ಶಿವಮೊಗ್ಗ: ದೀಪಾವಳಿ ಹೋರಿ ಬೆದರಿಸುವಂತ ಸ್ಪರ್ಧೆ ನೋಡಲು ತೆರಳಿದ್ದಾಗ, ಮಾಜಿ ಶಾಸಕರಿಗೆ ಹೋರಿಯೊಂದು ತಿವಿದ ಪರಿಣಾಮ ಗಾಯಗೊಂಡಿರುವಂತ ಘಟನೆ ಶಿವಮೊಗ್ಗ ಶಿಕಾರಿಪುರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬೆಳ್ಳಿಗಾವಿಯಲ್ಲಿ 2 ದಿನಗಳ ಕಾಲ ದೀಪಾವಳಿ ಪ್ರಯುಕ್ತ ಹೋರಿ ಬೆದರಿಸುವಂತ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯನ್ನು ನೋಡೋದಕ್ಕೆ ಶಿಕಾರಿಪುರ ಮಾಜಿ ಶಾಸಕ ಮಹಾಲಿಂಗಪ್ಪ ತೆರಳಿದ್ದರು.
ಬೆಳ್ಳಿಗಾವಿಯಲ್ಲಿ ಹೋರಿ ಬೆದರಿಸುವಂತ ಸ್ಪರ್ಧೆಯ ವೇಳೆಯಲ್ಲಿ ಮನೆಯೊಂದರ ಬಳಿಯಲ್ಲಿ ನೋಡುತ್ತಾ ನಿಂತಿದ್ದಾಗ ಹೋರಿಯೊಂದು ತಿವಿದಿದೆ. ಒಂದೆರಡು ಬಾರಿ ತಿವಿದಿದ್ದರಿಂದ ಸಣ್ಣಪುಟ್ಟ ಗಾಯವಾಗಿತ್ತು. ಅವರು ಚಿಕಿತ್ಸೆ ಪಡೆದ ಬಳಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಅವರು ನನಗೆ ಹೋರಿ ತಿವಿದು ಸಣ್ಣಪುಟ್ಟ ಗಾಯವಾಗಿತ್ತು. ದೇವರ ದಯೆಯಿಂದ ಆರಾಮಾಗಿದ್ದೇನೆ. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಇದೆಲ್ಲ ಸಹಜ. ನಾನು ಆರೋಗ್ಯವಾಗಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ರಾಜ್ಯದ ‘ಗ್ರಾಮ ಪಂಚಾಯ್ತಿ’ಗಳಲ್ಲಿ ಈ ಎಲ್ಲಾ ‘ಸೇವೆ’ಗಳು ಲಭ್ಯ
ವಾಟ್ಸಾಪ್ ಹೊಸ ವೈಶಿಷ್ಟ್ಯ ; ರಿಪ್ಲೈ ಮಾಡದ ಬಳಕೆದಾರರಿಗೆ ಸಂದೇಶ ಕಳುಹಿಸುವ ಮಿತಿ ಪರಿಚಯ








