ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಎ.1 ಆರೋಪಿಯಾಗಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತಂತ ಪುತ್ರ ಹಾಗೂ ತಂದೆ ಇಬ್ಬರೂ ನಿರೀಕ್ಷಣಾ ಜಾಮೀನು ಕೋರಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮೇಲೆ ನಾನ್ ಬೇಲೆಬಲ್ ಕೇಸ್ ಬುಕ್ ಆಗೋ ಸಾಧ್ಯತೆ ಇದೆ. ಹೀಗಾಗಿ ಅವರು ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ನಾಳೆಯೇ ಬಂಧನಕ್ಕೆ ಒಳಗಾಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇಂದು ಪ್ರಜ್ವಲ್ ರಾಸಲೀಲೆ ಕೇಸ್ ತನಿಖೆ ನಡೆಸುತ್ತಿರುವಂತ ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆಯನ್ನು ಹೊಳೆನರಸೀಪುರ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಸಂತ್ರಸ್ತ ಮಹಿಳೆಯಿಂದ ಜಡ್ಜ್ ಮುಂದೆ 164ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ.
ಇನ್ನೂ ಸಂತ್ರಸ್ತ ಮಹಿಳೆಯು ನ್ಯಾಯಾಧೀಶರ ಮುಂದೆ ಪೊಲೀಸರು ಪ್ರಕರಣದಲ್ಲಿ ದಾಖಲಿಸಿರುವಂತ ಎಫ್ಐಆರ್ ನಲ್ಲಿ ಸರಿಯಾದ ಸೆಕ್ಷನ್ ಹಾಕಿಲ್ಲ. ಹೀಗಾಗಿ ಎಫ್ಐಆರ್ ನಲ್ಲಿ 376 ಸೆಕ್ಷನ್ ಸೇರಿಸುವಂತೆ ಮನವಿ ಮಾಡಲಾಗಿದೆ.
ಒಂದು ವೇಳೆ ನ್ಯಾಯಾಲಯವು ಸಂತ್ರಸ್ತ ಮಹಿಳೆಯ ಮನವಿ ಪುರಸ್ಕರಿಸಿ, ಐಪಿಸಿ ಸೆಕ್ಷನ್ 376ರ ದಾಖಲಿಸೋದಕ್ಕೆ ಸೂಚಿಸಿದ್ದೇ ಆದಲ್ಲಿ, ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಸಂಕಷ್ಟ ಎದುರಾದಂತೆ ಆಗಲಿದೆ.
ನಾಳೆ ಹೊಳೆನರಸೀಪುರ ಜೆ ಎಂ ಎಫ್ ಸಿ ಕೋರ್ಟ್ ಹಾಗೂ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ನೀಡುವ ಆದೇಶದ ಮೇಲೆ ಆರೋಪಿಗಳಾದಂತ ಪ್ರಜ್ವಲ್, ರೇವಣ್ಣ ಭವಿಷ್ಯ ನಿರ್ಧಾರವಾಗಿದೆ. ನಾಳೆ ನಿರೀಕ್ಷಣಾ ಜಾಮೀನು ಸಿಗದೇ ಇದ್ರೇ, ಹೆಚ್.ಡಿ ರೇವಣ್ಣ ಬಂಧನವಾಗೋ ಸಾಧ್ಯತೆ ಇದೆ. ಅಲ್ಲದೇ ಹೊಳೆನರಸೀಪುರ ನ್ಯಾಯಾಲಯವು 376 ಸೇರಿಸಲು ಅನುಮತಿಸಿದ್ದೇ ಆದ್ರೇ, ಇಬ್ಬರು ಆರೋಪಿಗಳಿಗೂ ಬೇಲ್ ಸಿಗೋದು ಡೌಟ್ ಆಗಲಿದೆ. ಆ ಬಗ್ಗೆ ಕಾದು ನೋಡಬೇಕಿದೆ.
BREAKING: ಕರ್ನಾಟದ 6 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.3ರಂದು ಮತದಾನ, ಜೂ.6ಕ್ಕೆ ಫಲಿತಾಂಶ ಪ್ರಕಟ