ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ -2 ಆಗಿ ನೇಮಕ ಮಾಡಲಾಗಿದೆ. ಪ್ರಧಾನಿ ಮೋದಿ ಅವರ ಮುಂದಿನ ಆದೇಶದವರೆಗೆ ಮಾಜಿ ಆರ್ಬಿಐ ಗವರ್ನರ್ ಈ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.
ಅವರ ಆಯ್ಕೆಯನ್ನು ಕ್ಯಾಬಿನೆಟ್ನ ನೇಮಕಾತಿ ಸಮಿತಿ ಅನುಮೋದಿಸಿದ್ದು, ಈ ಸಂಬಂಧ ಸಿಬ್ಬಂದಿ ತರಬೇತಿ ಇಲಾಖೆ (DoPT) ಆದೇಶ ಹೊರಡಿಸಿದೆ.
ಶಕ್ತಿಕಾಂತ್ ದಾಸ್ ಅವರ ನೇಮಕವು ಪ್ರಧಾನ ಮಂತ್ರಿಯ ಅಧಿಕಾರಾವಧಿಯೊಂದಿಗೆ ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ ಎಂದು ಕ್ಯಾಬಿನೆಟ್’ನ ನೇಮಕಾತಿ ಸಮಿತಿ ತಿಳಿಸಿದೆ. ಇದರೊಂದಿಗೆ ಶಕ್ತಿಕಾಂತ ದಾಸ್ ಅವರು ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ -2 ಆಗಲಿದ್ದಾರೆ. ಪಿ.ಕೆ.ಮಿಶ್ರಾ ಅವರು ಸೆಪ್ಟೆಂಬರ್ 11, 2019 ರಿಂದ ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
Cigarette Price Hike : ಧೂಮಪಾನಿಗಳಿಗೆ ಬಿಗ್ ಶಾಕ್ ; ‘ಸಿಗರೇಟ್’ ಬೆಲೆ ಏರಿಕೆ!
Alert : ‘Gmail’ ಬಳಕೆದಾರರೇ ಗಮನಿಸಿ ; ಈ ಬಗ್ಗೆ ತಕ್ಷಣ ಗಮನ ಹರಿಸಿ, ಇಲ್ಲದಿದ್ರೆ ನಿಮ್ಗೆ ಸಮಸ್ಯೆ
BIG NEWS : ಹಾವೇರಿಯಲ್ಲಿ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು