Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರತಿದಿನ ‘ಮೊಟ್ಟೆ’ ತಿಂದರೆ ಏನಾಗುತ್ತೆ ಗೊತ್ತಾ.?

05/07/2025 10:11 PM

ಭಾರತದ ಶಕ್ತಿ ಅನಾವರಣ ; ಚೀನಾ, ಅಮೆರಿಕ ಹಿಂದಿಕ್ಕಿ ಇತಿಹಾಸ ನಿರ್ಮಾಣ, ವಿಶೇಷ ಸ್ಥಾನಮಾನ

05/07/2025 10:07 PM

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

05/07/2025 9:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಪಕ್ಷ ನಾಯಕ ‘ಆರ್.ಅಶೋಕ್’ ವಿರುದ್ಧ ಮಾಜಿ ಪರಿಷತ್ ಸದಸ್ಯ ‘ರಮೇಶ್ ಬಾಬು’ ವಾಗ್ದಾಳಿ
KARNATAKA

ವಿಪಕ್ಷ ನಾಯಕ ‘ಆರ್.ಅಶೋಕ್’ ವಿರುದ್ಧ ಮಾಜಿ ಪರಿಷತ್ ಸದಸ್ಯ ‘ರಮೇಶ್ ಬಾಬು’ ವಾಗ್ದಾಳಿ

By kannadanewsnow0924/06/2024 6:23 PM

ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ್ ಅವರು ಇಂದು ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕ್ಷಮೆ ಕೋರಲಿ, ರಾಹುಲ್‌ ಗಾಂಧಿ ತಲೆಬಾಗಿ ಕ್ಷಮೆ ಕೇಳಲಿ ಅಂತ ಆಗ್ರಹಿಸಿದ್ದರು. ಹೀಗೆ ಆರ್ ಅಶೋಕ್ ರಾಜಕೀಯ ಚಟಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ ಅಂತ ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ವಾಗ್ಧಾಳಿ ನಡೆಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, 1975 ರಲ್ಲಿ ದೇಶದ ಕಾಂಗ್ರೆಸ್ ಪಕ್ಷದ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಜೂನ್ 25 ರಂದು ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ್ದರು. ಪಾರ್ಲಿಮೆಂಟಿನ ಜಂಟಿ ಸಮಿತಿಯ ಬೆಂಗಳೂರಿನ ಸಭೆಗೆ ಆಗಮಿಸಿದ್ದ ಅಂದಿನ ಜನಸಂಘದ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಎಲ್.ಕೆ.ಅಡ್ವಾಣಿ ಸಹಿತವಾಗಿ 29 ಲೋಕಸಭಾ ಸದಸ್ಯರನ್ನು ತುರ್ತುಪರಿಸ್ಥಿತಿಯ ಘೋಷಣೆಯ ಕಾರಣಕ್ಕಾಗಿ ಬಂಧಿಸಲಾಗಿತ್ತು. ದೇಶದಲ್ಲಿ 2 ವರ್ಷಗಳ ಕಾಲ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಕಾಂಗ್ರೆಸ್ ಪಕ್ಷದ ಅಂದಿನ ಈ ಕ್ರಮದಿಂದ ಲೋಕಸಭಾ ಚುನಾವಣೆಯಲ್ಲಿ ಶ್ರೀಮತಿ ಇಂದಿರಾ ಗಾಂಧಿರವರ ಸಹಿತವಾಗಿ ಕಾಂಗ್ರೆಸ್ ಪಕ್ಷ ಸೋಲನ್ನು ಅನುಭವಿಸಿತು. 1980ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಕಾಂಗ್ರೆಸ್ ಪಕ್ಷದ ತಪ್ಪನ್ನು ಮನ್ನಿಸಿ ಶ್ರೀಮತಿ ಇಂದಿರಾ ಗಾಂಧಿ ರವರ ನಾಯಕತ್ವದಲ್ಲಿ ಜಯವನ್ನು ನೀಡಿದರು. ಆದರೆ ಜನ ಸಂಘದಿಂದ ಬಿಜೆಪಿಯಾಗಿ ಪರಿವರ್ತನೆಗೊಂಡಿರುವ ಬಿಜೆಪಿಗರು ಮಾತ್ರ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾರೆ. ದೇಶದಲ್ಲಿ ಇಂದು ಇರುವ ಅಘೋಷಿತ ಪರಿಸ್ಥಿತಿ ಮತ್ತು ಏಕ ವ್ಯಕ್ತಿಯ ಸರ್ವಾಧಿಕಾರ, ವ್ಯಕ್ತಿ ಪೂಜೆ ಬಿಜೆಪಿಗೆ ಅನಿವಾರ್ಯವಾಗಿದೆ ಎಂದಿದ್ದಾರೆ.

