ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣನವರನ್ನು ಎಸ್‌ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ‘ನಿರೀಕ್ಷಣಾ ಜಾಮೀನು’ ಅರ್ಜಿ ವಜಾ ಮಾಡಲಾಗಿದೆ.
ಇದರ ಬೆನ್ನಲೇ ಎಸ್‌ಐಟಿ ಅಧಿಕಾರಿಗಳು ರೇವಣ್ಣವರನ್ನು ಹುಡುಕಾಟ ಮಾಡುವುದಕ್ಕೆ ಮುಂದಾಗಿದ್ದರು. ಇದಲ್ಲದೇ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಹೋಗಿದ್ದರು, ಇದಲ್ಲದೇ ಬಳಿಕ ಅವರನ್ನು ರೇವಣ್ಣನವರನ್ನು ಬಂಧನ ಮಾಡಲಾಗಿದೆ ಎನ್ನಲಾಗಿದೆ.
ಇಂದು ಏನೆಲ್ಲ ಆಗಿತ್ತು?
ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯ ವೇಳೆಯಲ್ಲಿ ರೇವಣ್ಣ ಪರವಾಗಿ ಹಿರಿಯ ವಕೀಲ ಮೂರ್ತಿ ಡಿ ನಾಯಕ್ 15 ನಿಮಿಷಗಳ ಕಾಲ ವಾದ ಮಂಡಿಸಿದ್ದರು. ಈ ವೇಳೆ ಮತ್ತೊಂದು ಎಫ್ಐಆರ್ ನಲ್ಲಿ ಮಹಿಳೆಯ ಹೆಸರು ಕಾಣಿಸುತ್ತಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ನಿನ್ನೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಈ ವಾದ ಆಲಿಸಿದಂತ ನ್ಯಾಯಪೀಠವು, ಈ ಪ್ರಕರಣವೂ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡ ಪ್ರಕರಣವೇ ಆಗಿರುವುದರಿಂದ ಇಂದಿಗೆ ಮುಖ್ಯ ಪ್ರಕರಣದ ಮೇಲೆಯೇ ಸಂಪೂರ್ಣ ವಾದ ಆಲಿಸಿ, ನಂತ್ರ ಆದೇಶ ಪ್ರಕಟಿಸುವುದಾಗಿ, ನಿರೀಕ್ಷಣಾ ಜಾಮೀನಿನ ಅರ್ಜಿಯ ವಿಚಾರಣೆಯನ್ನು ಮುಂದೂಡಿತ್ತು.
ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆ ಆರಂಭಿಸಿತು. ಈ ವೇಳೆ ಎಸ್ಐಟಿಯ ಎಸ್ ಪಿಪಿ ಲಿಖಿತ ಆಕ್ಷೇಪಣೆ ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ರೇವಣ್ಣ ಪರ ಹಿರಿಯ ವಕೀಲ ಮೂರ್ತಿ ಡಿ ನಾಯಕ್ ಅವರು, ಇಲ್ಲಿ ಅತ್ಯಾಚಾರ ಪ್ರಕರಮ ಸಾಕ್ಷ್ಯ ವಿಚಾರಣೆ ನಡೆಯುತ್ತಿಲ್ಲ. ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು. ಇದರಲ್ಲಿ ನಿರಾಧಾರವಾದ ಕಿಡ್ನಾಪ್ ಆರೋಪ ಮಾತ್ರವಿದೆ ಎಂಬುದಾಗಿ ಮನವಿ ಮಾಡಿದರು. ಅಲ್ಲದೇ ಸಂತ್ರಸ್ತೆ ನೀಡಿದಂತ ದೂರಿನ ಹಿನ್ನಲೆಯಲ್ಲಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಎಫ್ಐಆರ್ ಪ್ರತಿಯನ್ನು ನ್ಯಾಯಪೀಠದ ಮುಂದೆ ಓದಿದರು.
