Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಹೆಣ್ಣು ಮಕ್ಕಳ ಜೀವಕ್ಕೂ ಗ್ಯಾರೆಂಟಿಯಿಲ್ಲ : ವಿಪಕ್ಷ ನಾಯಕ ಆರ್. ಅಶೋಕ್

ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ : ಸ್ಕ್ರಾಪ್, ಪ್ಲಾಸ್ಟಿಕ್ ಸಂಗ್ರಹಿಸಿಟ್ಟಿದ್ದ ಗೋದಾಮು ಬೆಂಕಿಗಾಹುತಿ!

ALERT : ಮೊಬೈಲ್ ನಲ್ಲಿ ಡಿಲೀಟ್ ಮಾಡಿದ ಮಾತ್ರಕ್ಕೆ `ಚಾಟ್’ ಶಾಶ್ವತವಾಗಿ ಅಳಿಸಿಹೋಗಲ್ಲ : ಡೇಟಾ ಬಗ್ಗೆ ಇಲ್ಲಿದೆ ಅಸಲಿ ಸತ್ಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಹೆಲ್ಮೆಟ್ ವಿತರಣೆ.!
KARNATAKA

ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಹೆಲ್ಮೆಟ್ ವಿತರಣೆ.!

By kannadanewsnow57

ರಾಯಚೂರು: ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ರಾಯಚೂರು, ಎನ್ಹೆಚ್ಎಐ ಪ್ರಾದೇಶಿಕ ಕಚೇರಿ ಬೆಂಗಳೂರು ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ರಸ್ತೆ ಸುರಕ್ಷತಾ ಮಾಸ-2026ರ ಅಂಗವಾಗಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿನೂತನ ಜಾಗೃತಿ ಅಭಿಯಾನ ನಡೆಯಿತು.

ಈ ಕಾರ್ಯಕ್ರಮದ ಭಾಗವಾಗಿ ಜನವರಿ 31ರಂದು ಶನಿವಾರ ದಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಯಚೂರಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಲ್ಮೆಟ್ಗಳನ್ನು ವಿತರಿಸಲಾಯಿತು.

ಈ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಕಾರ್ಯಕ್ರಮದಲ್ಲಿ ಐಎಸ್ಐ ಗುರುತಿನ ಹೆಲ್ಮೆಟ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಪಾಲಿಸಬೇಕು ಮತ್ತು ಹೆಲ್ಮೆಟ್ ಧರಿಸುವ ಮಹತ್ವ ಅರಿಯಬೇಕು. ನ್ಯಾಷನಲ್ ಹೈವೇ ಕಡೆಯಿಂದ ನಮ್ಮ ಜಿಲ್ಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಹೆಲ್ಮೆಟ್ ಉಚಿತವಾಗಿ ನೀಡಲಾಗುತ್ತಿದ್ದು, ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕೆಂದರು.

ಹೆಲ್ಮೆಟ್ ಧರಿಸದೇ ತಲೆಗೆ ಪೆಟ್ಟು ಬಿದ್ದು ಜೀವ ಕಳೆದುಕೊಂಡ ಹೆಚ್ಚಿನ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ದಾಖಲಾಗಿವೆ. ಜೀವ ರಕ್ಷಣೆ ಮತ್ತು ಕುಟುಂಬದ ಭದ್ರತೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ನಗರದಲ್ಲಿ ಹೆದ್ದಾರಿ ಹೋಗಿದ್ದರಿಂದ ಲಾರಿ, ಟಿಪ್ಪರ್, ದೊಡ್ಡ ಪ್ರಮಾಣದ ಬಾರಿ ವಾಹನಗಳ ಸಂಚಾರದಿAದ ಜೊತೆಗೆ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಕಾರಣಕ್ಕಾಗಿ ಹಾಗೂ ಹೆಲ್ಮೆಟ್ ಇಲ್ಲದೆ ಸಂಚಾರ ಮಾಡುತ್ತಿದ್ದರಿಂದ ಅಪಘಾತದಲ್ಲಿ ಸಾವುಗಳಾಗುತ್ತಿವೆ ಎಂದರು.

