ಬೆಂಗಳೂರು: ಇಂದು ಭಾರತ ತೊರೆಯಲು ಪಾಕಿಸ್ತಾನಿ ಪ್ರಜೆಗಳಿಗೆ ಕೇಂದ್ರ ಸರ್ಕಾರ ಗಡುವು ನೀಡಿತ್ತು. ಆ ಆದೇಶದಂತೆ ಬೆಂಗಳೂರಿನಲ್ಲಿ ಇದ್ದಂತ ನಾಲ್ವರು ಪಾಕಿಸ್ತಾನಿ ಪ್ರಜೆಗಳು ತೊರೆದಿದ್ದಾರೆ. ಆದರೆ ಇನ್ನೂ 91 ಮಂದಿ ಇಲ್ಲೇ ಉಳಿದಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿದ್ದಂತ ನಾಲ್ವರು ಪಾಕಿಸ್ತಾನಿ ಪ್ರಜೆಗಳು ಕರ್ನಾಟಕ ತೊರೆದಿದ್ದಾರೆ. ನಿನ್ನೆ ಮೂವರು, ಇಂದು ಒಬ್ಬರು ಪಾಕಿಸ್ತಾನಕ್ಕೆ ಮರಳಿರುವುದಾಗಿ ತಿಳಿಸಿದು ಬಂದಿದೆ.
ಇನ್ನೂ ಕರ್ನಾಟಕದಲ್ಲಿ 91 ಪಾಕಿಸ್ತಾನಿ ಪ್ರಜೆಗಳು ಉಳಿದಿದ್ದಾರೆ. ಇವರು ದೀರ್ಘಾವಧಿಯ ವೀಸಾ ಪಡೆದು ಕರ್ನಾಟಕಕ್ಕೆ ಬಂದಿದ್ದಾರೆ. ಮದುವೆಯಾಗಿ ಇಲ್ಲಿಯೇ ಉಳಿದಿದ್ದಾರೆ. ಇವರಿಗೆ ಯಾವುದೇ ಆದೇಶವನ್ನು ಕೇಂದ್ರ ಸರ್ಕಾರ ಮಾಡಿಲ್ಲ. ಇವರ ವೀಸಾ ಹೊರತಾಗಿ 14 ಬಗೆಯ ಪಾಕಿಸ್ತಾನಿಗರಿಗೆ ನೀಡಿದ್ದ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಇಂದಿನ ಒಳಗಾಗಿ ಭಾರತ ತೊರೆಯುವಂತೆ ಗಡುವು ನೀಡಿತ್ತು.