364ಎ ಅಡಿಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಿಸಲಾಗಿದೆ. ನನ್ನ ಕಕ್ಷಿದಾರರಾದಂತ ಹೆಚ್.ಡಿ ರೇವಣ್ಣ ವಿಚಾರದಲ್ಲಿ ಅನ್ವಯವಾಗುವುದಿಲ್ಲ. ಅಲ್ಲದೇ ಏಪ್ರಿಲ್.29ರಂದು ನಡೆದಂತ ಘಟನೆಯ ಬಗ್ಗೆ ಮೇ.2ರಂದು ಎಫ್ಐಆರ್ ದಾಖಲಾಗಿದೆ. ನಿನ್ನೆಯಷ್ಟೇ ಜಾಮೀನು ರಹಿತ ಆರೋಪಗಳಿಲ್ಲ ಎಂಬುದಾಗಿ ಎಸ್ಐಟಿ ಅಧಿಕಾರಿಗಳು ಹೇಳಿದ್ದರು. ಅಲ್ಲದೇ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಕೂಡ ನೀಡಿತ್ತು. ಆದ್ರೇ ಈಗ ಜಾಮೀನು ರಹಿತ ಆರೋಪ ಕೇಸ್ ದಾಖಲಿಸಲಾಗಿದೆ. ಎಸ್ಐಟಿ ಕ್ರಮದ ಹಿಂದಿರುವ ಉದ್ದೇಶ ಅರ್ಥ ಮಾಡಿಕೊಳ್ಳಬೇಕು ಎಂಬುದಾಗಿ ರೇವಣ್ಣ ಪರ ವಕೀಲರು, ಸುಪ್ರೀಂ ಕೋರ್ಟ್ ನ ಕೆಲ ತೀರ್ಪುಗಳನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶರ ಮುಂದೆ ತಮ್ಮ ವಾದ ಮಂಡಿಸಿದರು.
ಉದ್ದೇಶ ಪೂರ್ವಕವಾಗಿಯೇ ಹೆಚ್.ಡಿ ರೇವಣ್ಣ ವಿರುದ್ಧ ಜಾಮೀನು ಸಿಗಬಾರದೆಂದೇ ಅನ್ವಯವಾಗದ ಸೆಕ್ಷನ್ ಗಳನ್ನು ಹಾಕಲಾಗಿದೆ. ಜಾಮೀನು ರಹಿತ ಕೇಸ್ ಗಳನ್ನು ಹಾಕಿದ್ದಾರೆ. ಸಂತ್ರಸ್ತೆ ನೀಡಿರುವಂತ ದೂರಿನಲ್ಲಿ ರೇವಣ್ಣ ಸಾಹೇಬರು ಕರೆದುಕೊಂಡು ಬಾ ಅಂದಿದ್ದಾರೆ ಎಂಬುದಷ್ಟೇ ಉಲ್ಲೇಖಿಸಲಾಗಿದೆ. ಆ ಪದ ಬಿಟ್ಟರೇ ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂಬುದಾಗಿ ರೇವಣ್ಣ ಪರ ಹಿರಿಯ ವಕೀಲ ಮೂರ್ತಿ ಡಿ ನಾಯಕ್ ವಾದಿಸಿದರು.
ಈ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ಆರೋಪಿಯಲ್ಲ. ಎ2 ಆರೋಪಿಗೂ, ಹೆಚ್ ಡಿ ರೇವಣ್ಗಗೂ ಸಂಬಂಧವಿಲ್ಲ. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ದೇಶದೆಲ್ಲೆಡೆ ಪ್ರಚಾರವಾಗಿದೆ. ರಾಜಕೀಯ, ಹಣಕಾಸಿನ ಬಲ ಬಳಸಿ ಕೃತ್ಯ ಮಾಡಿದ್ದಾರೆಂದು ಆಕ್ಷೇಪಿಸಿದಂತ ಅವರು, ಎಸ್ಐಟಿ ಆಕ್ಷೇಪಣೆ ಉಲ್ಲೇಖಿಸಿ ರೇವಣ್ಣ ಪರ ವಕೀಲರು ವಾದಿಸಿದರು. ಅಲ್ಲದೇ ಹೆಚ್.ಡಿ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿ, ತಮ್ಮ ವಾದವನ್ನು ಮುಕ್ತಾಯಗೊಳಿಸಿದರು.
ಈ ಬಳಿಕ ಎಸ್ಐಟಿಯ ಎಸ್ ಪಿಪಿ ಬಿಎನ್ ಜಗದೀಶ್ ಪ್ರತಿವಾದ ಮಂಡನೆ ಆರಂಭಿಸಿದರು. ಮೊದಲ ಎಫ್ಐರ್ ನಲ್ಲಿ ಮಾತ್ರ ಜಾಮೀನುರಹಿತ ಅಪರಾದಳಿಲ್ಲ ಎಂದಿದ್ದೆ. ಜಾಮೀನುರಹಿ ಕೇಸ್ ದಾಖಲಿಸುವುದಿಲ್ಲ ಎಂಬ ಭರವಸೆ ನೀಡಿಲ್ಲ. ಮೊದಲು ತನಿಕಾಧಿಯ ಕರ್ತವ್ಯ ಸಂತ್ರಸ್ತೆಯ ಜೀವ ಉಳಿಸುವುದು. ಆಕೆಯ ಜೀವ ಉಳಿಸೋದಕ್ಕೆ ಪ್ರಯತ್ನಿಸಿದೆ. ಬಡ ಮಹಿಳೆಯನ್ನು ಹುಡುಕಿ ಎಸ್ಐಟಿ ಎಲ್ಲಾ ಪ್ರಯತ್ನ ಮಾಡುತ್ತಿದೆ. ಆಕೆಯ ಮಗ ನೀಡಿರುವ ದೂರು ಸಂಪೂರ್ಣ ದೂರುದಾರೆಯದ್ದೇ ಆಗಿದೆ ಎಂದರು.
