ಮಂಡ್ಯ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಜೈಲಿಗೆ ಹೋಗುವ ಕಾಲ ದೂರವಿಲ್ಲ. ರೇವಣ್ಣಗೆ ಆದ ಪರಿಸ್ಥಿತಿಯೂ ಕುಮಾರಸ್ವಾಮಿಗೆ ಆಗಲಿದೆ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಜೈಲಿಗೆ ಹೋಗುವ ದೂರವಿಲ್ಲ. ಹೆಚ್. ಡಿ. ರೇವಣ್ಣನ ಪರಿಸ್ಥಿತಿ ಕುಮಾರಸ್ವಾಮಿಗೂ ಬರಲಿದೆ. ಮುಂದೆ ಕುಮಾರಸ್ವಾಮಿ ವಿರುದ್ಧವೂ ದೂರು ಕೊಡುತ್ತಾರೆ. ಮಹಿಳೆಯರು ದೂರು ಕೊಡುತ್ತಾರೆ. ಬಳಿಕ ಅವರು ಜೈಲಿಗೆ ಹೋಗಲಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಜೆಡಿಎಸ್ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಿ ತನಿಖೆ ಮಾಡಬೇಕು. ಪ್ರಕರಣದಲ್ಲಿ ಕೆಲವರನ್ನು ಅನವಶ್ಯಕವಾಗಿ ಸಿಕ್ಕಿಸಲಾಗುತ್ತಿದೆ ಎಂದಿದ್ದಾರೆ.