ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಆಗಸ್ಟ್.1ರಿಂದ ಜಾರಿಗೆ ಬರುವಂತೆ ರಿಯಲ್ ಟೈಮ್ ಅಟೆಂಡೆನ್ಸ್ ಸಿಸ್ಟಮ್ ನಲ್ಲಿ ತಮ್ಮ ಹಾಜರಾತಿಯನ್ನು ದಾಖಲಿಸುವುದು ಕಡ್ಡಾಯಗೊಳಿಸಿ, ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದ್ರಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಕರ್ನಾಟಕ ಆಡಳಿತ ಸುಧಾರಣೆ-2ರ ವರದಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಹಾಜರಾತಿಯನ್ನು ಮೊಬೈಲ್ ಆಧಾರಿತ Geofenced ಹಾಜರಾತಿ ವ್ಯವಸ್ಥೆ ಅಳವಡಿಸಿಕೊಳ್ಳಲು ಶಿಫಾರಸ್ಸು ಮಾಡಲಾಗಿದೆ. ಇಲಾಖೆಯ ಅಧಿಕಾರಿ/ಸಿಬ್ಬಂದಿಗಳ ಕಛೇರಿ ಹಾಜರಾತಿ ವ್ಯವಸ್ಥೆಗಾಗಿ ಈಗಾಗಲೇ ಅಳವಡಿಸಿಕೊಳ್ಳಲಾಗಿರುವ Aadhaar enabled bioletric attendance system (AEBAS)ನಲ್ಲಿ ಹಲವಾರು ನ್ಯೂನ್ಯತೆಗಳಿರುತ್ತವೆ. AEBAS ಉಪಕರಣಗಳು ಕೆಟ್ಟುಹೋಗುತ್ತಿದ್ದು, ಪ್ರತಿ ವರ್ಷ ನವೀಕರಿಸುವ ಅವಶ್ಯಕತೆ ಇದೆ ಮತ್ತು ಇದಕ್ಕಾಗಿ ಅಗತ್ಯ ಸಮಯದಲ್ಲಿ ದುರಸ್ತಿ ಮಾಡಿಸಲು ನುರಿತ ಮಾನವ ಸಂಪನ್ಮೂಲ ಮತ್ತು ಅನುದಾನದ ಅವಶ್ಯಕತೆ ಇರುತ್ತದೆ. ಆದ್ದರಿಂದ Mobile based geofenced real-time attendanceನಲ್ಲಿರುವ ಅನುಕೂಲತೆಗಳ ಬಗ್ಗೆ ಪುಸ್ತಾಪಿಸಿ, Mobile based geofenced real time attendance system ಅನ್ನು ಇಲಾಖೆಯಲ್ಲಿ ಅಳವಡಿಸಿಕೊಳ್ಳಲು ಪುಸ್ತಾಪಿಸಲಾಗಿದೆ ಎಂದಿದ್ದಾರೆ.
ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು, ಇವರು ಪ್ರಸ್ತಾಪಿಸಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಕರ್ನಾಟಕ ಆಡಳಿತ ಸುಧಾರಣೆ-2ರ ವರದಿಯಲ್ಲಿನ ಶಿಫಾರಸ್ಸಿನಂತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇಲಾಖೆಯ ಆಯುಕ್ತಾಲಯ, ನಿರ್ದೇಶನಾಲಯ ಹಾಗೂ ಅಧೀನ/ಕ್ಷೇತ್ರ ಕಛೇರಿ/ಸಂಸ್ಥೆಯ/ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿಗಳ ಹಾಜರಾತಿಯನ್ನು ಕಡ್ಡಾಯವಾಗಿ Mobile based geo-fenced real time attendance system ರಡಿ ದಾಖಲಿಸಲು ಈ ಕೆಳಕಂಡಂತೆ ಆದೇಶಿಸಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಗಳು ಕಾರ್ಯ ವ್ಯಾಪ್ತಿಯ ಆಯುಕ್ತಾಲಯ, ನಿರ್ದೇಶನಾಲಯ, ಹಾಗೂ ಅಧೀನ ಕ ಕಛೇರಿ/ಸಂಸ್ಥೆಯ ಅಕ್ಷ ರಗಳಲ್ಲಿ, ಮತ್ತು ಇತರ ಇತರೆ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿಗಳ ಕಛೇರಿ ಹಾಜರಾತಿ ವ್ಯವಸ್ಥೆಯನ್ನು ದಿನಾಂಕ : 01/08/2024ರಿಂದ ಜಾರಿಗೆ ಬರುವಂತೆ ಕಡ್ಡಾಯವಾಗಿ Mobile based geo-fenced real time attendance system ರಡಿ ದಾಖಲಿಸಲು ಆದೇಶಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಬಿಜೆಪಿ ಪಾದಯಾತ್ರೆ ವಿಚಾರ : ಹಲವರಿಗೆ ಬಿಪಿ-ಶುಗರ್ ಇದೆ, ಪಾದಯಾತ್ರೆ ಆರೋಗ್ಯಕ್ಕೆ ಒಳ್ಳೆಯದು : ಲಕ್ಷ್ಮಣ ಸವದಿ ಲೇವಡಿ
ಇನ್ಮುಂದೆ ನಿಮ್ಮ ಭೂಮಿಗೂ ಸಿಗುತ್ತೆ ʻಆಧಾರ್ʼ : ʻಭೂ ಆಧಾರ್ʼ ಕುರಿತು ಇಲ್ಲಿದೆ ಮಾಹಿತಿ | Bhu Aadhar yojana