ಶಿವಮೊಗ್ಗ : ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸ್ಪೀಕರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ.
ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರಿಗೆ ನಿನ್ನೆ ಜ್ವರ ಕಾಣಿಸಿಕೊಂಡು, ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಸಾಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರೋದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನೂ ಜ್ವರದಿಂದ ಬಳಲುತ್ತಿರುವಂತ ಕಾಗೋಡು ತಿಮ್ಮಪ್ಪ ಅವರನ್ನು, ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತ್ರ, ಹೆಚ್ಚಿನ ಚಿಕಿತ್ಸೆಗಾಗಿ ಅವರ ಪುತ್ರಿ ಡಾ.ರಾಜನಂದಿನಿ ಅವರು ಶಿವಮೊಗ್ಗಕ್ಕೆ ಕರೆದೊಯ್ದಿದ್ದಾರೆ. ಈಗ ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
93 ವರ್ಷದ ಕಾಗೋಡು ತಿಮ್ಮಪ್ಪ ಅವರು ಚಿಕಿತ್ಸೆಯ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಯಾರೂ ಆತಂಕ ಪಡುವಂತ ಅಗತ್ಯವಿಲ್ಲ ಅಂತ ಅವರ ಪುತ್ರಿ ಡಾ.ರಾಜನಂದಿನಿ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಜ್ವಲ್ ರೇವಣ್ಣಗೆ ಬಿಗ್ಶಾಕ್: ಪಾಸ್ ಪೋರ್ಟ್’ ರದ್ದತಿ ಪ್ರಕ್ರಿಯೆ ಆರಂಭ, ಶೀಘ್ರದಲ್ಲಿ ಬಂಧನ!
ರಾಜ್ಯದ ರೈತರಿಗೆ ‘ನೆಮ್ಮದಿ ಸುದ್ದಿ’ ; ಬರ ಪರಿಹಾರದ ಮೊತ್ತ ಸಾಲಕ್ಕೆ ವಜಾ ಮಾಡಿಕೊಳ್ಳದಂತೆ ಸಿಎಂ ಸೂಚನೆ