ನವದೆಹಲಿ: ಜಪಾನ್ ನ ಸುಜುಕಿ ಮೋಟಾರ್ ಕಾರ್ಪೊರೇಷನ್ ನ ಮಾಜಿ ಅಧ್ಯಕ್ಷ ಸಮು ಸುಜುಕಿ (94) ನಿಧನರಾಗಿದ್ದಾರೆ ಎಂದು ಕಂಪನಿ ಶುಕ್ರವಾರ ಪ್ರಕಟಿಸಿದೆ. ಅವರು ಡಿಸೆಂಬರ್ 25 ರಂದು ಲಿಂಫೋಮಾದಿಂದ ನಿಧನರಾದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ
ಸುಜುಕಿ 2021 ರಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವವರೆಗೂ 40 ವರ್ಷಗಳ ಕಾಲ ಶಿಜುವೊಕಾ ಮೂಲದ ಕಂಪನಿಯನ್ನು ಮುನ್ನಡೆಸಿದರು. ಅವರ ನಾಯಕತ್ವದಲ್ಲಿ, ಸುಜುಕಿ ಮೋಟಾರ್ ಜಾಗತಿಕವಾಗಿ ವಿಸ್ತರಿಸಿತು, ಮಿನಿ ಕಾರುಗಳು ಮತ್ತು ಮೋಟಾರ್ಸೈಕಲ್ಗಳಿಗೆ ಹೆಸರುವಾಸಿಯಾಯಿತು.