ಆ ನಂತ್ರ ಮತ್ತೆ ಹೆಚ್.ಡಿ ರೇವಣ್ಣ ಪರ ವಕೀಲರು ವಾದ ಮಂಡನೆ ಆರಂಭಿಸಿ, ಡಿಕೆ ಶಿವಕುಮಾರ್ ಅವರು 2 ತಿಂಗಳು ಕಸ್ಟಡಿಯಲ್ಲಿ ಇರಿಸಿ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಈ ರೀತಿಯ ಹೇಳಿಕೆ ನೀಡುವುದು ತನಿಖೆಯ ಧಿಕ್ಕು ತಪ್ಪಿಸುತ್ತದೆ. ಇದರ ಹಿಂದಿನ ಉದ್ದೇಶವೇನು ಎಂಬುದಾಗಿ ಪ್ರಶ್ನಿಸಿದಂತ ಅವರು, ಡಿಸಿಎಂ ಡಿಕೆಶಿ ಹೇಳಿಕೆಯ ಬಗ್ಗೆ ಎಸ್ ಪಿಪಿ, ಕೋರ್ಟ್ ಗೆ ಮೆಮೋ ಸಲ್ಲಿಸಿದರು.
ಅಲ್ಲದೇ ನಿರೀಕ್ಷಣಾ ಜಾಮೀನು ನೀಡಿದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳ ಮುಂದೆ ತನಿಖೆಗೆ ಹಾಜರಾಗಲಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಪ್ರಕರಣ ಬಳಸಿಕೊಳ್ಳುತ್ತಿರುವಾಗ ಹೇಗೆ ನಿರೀಕ್ಷಣಾ ಜಾಮೀನು ಇಲ್ಲದೇ ವಿಚಾರಣೆಗೆ ಹಾಜರಾಗೋದು? ಚುನಾವಣೆ ವೇಳೆ ರಾಜಕೀಯ ಲಾಭ ಪಡೆಯಲು ಪ್ರಯತ್ನ ನಡೆಸಲಾಗುತ್ತದೆ. ಬಂಧಿದಿಂದ ರಕ್ಷಣೆ ಸಿಗದಿದ್ದರೇ ವಿಚಾರಣೆಗೆ ಹಾಜರಾಗುವುದು ಹೇಗೆ ಎಂದರು. ನಾನು ಜವಾಬ್ದಾರನಾಗಿ ಈ ಹೇಳಿಕೆ ನೀಡಿತತ್ತಿದ್ದೇನೆ. ಎಸ್ಐಟಿ ತನಿಘೆ ಸಹಕರಿಸಲು ಹೆಚ್ ಡಿ ರೇವಣ್ಣ ಸಿದ್ಧರಿದ್ದಾರೆ. ದಸ್ತಗಿರಿ ಮಾಡುತ್ತೇವೆಂದು ಸ್ಪಷ್ಟರಡಿಸಿದ್ದಾರೆ. ಆಕ್ಷೇಪಣೆಯಲ್ಲಿ ಎಸ್ಐಟಿ ಬಂಧನ ಸ್ಪಷ್ಟ ಪಡಿಸಿದ್ದಾರೆ. ಬಂಧನಕ್ಕೂ ಅಧಿಕಾರಕ್ಕೂ ವ್ಯತ್ಯಾಸವಿದೆ. ತನಿಖಾಧಿಕಾರಿಗಳು ಬಂಧಿಸೋದಾಗಿ ಹೇಳಿದ್ದಾರೆ. ರಕ್ಷಣೆ ಬೇಕು ಎಂದರು.
ವಾದ ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಹೆಚ್.ಡಿ ರೇವಣ್ಣ ಅವರು ಸಲ್ಲಿಸಿದ್ದಂತ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕೆಲ ಕಾಲ ಮುಂದೂಡಿತು. ಇದೇ ವೇಳೆ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ.