ವಿಜಯಪುರ: ಜಿಲ್ಲೆಯ ಚಡಚಣದಲ್ಲಿನ ಎಸ್ ಬಿ ಐ ಶಾಖೆಯಲ್ಲಿ ದರೋಡೆ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ಶಾಖೆಯ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಹಾರ ರಾಜ್ಯದ ರಾಕೇಶ್ ಕುಮಾರ್ ಸಹಾನಿ, ರಾಜಕುಮಾರ ಪಾಸ್ವಾನ, ರಕ್ಷಕ ಕುಮಾರ್ ಮಾತೋ ಎಂಬ ಮೂವರು ಆರೋಪಿಗಳನ್ನು ಎಡೆಮುರಿ ಕಟ್ಟಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳೆಲ್ಲರೂ 21 ರಿಂದ 22 ವರ್ಷ ವಯಸ್ಸಿನ ಯುವಕರಾಗಿದ್ದಾರೆ. ಈಗ ಬಂಧಿಸಿರುವಂತ ಮೂವರು ಆರೋಪಿಗಳು ಪ್ರಕರಣದ ಆರೋಪಿಗಳಿಗೆ ಅಕ್ರಮವಾಗಿ ಪಿಸ್ತೂಲ್ ಪೂರೈಸಿದ್ದಲ್ಲದೇ, ಕೃತ್ಯಕ್ಕೆ ಸಹಕಾರ ನೀಡಿದ್ದರು. ಬಂಧಿತ ಮತ್ತೋರ್ವ ಆರೋಪಿ ಮಹಾರಾಷ್ಟ್ರ ಮೂಲದವನಾಗಿದ್ದು, ಆತನ ಹೆಸರು ಬಹಿರಂಗ ಪಡಿಸಿಲ್ಲ. ಆರೋಪಿಗಳ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹೀಗಿದೆ ಇಂದಿನ ‘ರಾಜ್ಯ ಸಚಿವ ಸಂಪುಟ ಸಭೆ’ಯ ಸಂಪೂರ್ಣ ಹೈಲೈಟ್ಸ್ | Karnataka Cabinet Meeting
BREAKING: 2,000 ಲಂಚ ಸ್ವೀಕರಿಸುವಾಗ ಉಪ ತಹಶೀಲ್ದಾರ್, ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