ಬೆಂಗಳೂರು: ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರ ಆಸ್ತಿ ಹಂಚಿಕೆ ವಿಚಾರವಾಗಿ ಎದ್ದಿದ್ದಂತ ವಿವಾದ, ಈಗ ಸುಖಾಂತ್ಯ ಕಂಡಿದೆ. ಬೆಂಗಳೂರಿನ 19ನೇ ಸಿಸಿಹೆಚ್ ನ್ಯಾಯಾಲಯ ಹಾಗೂ ಸೆಷನ್ಸ್ ಕೋರ್ಟ್ ಆಸ್ತಿ ವಿವಾದವನ್ನು ಇತ್ಯರ್ಥಗೊಳಿಸಿದೆ.
ಈ ಸಂಬಂಧ ಲೋಕ ಅದಾಲತ್ ನಲ್ಲಿ ಬಾಗಿಯಾಗಿದ್ದಂತ ಮುತ್ತಪ್ಪ ರೈ ಇಬ್ಬರು ಪತ್ನಿಯರನ್ನು ಸಂಧಾನ ಮಾಡಿ, ಆಸ್ತಿ ವಿವಾದವನ್ನು ಬಗೆ ಹರಿಸುವಲ್ಲಿ ಕೋರ್ಟ್ ಯಶಸ್ವಿಯಾಗಿದೆ.
ಅಂದಹಾಗೇ ಮುತ್ತಪ್ಪ ರೈ ಅವರ 2ನೇ ಪತ್ನಿ ಅನುರಾಧಾ ರೈ ಅವರು ಆಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿವಾದವನ್ನು ಸಂಧಾನದ ಮೂಲದ ನ್ಯಾಯಾಲಯವು ಇತ್ಯರ್ಥ ಪಡಿಸುವಲ್ಲಿ ಯಶಸ್ವಿಯಾಗಿದೆ.
ಮುತ್ತಪ್ಪ ರೈ ಅವರು ಮೃತಪಡುವ ಒಂದು ವರ್ಷದ ಹಿಂದೆ ಅಂದ್ರೆ 2019ರಲ್ಲಿ ತಮ್ಮ ಆಸ್ತಿಯ ಕುರಿತಂತೆ ವಿಲ್ ಮಾಡಿದ್ದರು. ಸುಮಾರು 41 ಪುಟಗಳ ವಿಲ್ ನಲ್ಲಿ ತಮ್ಮ ಪುತ್ರರಾದ ರಾಕಿ ರೈ, ರಿಕ್ಕಿ ರೈ, ಸಹೋದರನ ಪುತ್ರ ಅಶ್ವಿನಿ ರೈ, ತಮ್ಮ ಎರಡನೇ ಪತ್ನಿ ಅನುರಾಧಾ ರೈ ಸೇರಿದಂತೆ ಮನೆ ಕೆಲಸದವರ ಬಗ್ಗೆಯೂ ಉಲ್ಲೇಖಿಸಿದ್ದರು.
2020ರಲ್ಲಿ ಆಸ್ತಿ ಹಂಚಿಕೆ ಮಾಡುವಂತೆ 2ನೇ ಪತ್ನಿ ಅನುರಾಧಾ ರೈ ಕೋರ್ಟ್ ಮೆಟ್ಟಿಲೇರಿದ ಬಳಿಕ, ಮುತ್ತಪ್ಪ ರೈ ಆಸ್ತಿ ವಿವಾದ ಹೊರ ಬಿದ್ದಿತ್ತು. ಈಗ ನ್ಯಾಯಾಲಯವು ಕಾಂಪ್ರಮೈಸ್ ಪಿಟಿಷನ್ ಮೂಲಕ ಆಸ್ತಿಯ ವಿವಾದ ಇತ್ಯರ್ಥವಡಿಸಿದೆ. ಸುಮಾರು ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುತ್ತಪ್ಪ ರೈ ಅವರ 2ನೇ ಪತ್ನಿಗೆ ನೀಡಲಾಗಿದೆ.
ಹೀಗಿದೆ ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ ರೈ, ಪುತ್ರರಾದ ರಿಕ್ಕಿ ರೈ, ರಾಖಿ ರೈಗೆ ಹಂಚಿಕೆಯಾದ ಆಸ್ತಿ ವಿವರ
- 7 ಕೋಟಿ ಹಣ
- ಮಂಡ್ಯದ ಬಳಿಯ ಪಾಂಡವಪುರದ ಹತ್ತಿರದ 22 ಎಕರೆ ಜಮೀನು
- ಮೈಸೂರಿನಲ್ಲಿರುವಂತ 4800 ಚದುರ ಅಡಿಯ ನಿವೇಶನ ಹಾಗೂ ಮನೆ
- ನಂದಿಬೆಟ್ಟ ಬಳಿಯ ಕೆಂಪತಿಮ್ಮನಹಳ್ಳಿಯಲ್ಲಿರುವಂತ ಐದೂವರೆ ಎಕರೆ ಜಮೀನು ಹಂಚಿಕೆ ಮಾಡಲಾಗಿದೆ.
‘ಜಮ್ಮು-ಕಾಶ್ಮೀರ ಕ್ಯಾಬಿನೆಟ್’ ತನ್ನ ಮೊದಲ ಸಭೆಯಲ್ಲಿ ‘ರಾಜ್ಯ ಸ್ಥಾನಮಾನ’ದ ನಿರ್ಣಯವನ್ನು ಅಂಗೀಕಾರ
BREAKING : ಕಲಬುರ್ಗಿ ಜೈಲಲ್ಲಿ ಕೈದಿಗಳಿಗೆ ‘ರಾಜಾತಿಥ್ಯ’ ಆರೋಪ ಪ್ರಕರಣ : ‘CCB’ ತನಿಖೆಗೆ ವಹಿಸಿ ಕಮಿಷನರ್ ಆದೇಶ
ಆನ್ ಲೈನ್ ಸ್ಕ್ಯಾಮ್ ವಿರುದ್ಧ ಜಾಗೃತಿ: ಕೇಂದ್ರ ಸರ್ಕಾರದೊಂದಿಗೆ ಜಂಟಿ ಉಪಕ್ರಮವನ್ನು ಪ್ರಾರಂಭಿಸಿದ ‘ಮೆಟಾ’