ಕಾರವಾರ: ಯಲ್ಲಾಪುರದ ಮಾಜಿ ಶಾಸಕ ವಿಎಸ್ ಪಾಟೀಲ್ ಅವರ ಡಬಲ್ ಬ್ಯಾರಲ್ ಬಂದೂಕನ್ನೇ ಕಳ್ಳರು ಕದ್ದೊಯ್ದಿರೋದಾಗಿ ತಿಳಿದು ಬಂದಿದೆ.
ಮಾಜಿ ಶಾಸಕ ವಿಎಸ್ ಪಾಟೀಲ್ ಅವರು ತಮ್ಮ ಆತ್ಮ ರಕ್ಷಣೆಗಾಗಿ ಡಬಲ್ ಬ್ಯಾರಲ್ ಬಂದೂಕು ಇರಿಸಿಕೊಂಡಿದ್ದರು. ಇಂತಹ ಬಂದೂಕು ಕಳ್ಳತನವಾಗಿರೋದಾಗಿ 15 ದಿನಗಳ ನಂತ್ರ ಮಾಜಿ ಶಾಸಕ ವಿಎಸ್ ಪಾಟೀಲ್ ಮುಂಡಗೋಡು ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
ಅಂದಹಾಗೇ ವಿಎಸ್ ಪಾಟೀಲ್ ಅವರು ತಮ್ಮ ಆತ್ಮ ರಕ್ಷಣೆಗಾಗಿ ಸುಮಾರು 40,000 ಮೌಲ್ಯದ ಡಬಲ್ ಬ್ಯಾರಲ್ ಬಂದೂಕು ಇರಿಸಿಕೊಂಡಿದ್ದರು. ಈ ಬಂದೂಕನ್ನು ಮುಂಡಗೋಡ ತಾಲ್ಲೂಕಿನ ಅಂದಲಗಿ ಗ್ರಾಮದಲ್ಲಿ ಇರುವಂತ ಜಮೀನಿನ ತೋಟದ ಮನೆಯಲ್ಲಿ ಇರಿಸಿದ್ದರು. ಇದನ್ನೇ ಕಳ್ಳತನ ಮಾಡಲಾಗಿದೆ.
ಡಿಸೆಂಬರ್.31ರಂದು ಡಬಲ್ ಬ್ಯಾರಲ್ ಬಂದೂಕು ಕಾಣದೇ ಇರೋದು ಮಾಜಿ ಶಾಸಕ ವಿಎಸ್ ಪಾಟೀಲ್ ಅವರ ಗಮನಕ್ಕೆ ಬಂದಿತ್ತು. ಆದರೇ ಅವರು ಎಲ್ಲೋ ಇರಬೇಕು ಎಂಬುದಾಗಿ ಸುಮ್ಮನಾಗಿದ್ದರು. ಆ ಬಳಿಕ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಮುಂಡಗೋಡ ಠಾಣೆಯ ಪೊಲೀಸರಿದೆ ಕಳ್ಳತನದ ಬಗ್ಗೆ ಇಂದು ದೂರು ನೀಡಿದ್ದಾರೆ.