ಕರ್ನಾಟಕ ವಿಧಾನ ಸಭೆಯ ಅನಿವಾರ್ಯದ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ರವರು ರಾಹುಲ್ ಗಾಂಧಿ ರಾಮಲೀಲಾ ಮೈದಾನದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ಜನರ ಕ್ಷಮೆ ಕೇಳಬೇಕೆಂದು ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ಬಹುತೇಕ ನಾಯಕರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಪದೇ ಪದೇ ಇಂತಹ ಹೇಳಿಕೆ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತು ಕಾಂಗ್ರೆಸ್ ನಾಯಕರನ್ನು ಟೀಕಿಸಿ ಬೆತ್ತಲೆಯಾಗುತ್ತಾರೆ. ಬಿಜೆಪಿಯ ಹಿರಿಯ ನಾಯಕರಾದ ಶ್ರೀ ಎಲ್.ಕೆ ಅಡ್ವಾಣಿ ರವರು ಅಂದಿನ ತುರ್ತುಪರಿಸ್ಥಿತಿಯ ಕಾರಣಕ್ಕಾಗಿ ಭಾರತದ ಪ್ರಜಾಪ್ರಭುತ್ವದ ಬೇರುಗಳು ಮತ್ತಷ್ಟು ಗಟ್ಟಿಯಾದವು ಎಂದು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಬರಲು ಸಾಧ್ಯವಿಲ್ಲ ಎಂದು ನಾನು ಹೇಳಲು ಆಗುವುದಿಲ್ಲ ಎಂದು ಹೇಳಿರುತ್ತಾರೆ. ಬಿಜೆಪಿಯ ಹಿರಿಯ ನಾಯಕರು ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂದು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಅಂತ ತಿಳಿಸಿದ್ದಾರೆ.

ಸ್ವಾತಂತ್ರ ಉದ್ಯಾನವನದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ನಡೆಸಿದ ಪೋಸ್ಟರ್ ಅಭಿಯಾನದ ಬದಲು ಬಿಜೆಪಿಗರು ತಮ್ಮ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಮೋದಿ ವ್ಯಕ್ತಿ ಪೂಜೆಯ ವಿರುದ್ಧ ಪೋಸ್ಟರ್ ಅಭಿಯಾನ ನಡೆಸಬಹುದಿತ್ತು! ಆರ್. ಅಶೋಕ್ ರವರಿಗೆ ಪೋಸ್ಟರ್ ಗಳ ಅವಶ್ಯಕತೆ ಇದ್ದಲ್ಲಿ ಕಾಂಗ್ರೆಸ್ ಪಕ್ಷ ಉಚಿತವಾಗಿ ಪೂರೈಕೆ ಮಾಡುತ್ತಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಾನು ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದೆ ಮತ್ತು ಬೆಂಗಳೂರಿನಲ್ಲಿ ಒಂದು ತಿಂಗಳ ಕಾಲ ಜೈಲುವಾಸ ಅನುಭವಿಸಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ. ಪ್ರಥಮ ಪಿಯು ಓದುವ 16 ವರ್ಷದ ಅಪ್ರಾಪ್ತ ರನ್ನು ಜೈಲಿನಲ್ಲಿ ಇಡಲು ದೇಶದ ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ! ಇಂತಹ ಹಸಿ ಸುಳ್ಳುಗಳ ಮೂಲಕವೇ ಬಿಜೆಪಿಗರು ರಾತ್ರೊರಾತ್ರಿ ನಾಯಕರಾಗಿರುತ್ತಾರೆ. ಸಂವಿಧಾನವನ್ನು ಉಲ್ಲಂಘನೆ ಮಾಡಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಯಲ್ಲಿ ಇಟ್ಟಿರುವ ಭಾರತೀಯ ಜನತಾ ಪಕ್ಷವಾಗಲಿ ಅಥವಾ ಅದರ ನಾಯಕರಾಗಲಿ 1975ರ ತುರ್ತು ಪರಿಸ್ಥಿತಿಯ ಕುರಿತು ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ವಿಫಲರಾಗಿರುವ ಆರ್. ಅಶೋಕ್ ರವರು ತಮ್ಮ ರಾಜಕೀಯ ಚಟಕ್ಕಾಗಿ ಆಗಾಗ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಅಂತ ಕಿಡಿಕಾರಿದ್ದಾರೆ.