ನಗರದಲ್ಲಿ ಬಾರಿ ವಾಹನಗಳ ಸಂಚಾರ ತಡೆಗಾಗಿ ನಗರದ ಹೊರಗಡೆ ರಿಂಗ್ ರಸ್ತೆಗೆ ಈಗಾಗಲೇ ಟೆಂಡರ್ ಹಂತದಲ್ಲಿದ್ದು, ತ್ವರಿತವಾಗಿ ಕೈಗೊಳ್ಳಲಾಗುತ್ತದೆ. ಕಳೆದು ಹೋದ ಜೀವ ಯಾವತ್ತಿಗೂ ಬರುವುದಿಲ್ಲ. ತಮ್ಮನ್ನು ನಂಬಿಕೊAಡಿರುವ ಕುಟುಂಬದ ಆಧಾರವಾಗಿರುವ ತಾವುಗಳು ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ವಾಹನ ಚಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಈ ವೇಳೆ, ಗೌರವಾನ್ವಿತ ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ.ಸಾತ್ವಿಕ್ ಅವರು ಮಾತನಾಡಿ, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದಿಂದ 500 ಹೆಲ್ಮೆಟ್ ವಿತರಣೆ ಮಾಡುತ್ತಿದ್ದು, ಹಲ್ಮೆಟ್ ಪಡೆದವರು ಕಡ್ಡಾಯವಾಗಿ ಧರಿಸಬೇಕು. ಹೆಲ್ಮೆಟ್ ಪಡೆದವರ ಹೆಸರು ಮತ್ತು ವಿಳಾಸ ನಮೂದಿಸಿಕೊಂಡಿದ್ದು, ಹೆಲ್ಮೆಟ್ ಇಲ್ಲದೆ ಸಂಚಾರ ಮಾಡಿದ ಸಂದರ್ಭದಲ್ಲಿ ಪೊಲೀಸ್ ಕೈಗೆ ಸಿಕ್ಕಲ್ಲಿ ಹೆಲ್ಮೆಟ್ ಹಾಕದೇ ಇರುವುದಕ್ಕೆ ದಂಡದ ಜೊತೆಗೆ ಹೆಲ್ಮೆಟ್ ಪಡೆದುಕೊಂಡು ಹಾಕದೇ ಇರುವುದಕ್ಕೆ ಮತ್ತೊಂದು ದಂಡ ಹಾಕಲಾಗುತ್ತದೆ ಎಂದರು.

ರಸ್ತೆ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಅಪಘಾತದಲ್ಲಿ ವಾಹನ ಚಾಲನೆ ಪರವಾಗಿ ಇಲ್ಲದೆ ಸಾವಿನಪ್ಪಿದರೆ ದೊಡ್ಡ ಪ್ರಮಾಣದ ದಂಡದ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ. ಎಫ್ಐಆರ್ ದಾಖಲಾದಲ್ಲಿ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕೆ ತೊಂದರೆ ಉಂಟಾಗುತ್ತದೆ ಎಂದರು.

ಈ ವೇಳೆ ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮಹೊಪಾತ್ರ ಅವರು ಮಾತನಾಡಿ, ರಸ್ತೆ ಅಪಘಾತದಲ್ಲಿ ಹೆಲ್ಮೆಟ್ ಇಲ್ಲದೇ ಜೀವ ಕಳೆದುಕೊಳ್ಳುವುದು ಹೆಚ್ಚಿದೆ. ರಸ್ತೆ ಸಂಚಾರದ ಸಮಯದಲ್ಲಿ ಯುವಕರು ಹೆಚ್ಚಾಗಿ ಬೈಕ್ ವೀಲಿಂಗ್ ಮಾಡುತ್ತಿರುವುದು ಗಮನಿಸಿದ್ದೇನೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡು ಖುಷಿ ಪಡುತ್ತಿದ್ದಾರೆ. ಅಚಾತುರ್ಯ ಉಂಟಾದಲ್ಲಿ ಹೋದ ಜೀವ ಬರೋದಿಲ್ಲ. ಯುವಕರು ಇಂತಹ ಸಾಹಸ ಮಾಡುವುದು ಬಿಡಬೇಕು ಎಂದರು.

ಈ ವೇಳೆ ರಾಯಚೂರು ಡಿವೈ.ಎಸ್.ಪಿ ಶಾಂತವೀರ ಅವರು ಮಾತನಾಡಿ, ಯುವಕ ಹಾಗೂ ಯುವತಿಯರು ತಮ್ಮ ಇಷ್ಟದ ಮೊಬೈಲ್ ಹಾಳಾಗದಂತೆ ಕವರ್ ಹಾಕಿಸುತ್ತೀರಿ. ಅದಕ್ಕಿಂತ ದೊಡ್ಡದು ನಿಮ್ಮ ಜೀವನ ಉಳಿಸುವ ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ರಸ್ತೆ ಅಪಘಾತದಲ್ಲಿ ಶೇ.70 ರಷ್ಟು ಹೆಲ್ಮೆಟ್ ಇಲ್ಲದೆ ಜೀವನ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಪ್ರತಿ ವರ್ಷ 12 ರಿಂದ 13 ಸಾವಿರ ಜನರು ರಸ್ತೆ ಅಪಘಾತಕ್ಕೆ ಈಡಾಗುತ್ತಿದ್ದಾರೆ ಎಂದರು.

