ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರಿಗೆ ರಾಜಾತಿಥ್ಯ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಆರೋಪಿ ನಟ ದರ್ಶನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ವಿಲ್ಸನ್ ಗಾರ್ಡನ್ ನಾಗ ಜೊತೆಗೆ ದರ್ಶನ್ ಕಾಣಿಸಿಕೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದರು. ಜೈಲಲ್ಲಿ ಯಾರು ಇರ್ತಾರೆ? ಜೈಲಲ್ಲಿ ಇರೋದೇ ಕ್ರಿಮಿನಲ್ಸ್ ಅಲ್ವ ಎಂದು ಪ್ರಶ್ನಿಸಿದರು.
ಜೈಲಿನಲ್ಲಿ ಓಡಾಡುವುದಕ್ಕೆ ಯಾರು ಸಿಗುತ್ತಾರೆ. ತಪ್ಪು ಮಾಡಿದವರೇ ಅಲ್ಲವೇ ಜೈಲಿಗೆ ಹೋಗುವುದು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನೇ ಕೇಳಬೇಕು. ದರ್ಶನ್ ಆರೋಪಿ ಸ್ಥಾನದಲ್ಲಿ ಇದ್ದಾರೆ ಎಂಬುದಾಗಿ ಹೇಳಿದರು.
ಈ ಘಟನೆಯ ಬಗ್ಗೆ ಉಳಿದವರನ್ನು ಬಿಟ್ಟು ದರ್ಶನ್ ಹೈಲೈಟ್ ಮಾಡುತ್ತಿದ್ದಾರೆ. ದರ್ಶನ್ ಹಾಗೆ ಕುಳಿತು ಮಾತನಾಡಿದ್ದು ಖಂಡಿತವಾಗಿ ತಪ್ಪೇ, ಆ ತಪ್ಪಿಗೆ ಜೈಲು ಅಧಿಕಾರಿಗಳು ಅಮಾನತು ಮಾಡಿದ್ದಾರೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವುದರ ಬಗ್ಗೆ ಗೊತ್ತಿಲ್ಲ ಎಂದರು.
ನಾನು ದರ್ಶನ್ ಅವರನ್ನು ಭೇಟಿ ಆಗುವುದು ವೈಯಕ್ತಿಕ ವಿಚಾರವಾಗಿ ಎಂಬುದಾಗಿ ಇದೇ ಸಂದರ್ಭದಲ್ಲಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
BREAKING: ‘ನಟ ದರ್ಶನ್’ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತಿರ್ಮಾನಿಸಲಿದೆ: ಸಿಎಂ ಸಿದ್ಧರಾಮಯ್ಯ
BREAKING : `CM ಸಿದ್ದರಾಮಯ್ಯ’ ಯಾವ ಕ್ಷಣದಲ್ಲಾದರೂ ರಾಜೀನಾಮೆ ನೀಡಬಹುದು : ಬಿ.ವೈ ವಿಜಯೇಂದ್ರ
ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ : ಈ ಯೋಜನೆಯಡಿ ಪ್ರತಿ ವರ್ಷ ಸಿಗಲಿದೆ 72,000 ರೂ. ಪಿಂಚಣಿ!