ಬೆಂಗಳೂರು: ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಬಿಗ್ ಶಾಕ್ ಅನ್ನು ಕೋರ್ಟ್ ನೀಡಿದೆ. ಅವರನ್ನು ಮೇ.8ರವರೆಗೆ 3 ದಿನಗಳ ಕಾಲ ಎಸ್ಐಟಿ ವಶಕ್ಕೆ ಹೆಚ್ಚಿನ ವಿಚಾರಣೆ ನಡೆಸೋದಕ್ಕೆ ನೀಡಿ, ಕೋರ್ಟ್ ಆದೇಶಿಸಿದೆ.
ಇಂದು ಬೌರಿಂಗ್ ಆಸ್ಪತ್ರೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಆರೋಗ್ಯ ತಪಾಸಣೆ ನಡೆಸಿದ ಬಳಿಕ, ಕೋರಮಂಗಲದಲ್ಲಿರುವಂತ 17ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರ ಮುಂದೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಣ್ಣೀರಿಟ್ಟರು ಎನ್ನಲಾಗುತ್ತಿದೆ.
ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಪ್ರಕರಣದಲ್ಲಿ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಮನವಿ ಮಾಡಿದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಾದಂತ ರವೀಂದ್ರ ಕುಮಾರ್ ಬಿ ಕಟ್ಟೀಮನಿ ಅವರು, ಮಹಿಳೆ ಅಪರಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಬಿಗ್ ಶಾಕ್ ಎನ್ನುವಂತೆ, 3 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.
ಅಪಹರಣ ಪ್ರಕರಣದಲ್ಲಿ ಬಂಧನ: ಈ ಬಗ್ಗೆ ಮೊದಲ ಬಾರಿಗೆ ಹೆಚ್.ಡಿ ರೇವಣ್ಣ ಏನು ಹೇಳಿದ್ರು ಗೊತ್ತಾ?
ಇಂದು ನ್ಯಾಯಾಧೀಶರ ಎದುರು ಹಾಜರುಪಡಿಸೋ ಮೊದಲು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸೋದಕ್ಕಾಗಿ ಬೌರಿಂಗ್ ಆಸ್ಪತ್ರೆಗೆ ಎಸ್ಐಟಿ ಅಧಿಕಾರಿಗಳು ಕರೆದೊಯ್ದಿದ್ದರು. ಈ ವೇಳೆ ಮೊದಲಿಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಮೇಲೆ ಕಿಡ್ನ್ಯಾಪ್ ಕೇಸ್ ಹಾಕಿದ್ದಾರೆ. 40 ವರ್ಷ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಯಾವುದೇ ರೀತಿಯ ಪುರಾವೆಗಳು ಇಲ್ಲದಿದ್ದರೂ ಅನಾವಶ್ಯಕವಾಗಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ನನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು. ಇದೊಂದು ದುರದ್ದೇಶಪೂರ್ವಕ ಬಂಧನವಾಗಿದೆ. ಯಾವುದೇ ಸಾಕ್ಷಿಗಳು ಸಹ ಇವರ ಬಳಿ ಇಲ್ಲ ಎಂದರು.
ಏಪ್ರಿಲ್.28ರಂದು ನಮ್ಮ ವಿರುದ್ಧ ಕೇಸ್ ದಾಖಲಿಸಿದರು. ಆಗ ನಮ್ಮ ಮೇಲೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲವೆಂದು ಪುನಃ ಮೇ.2ರಂದು ನನ್ನ ಮೇಲೆ ಸಾಕ್ಷಿಗಳನ್ನು ಸೃಷ್ಟಿ ಮಾಡಿ ಸಿಕ್ಕಿ ಹಾಕಿಸಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಪುರಾವೆಗಳು ಇಲ್ಲ. ಆದರೂ ನನ್ನನ್ನು ಸಿಕ್ಕಿ ಹಾಕಿಸಲಾಗಿದೆ. ಇದು ರಾಜಕೀಯ ಷಡ್ಯಂತ್ರವಾಗಿದೆ. ನನ್ನನ್ನು ರಾಜಕೀಯವಾಗಿ ಮುಗಿಸೋದಕ್ಕೆ ಹೀಗೆ ಮಾಡಲಾಗಿದೆ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಅಪಹರಣ ಪ್ರಕರಣ: ಎಸ್ಐಟಿ ವಿಚಾರಣೆ ವೇಳೆ ಹೆಚ್.ಡಿ ರೇವಣ್ಣ ಹೇಳಿದ್ದೇನು ಗೊತ್ತಾ?
ನಿನ್ನೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ನಿನ್ನೆ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಂಧಿಸಿದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತ್ರ, ಇಂದು ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಎಸ್ಐಟಿ ಅಧಿಕಾರಿಗಳು ಕೇಳಿದಂತ ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಉತ್ತರಿಸಿಲ್ಲ ಎನ್ನಲಾಗುತ್ತಿದೆ. ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆಯ ಬಗ್ಗೆ ಕೇಳಿದಂತ ಪ್ರಶ್ನೆಗಳಿಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು, ಸಂತ್ರಸ್ತೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಮನೆಯಲ್ಲಿ ಸಾಕಷ್ಟು ಜನ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ ಎನ್ನಲಾಗುತ್ತಿದೆ.
ಸಂತ್ರಸ್ತೆಯ ಮಗನ ಹೇಳಿಕೆಯನ್ನು ಹೇಗೆ ನಂಬಲು ಸಾಧ್ಯ? ನಾನೇ ಕರೆದುಕೊಂಡು ಬರಲು ಹೇಳಿದ್ದೇನೆಂದು ಸಾಕ್ಷಿ ಏನಿದೆ ಎಂಬುದಾಗಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಎಸ್ಐಟಿ ಅಧಿಕಾರಿಗಳಿಗೆ ಪ್ರಶ್ನಿಸಿರೋದಾಗಿ ಹೇಳಲಾಗುತ್ತಿದೆ.
ಇದಲ್ಲದೇ ಸಂತ್ರಸ್ತೆ ಜೊತೆ ನಾನು ಮಾತಾಡಿಲ್ಲ. ನೋಡಿಯೂ ಇಲ್ಲ. ರೇವಣ್ಣ ಎಂಬ ಹೆಸರಿನವರು ನಾನು ಒಬ್ಬನೇ ಇರೋದಾ? ನನ್ನ ಹೆಸರಿನವರು ಬೇರೆಯವರೂ ಇರಬಹುದು ಅಲ್ವ? ನನಗೆ ಏನೂ ಗೊತ್ತಿಲ್ಲ ಎಂಬುದಾಗಿ ಅಪಹರಣ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ಎಸ್ಐಟಿ ಅಧಿಕಾರಿಗಳು ಕೇಳಿದಂತ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿಲ್ಲ ಎನ್ನಲಾಗುತ್ತಿದೆ.
ವರದಿ: ವಸಂತ ಬಿ ಈಶ್ವರಗೆರೆ
ಅಂಬೇಡ್ಕರ್ ಅವರನ್ನು ಸೋಲಿಸಿ ಅವಮಾನ ಮಾಡಿದ್ದು ಕಾಂಗ್ರೆಸ್: ಬಸವರಾಜ ಬೊಮ್ಮಾಯಿ