ಶಿವಮೊಗ್ಗ: ದಿನಾಂಕ 31-03-2025ರಂದು ಸಾಗರ ತಾಲ್ಲೂಕು ಆರ್ಯ ಈಡಿಗರ ಸಂಘಕ್ಕೆ ಬೆಳ್ಳಿ ಹಬ್ಬ. ಈ ಹಬ್ಬದ ಆಚರಣೆಯ ಹಿನ್ನಲೆಯಲ್ಲಿ ನೂತನ ಈಡಿಗರ ಸಮುದಾಯ ಭವನ, ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅಧ್ಯಕ್ಷ ಬಿ.ಎಂ ಮಂಜಪ್ಪ ಮರಸ ಅವರು, ಸಾಗರ ಪ್ರಾಂತ ಆರ್ಯ ಈಡಿಗರ ಸಂಘದ ಬೆಳ್ಳಿ ಹಬ್ಬದ ಪ್ರಯುಕ್ತ ನೂತನ ಸಮುದಾಯ ಭವನ, ವಾಣಿಜ್ಯ ಮಳಿಗೆ ಶಂಕುಸ್ಥಾಪನೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಮಾರ್ಚ್.31ರಂದು ಹಮ್ಮಿಕೊಳ್ಳಲಾಗಿದೆ ಎಂದರು.
ಮಾರ್ಚ್.31ರಂದು ಬೆಳಿಗ್ಗೆ 10.30ಕ್ಕೆ ವರದಹಳ್ಳಿ ರಸ್ತೆಯಲ್ಲಿ ಈಡಿಗರ ಸಮುದಾಯ ಭವನ ನಿರ್ಮಾಣದ ಶಂಕುಸ್ಥಾಪನ ಕಾರ್ಯವನ್ನು ಸಚಿವ ಮಧು ಬಂಗಾರಪ್ಪ ನೆರವೇರಿಸಲಿದ್ದಾರೆ. ವಾಣಿಜ್ಯ ಮಳಿಗೆ ಶಂಕುಸ್ಥಾಪನೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ನೆರವೇರಿಸಲಿದ್ದಾರೆ. ಆ ಬಳಿಕ ಸಭಾ ಕಾರ್ಯಕ್ರಮ ನೆಡೆಯಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಬಿವೈ ರಾಘವೇಂದ್ರ ನೆರವೇರಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ಟಿ ನಾಯ್ಕ್ ಅವರು ಮಾಡಲಿದ್ದಾರೆ. ಆ ಬಳಿಕ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಡಾ.ಕಾಗೋಡು ತಿಮ್ಮಪ್ಪ ಹಾಗೂ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಧರ್ಮದರ್ಶಿ ಡಾ.ಎಸ್ ರಾಮಪ್ಪ ಅವರಿಗೆ ಸನ್ಮಾನಿಸಲಾಗುತ್ತದೆ ಎಂದರು.
ಮಾರ್ಚ್.31ರ ಈಡಿಗ ಸಮುದಾಯ ಭವನ, ವಾಣಿಜ್ಯ ಮಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಸುನೀಲ್ ಕುಮಾರ್, ವಿಜಯನಗರ ಶಾಸಕ ಗವಿಯಪ್ಪ ಹೆಚ್.ಆರ್, ಹಾಲಪ್ಪ.ಹೆಚ್, ಡಾ.ಜಿ.ಡಿ ನಾರಾಯಣಪ್ಪ, ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ ಹುಲ್ತಿಕೊಪ್ಪ ಸೇರಿದಂತೆ ಇತರರು ಉಪಸ್ಥಿತರಿಲಿದ್ದಾರೆ ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಾಗರ ಪ್ರಾಂತ್ಯ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಟಿ.ವಿ ಪಾಂಡುರಂಗ, ಕಾರ್ಯದರ್ಶಿ ಪರಮೇಶ್ವರ್ ಟಿ, ನಿರ್ದೇಶಕರಾದಂತ ಕಲಸೆ ಶಿವಪ್ಪ, ಮಹಾಬಲ ಕೌತಿ, ಗಿರೀಶ ಕೋವಿ, ಗುರುಮೂರ್ತಿ ಶಿರವಾಳ, ಬೆಳ್ಳಿಹಬ್ಬದ ಕಟ್ಟಡ ಸಮಿತಿ ಅಧ್ಯಕ್ಷ ತುಕಾರಾಮ ಬಿ ಶಿರವಾಳ, ಬೆಳ್ಳಿ ಹಬ್ಬ ಸಮಿತಿಯ ಸಂಚಾಲಕ ಹೆಚ್.ಎನ್ ದಿವಾಕರ ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ
ತಹಶೀಲ್ದಾರ್ ನ್ಯಾಯಾಲಯಗಳು 90 ದಿನಗಳಲ್ಲಿ ಇತ್ಯರ್ಥಪಡಿಸಬೇಕು: ಸಚಿವ ಕೃಷ್ಣಬೈರೇಗೌಡ
ಪೋಡಿ ದುರಸ್ಥಿ ಅಭಿಯಾನ ಚುರುಕುಗೊಳಿಸಿ: ‘ತಹಶೀಲ್ದಾರ್’ಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