ಇದೇ ಫೆಬ್ರುವರಿ 05, 06 ಹಾಗೂ 07ರಂದು ನಡೆಯುವ ರಾಯಚೂರು ಉತ್ಸವಕ್ಕೆ ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಆಗಮಿಸಬೇಕು. ಪಾರ್ಕಿಂಗ್ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಬೇಕೆಂದು ಹೇಳಿದರು.

Free helmet distribution to college students!
Share. Facebook Twitter LinkedIn WhatsApp Email

Related Posts

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಹೆಣ್ಣು ಮಕ್ಕಳ ಜೀವಕ್ಕೂ ಗ್ಯಾರೆಂಟಿಯಿಲ್ಲ : ವಿಪಕ್ಷ ನಾಯಕ ಆರ್. ಅಶೋಕ್

1 Min Read

ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ : ಸ್ಕ್ರಾಪ್, ಪ್ಲಾಸ್ಟಿಕ್ ಸಂಗ್ರಹಿಸಿಟ್ಟಿದ್ದ ಗೋದಾಮು ಬೆಂಕಿಗಾಹುತಿ!

1 Min Read

ಚಿಕ್ಕಮಗಳೂರು : ರೈತರಿಂದ 30 ಸಾವಿರ ಲಂಚ ಪಡೆಯುವಾಗ, ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಇಲಾಖೆ ಅಧಿಕಾರಿಗಳು

1 Min Read
Recent News

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಹೆಣ್ಣು ಮಕ್ಕಳ ಜೀವಕ್ಕೂ ಗ್ಯಾರೆಂಟಿಯಿಲ್ಲ : ವಿಪಕ್ಷ ನಾಯಕ ಆರ್. ಅಶೋಕ್

ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ : ಸ್ಕ್ರಾಪ್, ಪ್ಲಾಸ್ಟಿಕ್ ಸಂಗ್ರಹಿಸಿಟ್ಟಿದ್ದ ಗೋದಾಮು ಬೆಂಕಿಗಾಹುತಿ!

ALERT : ಮೊಬೈಲ್ ನಲ್ಲಿ ಡಿಲೀಟ್ ಮಾಡಿದ ಮಾತ್ರಕ್ಕೆ `ಚಾಟ್’ ಶಾಶ್ವತವಾಗಿ ಅಳಿಸಿಹೋಗಲ್ಲ : ಡೇಟಾ ಬಗ್ಗೆ ಇಲ್ಲಿದೆ ಅಸಲಿ ಸತ್ಯ!

SHOCKING : ಉತ್ತರಪ್ರದೇಶದಲ್ಲಿ ಭೀಕರ ಬಿರುಗಾಳಿಗೆ ಹಾರಿ ಹೋದ ವ್ಯಕ್ತಿ, ಬೆಚ್ಚಿ ಬೀಳಿಸಿದ ವಿಡಿಯೋ | Watch Video

State News
KARNATAKA

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಹೆಣ್ಣು ಮಕ್ಕಳ ಜೀವಕ್ಕೂ ಗ್ಯಾರೆಂಟಿಯಿಲ್ಲ : ವಿಪಕ್ಷ ನಾಯಕ ಆರ್. ಅಶೋಕ್

By ಸುರೇಶ್‌ KARNATAKA 1 Min Read

ಬೆಂಗಳೂರು : ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಹೆಣ್ಣು ಮಕ್ಕಳ ಜೀವಕ್ಕೂ ಗ್ಯಾರೆಂಟಿಯಿಲ್ಲ. ರಾಜ್ಯದಲ್ಲಿ ದಿನಕ್ಕೆ ಸರಾಸರಿ 67 ಜನರು ನಾಪತ್ತೆಯಾಗುತ್ತಿದ್ದಾರೆ.…

ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ : ಸ್ಕ್ರಾಪ್, ಪ್ಲಾಸ್ಟಿಕ್ ಸಂಗ್ರಹಿಸಿಟ್ಟಿದ್ದ ಗೋದಾಮು ಬೆಂಕಿಗಾಹುತಿ!

ಚಿಕ್ಕಮಗಳೂರು : ರೈತರಿಂದ 30 ಸಾವಿರ ಲಂಚ ಪಡೆಯುವಾಗ, ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಇಲಾಖೆ ಅಧಿಕಾರಿಗಳು

BIG NEWS : ಪತ್ನಿಗೆ ಜೀವನಾಂಶ ನೀಡದ ಪತಿಗೆ ಬಂಧನ ವಾರೆಂಟ್ ಜಾರಿ ಮಾಡಬಹುದು : ಹೈಕೋರ್ಟ್ ಮಹತ್ವದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.