ಬೆಂಗಳೂರು: ನಗರಲ್ಲಿ ಪುಡ್ ಡೆಲಿವರಿ ಬಾಯ್ ಗಳನ್ನು ಟಾರ್ಗೆಟ್ ಮಾಡಿ ರಾಬರಿ ಮಾಡುತ್ತಿದ್ದಂತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬೆಳ್ಳಂದೂರು ಠಾಣೆಯ ಪೊಲೀಸರು ಪುಡ್ ಡಿಲಿವರ್ ಬಾಯ್ ಗಳನ್ನೇ ಟಾರ್ಗೆಟ್ ಮಾಡಿ, ಸುಲಿಗೆ ಮಾಡುತ್ತಿದ್ದಂತ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ನೇಪಾಳ ಮೂಲದ ಪಾರಸ್ ಸಿಂಗ್(25), ಬಿಪಿನ್ ಕರ್ಕಿ(20), ಮುಕೇಶ್ ಸಾಯಿ(19) ಹಾಗೂ ಸಮೀರ್ ಲೋಹಾಲ್ ಎಂಬುದಾಗಿ ಗುರುತಿಸಲಾಗಿದೆ.
ಸೆಕ್ಯೂರಿಟಿ, ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಂತ ಆರೋಪಿಗಳು, ಪುಡ್ ಡೆಲಿವರಿ ಬಾಯ್ ಗಳನ್ನು ರಾಬರಿ ಮಾಡುತ್ತಿದ್ದರು. ಪುಡ್ ಡೆಲಿವರಿ ಬಾಯ್ಸ್ ಅಡ್ಡಗಟ್ಟಿ ಮೊಬೈಲ್, ಹಣ ಕದಿಯುತ್ತಿದ್ದರು.
ಸೆಪ್ಟೆಂಬರ್.13ರ ರಾತ್ರಿ ಕಸವನಹಳ್ಳಿ ರಸ್ತೆಯಲ್ಲಿ ಪುಡ್ ಡೆಲಿವರಿ ಬಾಯ್ ಸುರೇಶ್ ಎಂಬಾತನಿಗೆ ಹಲ್ಲೆ ಮಾಡಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಸುರೇಶ್ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪುಡ್ ಡೆಲಿವರಿ ಬಾಯ್ ಸುರೇಶ್ ನೀಡಿದಂತ ದೂರು ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂಗ 9 ಮೊಬೈಲ್, ಮೂರು ಬೈಕ್ ವಶಕ್ಕೆ ಪಡೆದಿದ್ದಾರೆ. ಬಂಧಿತ ನಾಲ್ವರು ಆರೋಪಿಗಳು ಬೆಳ್ಳಂದೂರು ಮಾತ್ರವಲ್ಲದೇ, ಹೆಬ್ಬಗೋಡಿ, ಪರಪ್ಪನ ಅಗ್ರಹಾರ, ಬಂಡೆಪಾಳ್ಯ, ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಮೊಬೈಲ್ ಸ್ಫೋಟ: ಬಹು ಅಂಗಾಂಗಕ್ಕೆ ಹಾನಿ-ಪ್ರಾಣಾಪಾಯದಿಂದ ಪಾರು ಮಾಡಿದ ಸಕಾಲಿಕ ಚಿಕಿತ್ಸೆ