ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ(Former Pakistan president Asif Ali Zardari) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಂಗಳವಾರ ಕರಾಚಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಸಹ-ಅಧ್ಯಕ್ಷರಾದ ಜರ್ದಾರಿ ಅವರು ಕೆಲವು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜರ್ದಾರಿ ಅವರು ಶ್ವಾಸಕೋಶಕ್ಕೆ ಸಂಬಂಧಿಸಿದ ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಹಿಂದೆ ಜುಲೈನಲ್ಲಿ, ಪಾಕಿಸ್ತಾನದ ಮಾಜಿ ಅಧ್ಯಕ್ಷರು ದುಬೈಗೆ ಭೇಟಿ ನೀಡಿದಾಗ ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು. ಈ ವೇಳೆ ವೈದ್ಯರ ಸಲಹೆ ಮೇರೆಗೆ ಕರಾಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

BIGG NEWS: ದೇಶದಲ್ಲಿ 5 ವರ್ಷ `PFI’ ಬ್ಯಾನ್ :ಇಷ್ಟು ತಡವಾಗಿ ಪಿಎಫ್‌ಐ ಬ್ಯಾನ್ ಮಾಡಿರುವುದು ಗುಪ್ತಚರ ಇಲಾಖೆಯ ವೈಫಲ್ಯ- ಪ್ರಿಯಾಂಕ್‌ ಖರ್ಗೆ

BREAKING NEWS: ಯುಪಿಯ ಲಖಿಂಪುರ ಖೇರಿಯಲ್ಲಿ ಬಸ್-ಟ್ರಕ್ ನಡುವೆ ಭೀಕರ ಅಪಘಾತ: 8 ಮಂದಿ ಸಾವು, 25 ಕ್ಕೂ ಹೆಚ್ಚು ಜನರಿಗೆ ಗಾಯ

BIGG NEWS: ದೇಶದಲ್ಲಿ 5 ವರ್ಷ `PFI’ ಬ್ಯಾನ್ :ವರಿಷ್ಠರಿಗೆ ಅಭಿನಂದನೆ ತಿಳಿಸಿದ ಕೆ.ಎಸ್‌ ಈಶ್ವರಪ್ಪ

Share.
Exit mobile version