಯಂ ಅನುಮೋದನೆ (Deemed Approval) ನೀಡುವುದು. ಇಂತಹ ಸ್ವಯಂ ಅನುಮೋದನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮಕ್ಕೆ ಸಂಬಂಧಪಟ್ಟ ವಲಯ ಕಛೇರಿಗಳ ಜಂಟಿ ನಿರ್ದೇಶಕರು (ನಗರ ಯೋಜನೆ) ರವರು ವಲಯ ಆಯುಕ್ತರು ರವರೆಗೆ ವರದಿ ಸಲ್ಲಿಸಲು ಆದೇಶಿಸಿದೆ.

ರಾಜ್ಯದ ಸರ್ಕಾರಿ ವೈದ್ಯರ ಗಮನಕ್ಕೆ: ಜು.1ರಿಂದ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿ

BIG NEWS: ಸಾಗರದಲ್ಲಿ ‘ಸದಾನಂದ ಹತ್ಯೆ’ ಪ್ರಕರಣದಲ್ಲಿ ಮೂವರ ವಿರುದ್ಧ ಕೇಸ್ ದಾಖಲು: ‘FIR’ನಲ್ಲಿ ಏನಿದೆ?

Share. Facebook Twitter LinkedIn WhatsApp Email

Related Posts

BREAKING: ದೇಶದಲ್ಲಿ ‘ನಿಫಾ ವೈರಸ್’ಗೆ ಮತ್ತೊಂದು ಬಲಿ: ಪಶ್ಚಿಮ ಬಂಗಾಳದಲ್ಲಿ ನರ್ಸ್ ಸಾವು

12/02/2026 7:19 PM1 Min Read

ಬಿಕ್ಲು ಶಿವ ಕೊಲೆ ಕೇಸ್: 20ನೇ ಆರೋಪಿ ಅಜಿತ್ ಮಧ್ಯಂತರ ಜಾಮೀನು ತೆರವು, ಶರಣಾಗಲು ಕೋರ್ಟ್ ಆದೇಶ

12/02/2026 7:12 PM1 Min Read

BREAKING : ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್‌ ಬಂಧನ

12/02/2026 7:06 PM1 Min Read
Recent News

BREAKING: ದೇಶದಲ್ಲಿ ‘ನಿಫಾ ವೈರಸ್’ಗೆ ಮತ್ತೊಂದು ಬಲಿ: ಪಶ್ಚಿಮ ಬಂಗಾಳದಲ್ಲಿ ನರ್ಸ್ ಸಾವು

12/02/2026 7:19 PM

‘PF’ ಇರುವವರಿಗೆ ಕೇಂದ್ರದಿಂದ ಮತ್ತೊಂದು ಪ್ರಯೋಜನ ; ಪ್ರತಿ ತಿಂಗಳು ಖಾತೆಗೆ ನಗದು ಜಮಾ, ಈ ಯೋಜನೆ ಪ್ರಯೋಜನ!

12/02/2026 7:17 PM

ಬಿಕ್ಲು ಶಿವ ಕೊಲೆ ಕೇಸ್: 20ನೇ ಆರೋಪಿ ಅಜಿತ್ ಮಧ್ಯಂತರ ಜಾಮೀನು ತೆರವು, ಶರಣಾಗಲು ಕೋರ್ಟ್ ಆದೇಶ

12/02/2026 7:12 PM

BREAKING : ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್‌ ಬಂಧನ

12/02/2026 7:06 PM
State News
KARNATAKA

BREAKING: ದೇಶದಲ್ಲಿ ‘ನಿಫಾ ವೈರಸ್’ಗೆ ಮತ್ತೊಂದು ಬಲಿ: ಪಶ್ಚಿಮ ಬಂಗಾಳದಲ್ಲಿ ನರ್ಸ್ ಸಾವು

By kannadanewsnow0912/02/2026 7:19 PM KARNATAKA 1 Min Read

ಪಶ್ಚಿಮ ಬಂಗಾಳ: ದೇಶದಲ್ಲಿ ನಿಫಾ ವೈರಸ್ ಗೆ ಮತ್ತೊಂದು ಬಲಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್ ಸೋಂಕಿನಿಂದ ಬಳಲುತ್ತಿದ್ದಂತ ನರ್ಸ್…

ಬಿಕ್ಲು ಶಿವ ಕೊಲೆ ಕೇಸ್: 20ನೇ ಆರೋಪಿ ಅಜಿತ್ ಮಧ್ಯಂತರ ಜಾಮೀನು ತೆರವು, ಶರಣಾಗಲು ಕೋರ್ಟ್ ಆದೇಶ

12/02/2026 7:12 PM

BREAKING : ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್‌ ಬಂಧನ

12/02/2026 7:06 PM

BREAKING: ಬಿಕ್ಲು ಶಿವ ಕೊಲೆ ಕೇಸಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜು ಅರೆಸ್ಟ್

12/02/2026 7:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.