ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕೆ ಎಸ್ ಆರ್ ಟಿಸಿಗೆ ಪ್ರಶಸ್ತಿಗಳ ಸರಮಾಲೆ ಮುಂದುವರೆದಿದೆ. ಇದೀಗ ಕನ್ನಡಿಗರ ಹೆಮ್ಮೆಯ ಕೆ ಎಸ್ ಆರ್ ಟಿಸಿಗೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು ಗರಿಮೆ ಸಂದಿದೆ.
ಹೌದು.. ಕೆ.ಎಸ್. ಆರ್.ಟಿ.ಸಿ ಗೆ 04 ರಾಷ್ಟ್ರೀಯ ಬಿಸಿನೆಸ್ ಅವಾರ್ಡ್ ಫಾರ್ ಲೀಡರ್ಶಿಪ್ & ಎಕ್ಸಲೆನ್ಸಿ ಪ್ರಶಸ್ತಿ-2025 ಲಭಿಸಿದೆ. ಕೆ.ಎಸ್.ಆರ್.ಟಿ.ಸಿ ಯು ಕೈಗೊಂಡಿರುವ ಅತ್ಯುತ್ತಮ ಪ್ರಯಾಣಿಕರ ಸ್ನೇಹಿ ಹಾಗೂ ಮಾಹಿತಿ ತಂತ್ರಜ್ಞಾನದ ಉಪಕ್ರಮಗಳಿಗಾಗಿ 04 ರಾಷ್ಟ್ರೀಯ ಬಿಸಿನೆಸ್ ಅವಾರ್ಡ್ ಫಾರ್ ಲೀಡರ್ಶಿಪ್ & ಎಕ್ಸಲೆನ್ಸಿ ಪ್ರಶಸ್ತಿಯು ಈ ಕೆಳಕಂಡ ವರ್ಗಗಳಲ್ಲಿ
- Most Best use of Technology
- Most Innovative Company of the year
- Most Customer Friendly Company of the year
- Best Brand Development ಲಭಿಸಿರುತ್ತದೆ.
ಮುಂಬಯಿನ ಹೋಟಲ್ ಪಾರ್ಲೆ ಇಂಟರ್ನ್ಯಾಷನಲ್ ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮೋನಾಲಿ ಬಾಗುಲ್, ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, VE BIZTALK ಮೀಡಿಯಾ, ರವರು ನಿಗಮಕ್ಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ರಾಧ ಎಲ್. ಗುಂಡಳ್ಳಿ, ಉಪ ಉಗ್ರಾಣ ಮತ್ತು ಖರೀದಿ ನಿಯಂತ್ರಕರು ಹಾಗೂ ಅಶೋಕ್ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಚಾಮರಾಜನಗರ ವಿಭಾಗ ರವರು ನಿಗಮದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಈ ಹೊಸ ಮಾರ್ಗದಲ್ಲಿ ‘BMTC ಬಸ್’ ಸಂಚಾರ ಆರಂಭ
ಉದ್ಯೋಗವಾರ್ತೆ: 51,000 ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರದಿಂದ ಆದೇಶ , ಇಲ್ಲಿದೆ ಸಂಪೂರ್ಣ ಮಾಹಿತಿ..!