ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಚುನಾವಣೆ-2024ರ ಸಂಬಂಧ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾದಿ ವ್ಯಾಪ್ತಿಯಲ್ಲಿ 3 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರಲಿದ್ದು, ಆಯಾ ಲೋಕಸಭಾ ಕ್ಷೇತ್ರಗಳಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತರಾದ ಮತದಾರರಿಗಾಗಿ(Voters on Election duty) ಮತದಾನ ಸೌಲಭ್ಯ ಕೇಂದ್ರ(Voter Facilitation Centre-VFC) ಸ್ಥಾಪಿಸಲಾಗಿದ್ದು, ದಿನಾಂಕ: 25-04-2024 ರವರೆಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ತರಬೇತಿಯ ವೇಳೆ ನಮೂನೆ 12ರ ಮೂಲಕ ಕೊರಿಕೆ ಸಲ್ಲಿಸಿದ್ದ ಹಾಗೂ ಎರಡನೇ ಹಂತದ ಮತದಾನವಿರುವ ಜಿಲ್ಲಾ ಚುನಾವಣಾಧಿಕಗಳು ಅನುಮೋದಿಸಿರುವ ಚುನಾವಣಾ ಕರ್ತವ್ಯದಲ್ಲಿ ನಿರತರಾದ ಮತದಾರರಿಗೆ ದಿನಾಂಕ: 22-04-2024 ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಇನ್ನೂ ಮೂರು ದಿನಗಳ ಕಾಲ ಮತದಾನ ಸೌಲಭ್ಯ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಮನೆಗೆ ಅಂಚೆ ಮೂಲಕ ಅಂಚೆ ಮತಪತ್ರಗಳನ್ನು ಕಳುಹಿಸುವುದಿಲ್ಲ, ಖುದ್ದಾಗಿ ಮತದಾನ ಸೇವಾ ಕೆಂದ್ರಗಳಿಗೆ ತೆರಳಿ ಮತ ಚಲಾಯಿಸಬೇಕು:
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಂಚೆ ಮತ ಪತ್ರಗಳನ್ನು ಅಂಚೆ ಮೂಲಕ ಕಳುಹಿಸುವುದಿಲ್ಲ. 12ನೆ ನಮೂನೆ ಮೂಲಕ ಕೋರಿಕೆ ಸಲ್ಲಿಸಿದ್ದ ಎರಡನೇ ಹಂತದ ಮತದಾನವಿರುವ ಜಿಲ್ಲಾ ಚುನಾವಣಾಧಿಕಗಳು ಅನುಮೋದಿಸಿರುವ ಚುನಾವಣಾ ಕರ್ತವ್ಯದಲ್ಲಿ ನಿರತರಾದ ಮತದಾರರು ಮತದಾನ ಸೌಲಭ್ಯ ಕೇಂದ್ರಗಳಿಗೆ ಬಂದು ಅಲ್ಲಿಯೇ ಅಂಚೆ ಮತಪತ್ರಗಳನ್ನು ಪಡೆದು ಮತ ಚಲಾಯಿಸಬೇಕು.
ಎರಡನೇ ತರಬೇತಿಯ ನಂತರ ಮತಗಟ್ಟೆ ಅಧಿಕಾರಿಗಳಿಗೆ ಯಾವ್ಯಾವ ವಿಧಾನಸಭಾ ಕ್ಷೇತ್ರಗಳೆಂಬುದು ಆದೇಶದಲ್ಲಿ ತಿಳಿಸಲಾಗಿದೆ. ಈ ಸಂಬಂಧ ಯಾವ ವಿಧಾನಸಭಾ ಕ್ಷೇತ್ರಕ್ಕೆ ನಿಯೋಜನೆಗೊಂಡಿರುತ್ತಾರೋ ಅದೇ ವಿಧಾನಸಭಾ ಕ್ಷೇತ್ರದಲ್ಲಿರುವ ಮತದಾನ ಸೌಲಭ್ಯ ಕೇಂದ್ರಗಳಿಗೆ ತೆರಳಿ ಅಂಚೆ ಮತ ಪತ್ರ ಮೂಲಕ ಮತ ಚಲಾಯಿಸಬಹುದು.
ಮತದಾರರ ಗಮನಕ್ಕೆ : ಮೊಬೈಲ್ ನಲ್ಲೇ ‘ವೋಟರ್ ಸ್ಲಿಪ್’ ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