ನವದೆಹಲಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಇಂದು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ನಡುವೆ ಮಾಧ್ಯಮಗಳ ಜೊತೆಗೆ ಪಾರ್ಟಿಗೆ ಸೇರಿದ ಬಳಿಕ ಅವರು ಮಾತನಾಡಿ, ನಾನು ಕಾಂಗ್ರೆಸ್‌ಗೆ ಸೇರಿದ ಬಳಿಕ ಎಲ್ಲರೂ ಕೂಡ ನನ್ನ ಗೌರವಿತವಾಗಿ ನಡೆದಕೊಂಡರು. ಅದರಲ್ಲೂ ಬಹುಮುಖ್ಯವಾಗಿ ಸಿಎಂ. ಸಿದ್ದರಾಮಯ್ಯ ಮತ್ತು ಡಿ.ಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಧನ್ಯವಾದವನ್ನು ಅರ್ಪಿಸುವೆ ಅಂತ ಹೇಳಿದರು.
ಇನ್ನೂ ಇದೇ ವೇಳೆ ಮಾತನಾಡಿರುವ ಅವರು “ಪಕ್ಷವು ಈ ಹಿಂದೆ ನನಗೆ ಸಾಕಷ್ಟು ಜವಾಬ್ದಾರಿಗಳನ್ನು ನೀಡಿತು. ಕೆಲವು ಸಮಸ್ಯೆಗಳಿಂದಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದೆ. ಕಳೆದ 8-9 ತಿಂಗಳುಗಳಲ್ಲಿ, ಸಾಕಷ್ಟು ಚರ್ಚೆಗಳು ನಡೆದವು, ಬಿಜೆಪಿ ಕಾರ್ಯಕರ್ತರು ನನ್ನನ್ನು ಬಿಜೆಪಿಗೆ ಮರಳುವಂತೆ ಕೇಳಿಕೊಂಡರು. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೂ ನಾನು ಬಿಜೆಪಿಗೆ ಮರಳಬೇಕೆಂದು ಬಯಸಿದ್ದರು. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬ ನಂಬಿಕೆಯೊಂದಿಗೆ ನಾನು ಮತ್ತೆ ಪಕ್ಷಕ್ಕೆ ಸೇರುತ್ತಿದ್ದೇನೆ” ಎಂದು ಹೇಳಿದರು.
ಇನ್ನೂ ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಚೆಲುವರಾಯ ಸ್ವಾಮಿ ಅವರು ಪಾರ್ಟಿ ಬಿಟ್ಟು ಹೋಗಿರುವುದರಿಂದ ನಮಗೆ ಯಾವುದೇ ತೊಂದರೆ ಇಲ್ಲ, ಬಿಜೆಪಿಯಿಂದ ಅನ್ಯಾವಾಗಿದಕ್ಕೆ ಅವರು ಇಲ್ಲಿಗೆ ಬಂದಿದ್ದರು ಅಂತ ತಿಳಿಸಿದರು.