BIG NEWS: ರಾಜ್ಯಾಧ್ಯಂತ ‘ಕಬಾಬ್, ಫಿಶ್, ಚಿಕನ್’ಗೆ ಬಳಸುವ ‘ಕೃತಕ ಬಣ್ಣ’ ನಿಷೇಧ: ನಿಯಮ ಮೀರಿದ್ರೆ ’10 ಲಕ್ಷ ದಂಡ’ ಫಿಕ್ಸ್ | Kabab Colour Ban

ನಾನು ಅಧಿಕಾರಕ್ಕಾಗಿ ಚನ್ನಪಟ್ಟಣ ಬಿಟ್ಟು ಓಡಿ ಹೋಗುವವನಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

Share. Facebook Twitter LinkedIn WhatsApp Email

Related Posts

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

05/07/2025 9:12 PM1 Min Read

BREAKING: ಶಿವಮೊಗ್ಗದಲ್ಲಿ ನಾಗರ ವಿಗ್ರಹವನ್ನೇ ಚರಂಡಿಗೆ ಎಸೆದು ದುಷ್ಕೃತ್ಯ

05/07/2025 9:05 PM1 Min Read

‘IAS, IPS ಹುದ್ದೆ’ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ‘UPSC ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ | IAS Officer

05/07/2025 8:58 PM1 Min Read
Recent News

ಪ್ರತಿದಿನ ‘ಮೊಟ್ಟೆ’ ತಿಂದರೆ ಏನಾಗುತ್ತೆ ಗೊತ್ತಾ.?

05/07/2025 10:11 PM

ಭಾರತದ ಶಕ್ತಿ ಅನಾವರಣ ; ಚೀನಾ, ಅಮೆರಿಕ ಹಿಂದಿಕ್ಕಿ ಇತಿಹಾಸ ನಿರ್ಮಾಣ, ವಿಶೇಷ ಸ್ಥಾನಮಾನ

05/07/2025 10:07 PM

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

05/07/2025 9:12 PM

BREAKING: ಶಿವಮೊಗ್ಗದಲ್ಲಿ ನಾಗರ ವಿಗ್ರಹವನ್ನೇ ಚರಂಡಿಗೆ ಎಸೆದು ದುಷ್ಕೃತ್ಯ

05/07/2025 9:05 PM
State News
INDIA

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

By KannadaNewsNow05/07/2025 9:12 PM INDIA 1 Min Read

ಬೆಂಗಳೂರು : ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ ನೀರಜ್ ಚೋಪ್ರಾ ಕ್ಲಾಸಿಕ್ 2025ರ ಮೊದಲ ಆವೃತ್ತಿಯಲ್ಲಿ ಚಿನ್ನ ಗೆಲ್ಲುವ…

BREAKING: ಶಿವಮೊಗ್ಗದಲ್ಲಿ ನಾಗರ ವಿಗ್ರಹವನ್ನೇ ಚರಂಡಿಗೆ ಎಸೆದು ದುಷ್ಕೃತ್ಯ

05/07/2025 9:05 PM

‘IAS, IPS ಹುದ್ದೆ’ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ‘UPSC ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ | IAS Officer

05/07/2025 8:58 PM

ವೃತ್ತಿಪರ ತರಬೇತಿ ಪಡೆಯಲು ಅರ್ಜಿ ಆಹ್ವಾನ

05/07/2025 8:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.