ಬಳ್ಳಾರಿ: ಇಂದು ನಗರದ ಕಲ್ಯಾಣಿ ಜ್ಯೂವೆಲ್ಲರ್ ಶಾಪ್ ನಲ್ಲಿ ಎಸಿ ಬ್ಲಾಸ್ ಆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ.
ಬಳ್ಳಾರಿ ನಗರದ ತೇರು ಬೀದಿಯಲ್ಲಿರುವಂತ ಚಿನ್ನಾಭರಣ ಮಾರಾಟ ಮಳಿಗೆ ಕಲ್ಯಾಣಿ ಜ್ಯೂವೆಲ್ಲರ್ ಶಾಪ್ ನಲ್ಲಿ ಇಂದು ಸಂಜೆ ಎಸಿ ದಿಢೀರ್ ಸ್ಪೋಟಗೊಂಡಿದೆ. ಇದರಿಂದಾಗಿ ನಾಲ್ವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಪೋಟಗೊಂಡಿದೆ ಎನ್ನಲಾಗಿದೆ. ಎಸಿ ಸ್ಪೋಟಗೊಂಡ ರಭಸಕ್ಕೆ ಆಭರಣ ಮಳಿಗೆಯ ಕಿಟಕಿ ಗಾಜುಗಳು ಒಡೆದು, ಚಿನ್ನಾಭರಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾವೆ ಎನ್ನಲಾಗುತ್ತಿದೆ.
ಎಸಿ ಸ್ಪೋಟದಿಂದ ಉಂಟಾದಂತ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿಯನ್ನು ನಂದಿಸಿದ್ದಾರೆ.
BREAKING: ‘ಬಜಾಜ್ ಫೈನಾನ್ಸ್’ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ ‘RBI’ | Bajaj Finance
BREAKING: ಕರ್ನಾಟದ 6 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.3ರಂದು ಮತದಾನ, ಜೂ.6ಕ್ಕೆ ಫಲಿತಾಂಶ ಪ್ರಕಟ