ಬೆಂಗಳೂರು: ಇಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ವಾಸು ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
“ವಾಸು ಅವರ ನಿಧನದ ಸುದ್ದಿ ಕೇಳಿ ಬಹಳ ನೋವಾಗಿದೆ. ನನ್ನ ಆತ್ಮೀಯರಾಗಿದ್ದ ವಾಸು ಅವರ ಜತೆ ರಾಜಕೀಯ ಪಯಣದಲ್ಲಿ ಉತ್ತಮ ಒಡನಾಟ ಹೊಂದಿದ್ದೆ. ಮೈಸೂರು ಮೇಯರ್ ಆಗಿ, ನಂತರ ಶಾಸಕರಾಗಿ ವಾಸು ಅವರು ಮೈಸೂರು, ಚಾಮರಾಜನಗರ ಭಾಗದಲ್ಲಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಗಲಿಕೆ ಪಕ್ಷಕ್ಕೆ ಬಹಳ ನಷ್ಟ ತಂದಿದೆ ಎಂದಿದ್ದಾರೆ.
ವಾಸು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ವಾಸು ಅವರ ನಿಧನಕ್ಕೆ ವಿಜಯೇಂದ್ರ ಸಂತಾಪ
ಬೆಂಗಳೂರು: ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜನಾನುರಾಗಿ ನಾಯಕ ಹಾಗೂ ನಮ್ಮ ಪಕ್ಷದ ಮುಖಂಡ ಕವೀಶ್ ಗೌಡ ಅವರ ತಂದೆಯವರೂ ಆಗಿರುವ ವಾಸು ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
BREAKING: ರಾಜ್ಯದ ಈ ಪ್ರಸಿದ್ಧ ‘ಶ್ರೀರಾಮಮಂದಿರ’ ಸ್ಪೋಟಿಸೋದಾಗಿ ‘ಅಲ್ಲಾ ಹು ಹೆಸರಿ’ನಲ್ಲಿ ‘ಬಾಂಬ್ ಬೆದರಿಕೆ’ ಪತ್ರ
BREAKING: ರಾಮೇಶ್ವರಂ ‘ಕೆಫೆ ಬಾಂಬ್ ಸ್ಪೋಟ’ ಪ್ರಕರಣ: ‘ಬಾಂಬರ್ ಹೊಸ ಪೋಟೋ’ ಬಿಡುಗಡೆ ಮಾಡಿದ ‘NIA’