ಆಗ್ರಾ : ಆಗ್ರಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ-ಅಖಿಲೇಶ್ ಯಾದವ್ ಮೈತ್ರಿ ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಒಬಿಸಿ ಕೋಟಾವನ್ನ ಕದಿಯುತ್ತಿದೆ ಮತ್ತು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುತ್ತಿದೆ ಎಂದು ಅವರು ಆರೋಪಿಸಿದರು.
“ಉತ್ತರಪ್ರದೇಶದಲ್ಲಿ ಇಬ್ಬರು ಹುಡುಗರ ನಡುವಿನ ಸ್ನೇಹವು ತುಷ್ಟೀಕರಣದ ರಾಜಕೀಯವನ್ನು ಆಧರಿಸಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತುಷ್ಟೀಕರಣ ನೀತಿ ದೇಶವನ್ನು ವಿಭಜಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ ನ ಮುದ್ರೆಗಳಿವೆ ಎಂದು ಅವರು ಹೇಳಿದರು.
“ನಾವು ತುಷ್ಟೀಕರಣವನ್ನ ಕೊನೆಗೊಳಿಸುತ್ತಿದ್ದೇವೆ ಮತ್ತು ‘ಸಂತೋಷಿಕರಣ’ (ಜನರನ್ನು ತೃಪ್ತಿಪಡಿಸುವುದು) ಗಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಹೇಳಿದರು.
ತುಷ್ಟೀಕರಣದ ರಾಜಕೀಯವು ದೇಶದ ಪ್ರಾಮಾಣಿಕ ಜನರ ಹಕ್ಕನ್ನ ಕಸಿದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.
BREAKING: ‘ಅಪಾರ್ಮೆಂಟ್ ನಿವಾಸಿಗಳಿಗೆ ಆಮಿಷ ಪ್ರಕರಣ’ದಲ್ಲಿ ‘ಡಿ.ಕೆ ಶಿವಕುಮಾರ್’ಗೆ ಬಿಗ್ ರಿಲೀಫ್