ಬೆಂಗಳೂರು: ರಾಜ್ಯ ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿಜ್ಞಾನ ವಿಭಾಗ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಕಳೆದ ವರ್ಷ ಜಾರಿಗೆ ತಂದಿದ್ದ ‘ವಿದ್ಯಾವಿಜೇತ’ ಕಾರ್ಯಕ್ರಮವನ್ನು 2025–26ನೇ ಸಾಲಿನಲ್ಲೂ ಮುಂದುವರೆಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮೇಲೆ ಓದಲಾದ ಕ್ರಮಾಂಕ(1)ರಲ್ಲಿನ 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ ಕಂಡಿಕೆ 111(9)ರಲ್ಲಿ ಈ ಕೆಳಕಂಡಂತೆ ಘೋಷಿಸಲಾಗಿರುತ್ತದೆ. “ವಿದ್ಯಾ ವಿಜೇತ ಕಾರ್ಯಕ್ರಮದಡಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 25000 ವಿದ್ಯಾರ್ಥಿಗಳಿಗೆ CET/NEET/JEE ತರಬೇತಿ ನೀಡಲಾಗಿದ್ದು, ಸದರಿ ಕಾರ್ಯಕ್ರಮವನ್ನು ಮುಂದುವರೆಸಲು 5 ಕೋಟಿ ರೂ ಒದಗಿಸಲಾಗುವುದು.”
ಮೇಲೆ ಓದಲಾದ ಕ್ರಮಾಂಕ(2)ರಲ್ಲಿನ ಸರ್ಕಾರದ ಆದೇಶದಲ್ಲಿ, 2024-25ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಆಯವ್ಯಯ ಕಂಡಿಕೆ 101ಕ್ಕೆ ಸಂಬಂಧಿಸಿದಂತೆ, “ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಸಂಯೋಜನೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆನ್-ಲೈನ್ ತರಗತಿಗಳ ಮೂಲಕ NEET/JEE/CET ಪ್ರವೇಶ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲು ಒಟ್ಟು ರೂ.10.00 ಕೋಟಿ ವೆಚ್ಚದಲ್ಲಿ ಅಂದಾಜು 20,000 ವಿದ್ಯಾರ್ಥಿಗಳಿಗೆ ಹಾಗೂ ಆದರ್ಶ ಯೋಜನೆ ಅಡಿಯಲ್ಲಿ ರೂ.2.50 ಕೋಟಿ ವೆಚ್ಚದಲ್ಲಿ 5,000 ವಿದ್ಯಾರ್ಥಿಗಳಿಗೆ ಯೋಜನೆಯನ್ನು ಸಂಯೋಜಿಸಿ ಒಟ್ಟಾರೆ ರೂ.12.50 ಕೋಟಿಗಳ ವೆಚ್ಚದಲ್ಲಿ 25,000 ವಿದ್ಯಾರ್ಥಿಗಳಿಗೆ ಟೆಂಡರ್ ಮೂಲಕ ತರಬೇತುದಾರ ಸಂಸ್ಥೆಯನ್ನು ಗುರುತಿಸಿ, ತರಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅನುಮತಿ ನೀಡಿ ಆದೇಶಿಸಲಾಗಿದೆ.
ಮೇಲೆ ಓದಲಾದ ಕ್ರಮಾಂಕ(3)ರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ, 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಮತ್ತು ಇತರೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಒದಗಿಸಿರುವ ಅನುದಾನದ ಕುರಿತು “Budget Advice”ನ್ನು ಹೊರಡಿಸಲಾಗಿದೆ.
ಮೇಲೆ ಓದಲಾದ ಕ್ರಮಾಂಕ(4)ರಲ್ಲಿನ ಪ್ರಸ್ತಾವನೆಯಲ್ಲಿ, ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಇವರು 2025-26ನೇ ಸಾಲಿನಲ್ಲಿ 051 ರಲ್ಲಿ ರೂ 100.00 ಲಕ್ಷಗಳು ಸಾಮಾನ್ಯ ವೆಚ್ಚಗಳಿಗೆ ಹಾಗೂ 381.00 ಲಕ್ಷಗಳು ವಿದ್ಯಾ ವಿಜೇತ ಕಾರ್ಯಕ್ರಮಕ್ಕೆ ಸಂಬಂಧಿಸಿರುತ್ತದೆ.