ಬೆಂಗಳೂರು: ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಗೆ ಚೆಕ್ ಬೌನ್ಸ್ ಕೇಸಲ್ಲಿ ಬಿಗ್ ಶಾಕ್ ನೀಡಲಾಗಿದೆ. 2026ರ ಜೂನ್.15ರ ಒಳಗಾಗಿ 60 ಲಕ್ಷ ಹಣ ಪಾವತಿಸದೇ ಇದ್ದರೇ 6 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಕೋರ್ಟ್ ಆದೇಶಿಸಿದೆ.
ಹೊಸದುರ್ಗದ ಗವಿರಂಗನಾಥಸ್ವಾಮಿ ಬೆಟ್ಟದಲ್ಲಿ ನಡೆದಿದ್ದಂತ ಉತ್ಸವ ಕಾರ್ಯಕ್ರಮಕ್ಕೆ ಗಂಧರ್ವ ಇವೆಂಟ್ಸ್ ಮಂಜು ಎಂಬುವರು ವ್ಯವಸ್ಥೆ ಮಾಡಿದ್ದರು. ಇದಕ್ಕೆ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸಂಭಾವನೆ ರೂಪದಲ್ಲಿ ಚೆಕ್ ಮೂಲಕ ಹಣ ಡ್ರಾ ಮಾಡಿಕೊಳ್ಳೋದಕ್ಕೆ ನೀಡಿದ್ದರು.
ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ನೀಡಿದ್ದಂತ ಚೆಕ್ ಬೌನ್ಸ್ ಆಗಿತ್ತು. ಹೀಗಾಗಿ ಅವರ ವಿರುದ್ಧ ಗಂಧರ್ವ ಇವೆಂಟ್ಸ್ ಮಂಜು ಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಾದ-ಪ್ರತಿವಾದ ಆಲಿಸಿದಂತ ನ್ಯಾಯಾಲಯವು ಜೂನ್.15, 2026ರ ಒಳಗಾಗಿ ಗಂಧರ್ವ ಇವೆಂಟ್ಸ್ ಮಂಜು ಅವರಿಗೆ 60 ಲಕ್ಷ ಹಣ ಪಾವತಿಸುವಂತೆ ಆದೇಶಿಸಿದೆ. ಅಲ್ಲದೇ ಒಂದು ವೇಳೆ ಪಾವತಿಸದೇ ಇದ್ದರೇ 6 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ಷರತ್ತು ವಿಧಿಸಿದೆ.
BIG NEWS : ಬೆಂಗಳೂರಿನ ‘ನಮ್ಮ ಮೆಟ್ರೋ’ದಲ್ಲಿ ಊಟ ಮಾಡಿದ ಮಹಿಳೆಗೆ 500 ರೂ.ದಂಡ : ‘BMRCL’ ಮಹತ್ವದ ಪ್ರಕಟಣೆ.!