ಬೆಂಗಳೂರು: ನಗರದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಿನಾಂಕ 22-02-2025ರಂದು ಬೆಂಗಳೂರಿನ ವಿದ್ಯಾಮಾನ್ಯನಗರದಲ್ಲಿ ಉಚಿತ ಆರೋಗ್ಯ ತಪಾಸಣೆ, ವೈದ್ಯಕೀಯ ಶಿಬಿರ ಮತ್ತು ಔಷಧ ವಿತರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ಕುರಿತಂತೆ ಸಮೃದ್ಧಿ ಸೇವಾ ಚಾರಿಟೇಬಲ್ ಫೌಂಡೇಶನ್ (ರಿ.)ಯ ಲಕ್ಷ್ಮಿಕಾಂತ್ ಅವರು ಮಾಹಿತಿ ಹಂಚಿಕೊಂಡಿದ್ದು, ಫೆಬ್ರವರಿ 22ರಂದು ಉಚಿತ ಆರೋಗ್ಯ ತಪಾಸಣೆ ವೈದ್ಯಕೀಯ ಶಿಬಿರ & ಔಷದಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಯಾವೆಲ್ಲ ಉಚಿತ ಆರೋಗ್ಯ ತಪಾಸಣೆ.?
1 ಕಣ್ಣಿನ ತಪಾಸಣೆ
2 ದಂತ ತಪಾಸಣೆ ಮತ್ತು ಚಿಕಿತ್ಸೆ
3 ಕನ್ಸಲ್ಟಿoಗ್ ಮತ್ತು ಮೂಲಭೂತ ದೇಹ ತಪಾಸಣೆ
ಎಷ್ಟು ಹೊತ್ತಿಂದ ಎಷ್ಟು ಹೊತ್ತಿನವರೆಗೆ.?
ಶನಿವಾರ 22 ಫ್ರೆಬ್ರವರಿ 2025 ಬೆಳಗ್ಗೆ 9.30 ರಿಂದ ಸಂಜೆ 5.00ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಬೆಂಗಳೂರಿನ ಎಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ.?
123 ಮಂಜುನಾಥ ದೇವಸ್ಥಾನ ಎದುರು ಅಂದ್ರಹಳ್ಳಿ ಮುಖ್ಯರಸ್ತೆ ಕಾಳಿಕಾ ನಗರ. ವಿದ್ಯಾಮಾನ್ಯನಗರ ಬೆಂಗಳೂರು 560058. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9060165183.
ವರದಿ: ವಸಂತ ಬಿ ಈಶ್ವರಗೆರೆ
ರಾತ್ರಿ ವೇಳೆ ‘ಸಿಂಗಲ್ ಫೇಸ್’ ಕೃಷಿ ಪಂಪ್ ಸೆಟ್ ನೀರಾವರಿಗೆ ಬಳಸಬೇಡಿ: ರೈತರಿಗೆ ಬೆಸ್ಕಾಂ ಮನವಿ
ALERT : `ಬಾಟಲ್ ನೀರು’ ಕುಡಿಯುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ.!