ಶಿವಮೊಗ್ಗ: ಸಾಗರ ನಗರದಲ್ಲಿ ಅಕ್ಷಯಸಾಗರ ಸೌಹಾರ್ದ ಸಹಕಾರಿ ಸಂಘದ ನೂತನ ಅಕ್ಷಯಸಾಗರ ಬೆಳ್ಳಿ ಭವನವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಲೋಕಾರ್ಪಣೆಗೊಳಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ವಿನೋಬನಗರ, ಸಣ್ಣಮನೆ ಬಡಾವಣೆಯಲ್ಲಿ ಅಕ್ಷಯಸಾಗರ ಸೌಹಾರ್ದ ಸಹಕಾರಿ ಸಂಘದ ನೂತನ ಅಕ್ಷಯಸಾಗರ ಬೆಳ್ಳಿ ಭವನವನ್ನು ನಿರ್ಮಿಸಲಾಗಿತ್ತು. ಇಂತಹ ನೂತನ ಭವನವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಿಬ್ಬನ್ ಕಟ್ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು. ಅಲ್ಲದೇ ಕಟ್ಟಡದ ಒಳಗೆ ತೆರಳಿ, ಇರಿಸಲಾಗಿದ್ದಂತ ದೇವರ ಪೋಟೋಗಳಿಗೆ ಪುಷ್ಪಾರ್ಚನೆ ಮಾಡಿದರು.
ಈ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ನಾನು ಶಿಕಾರಿಪುರದಲ್ಲಿ ವೀರಶೈವ ಸಹಾಕರ ಸಂಘದ ಅಧ್ಯಕ್ಷನಾಗುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ. ಇದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ರಾಜ್ಯದಲ್ಲಿ 1905ರಲ್ಲಿ ಸಹಕಾರ ಚಳುವಳಿ ಪ್ರಾರಂಭವಾಯಿತು. ಸಹಕಾರಿ ಕ್ಷೇತ್ರ ಜಾತಿ, ಮತ, ಪಂಥಗಳನ್ನು ಮೀರಿದ್ದಾಗಿದೆ. ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರವು ಇಷ್ಟು ವಿಸ್ತಾರವಾಗಿ ಬೆಳೆದಿದೆ ಎಂಬುದನ್ನು ಕಂಡರೆ ಸಂತೋಷವಾಗುತ್ತದೆ ಎಂದರು.
ಸ್ಥಳೀಯವಾಗಿ ಹೆಚ್ಚು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಸಾಗರದಲ್ಲೂ ಈ ಕಾರಣಕ್ಕೆ ಅಕ್ಷಯಸಾಗರ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವಂತೆ ಆಗಿದೆ. ಇನ್ನೂ ಹೆಚ್ಚು ಹೆಚ್ಚು ಜನರಿಗೆ ಅಕ್ಷಯಸಾಗರ ಸೌಹಾರ್ದ ಸಹಕಾರಿ ಸಂಘದಿಂದ ಅನುಕೂಲವಾಗಲಿ. ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಸಂಸದ ಬಿವೈ ರಾಘವೇಂದ್ರ ಮಾತನಾಡಿ ಭಾರತವು ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ನೀಡಿದ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಂತ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಶಕ್ತಿಯನ್ನು ತುಂಬಿದರು. ಸದ್ಯ ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿ ಕ್ಷೇತ್ರಕ್ಕೆ ಅತಿಹೆಚ್ಚು ಸಾಲ ಸೌಲಭ್ಯ ನೀಡುತ್ತಿರುವುದರಲ್ಲಿ ಸಹಕಾರಿ ಕ್ಷೇತ್ರದ ಪಾಲು ಹೆಚ್ಚಿದೆ ಎಂದರು.
ಕೋಲಾರ ಬಿಟ್ಟು ಉಳಿದೆಲ್ಲಡೆ ಅಕ್ಷಯಸಾಗರ ಶಾಖೆ ಆರಂಭಗೊಂಡಿದೆ. ಸಾಗರ ತಾಲ್ಲೂಕು ಮಟ್ಟದ ಸಹಕಾರಿ ಸಂಘವೊಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದೆ ಎಂದರೇ ಅದು ಹೆಮ್ಮೆಯ ವಿಷಯವಾಗಿದೆ. ಇನ್ನೂ ಎತ್ತರಕ್ಕೆ ಬೆಳೆಯುವಂತಾಗಲಿ ಎಂದರು.
ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಇಂದು ಅಕ್ಷಯಸಾಗರ ಸಹಕಾರಿ ಸಂಘವು 150 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ನಡೆಸುತ್ತಿದೆ. ನಾನು ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ನಿರ್ದೇಶಕನಾಗಿ ಇತ್ತೀಚೆಗೆ ಆಯ್ಕೆಯಾಗಿದ್ದೇನೆ. ಉತ್ತರ ಕರ್ನಾಟಕದ ಬಹುತೇಕ ಶಾಸಕರು, ಸಚಿವರು ಸಹಕಾರಿ ಕ್ಷೇತ್ರದಲ್ಲಿ ಇದ್ದಾರೆ ಎಂದರು.
ಸಹಕಾರಿ ಸಂಸ್ಥೆಯನ್ನು ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಅಗತ್ಯ ಸಂದರ್ಭದಲ್ಲಿ ಸಾಲ ಸೌಲಭ್ಯಗಳನ್ನು ಸಹಕಾರಿ ಸಂಸ್ಥೆಗಳು ನೀಡುತ್ತಿವೆ. ಪಡೆದುಕೊಂಡು, ಸದುಪಯೋಗ ಪಡಿಸಿಕೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಪಡೆಯೋದಕ್ಕೆ ಅನೇಕ ದಾಖಲೆಗಳನ್ನು ನೀಡಲು ಅಲೆದಾಡಿಸ್ತಾರೆ. ಇಲ್ಲಿ ಹಾಗಿಲ್ಲ ಎಂದರು.
ಶ್ರೀಶೈಲಪೀಠದ ಜಗದ್ಗುರು ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜಾತಿ, ಲಿಂಗ, ವರ್ಣ, ವರ್ಗ ಸಮಾನತೆಗಿಂತ ಆರ್ಥಿಕ ಸಮಾನತೆ ಅತಿಮುಖ್ಯವಾಗಿದೆ. ಎಲ್ಲ ರಂಗಗಳು ಸಕ್ರಿಯಗೊಳ್ಳಬೇಕಾದರೆ ಆರ್ಥಿಕ ಸಮಾನತೆ ಮೊದಲು ಬರಬೇಕು. ದೇಶದಲ್ಲಿ ಆರ್ಥಿಕ ಸಮಾನತೆ ತರುವಲ್ಲಿ ಸಹಕಾರಿ ಸಂಸ್ಥೆಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಶ್ರೀಮಂತರಿಂದ ಹಣವನ್ನು ಠೇವಣಿಯಾಗಿ ಪಡೆದು, ಬಡವರಿಗೆ ಸಾಲ ರೂಪದಲ್ಲಿ ನೀಡಿ ಅವರಲ್ಲಿ ಆರ್ಥಿಕ ಶಕ್ತಿ ತುಂಬುವ ಕೆಲಸ ಸಹಕಾರಿ ಕ್ಷೇತ್ರ ಮಾಡುತ್ತಿದೆ. ಬೆಳ್ಳಿಹಬ್ಬದಂತಹ ಸಂದರ್ಭದಲ್ಲಿ ಸುಸಜ್ಜಿತ ಭವನ ಸಮಾಜಕ್ಕೆ ನೀಡುತ್ತಿರುವುದು ಅಭಿನಂದಾರ್ಹ ಸಂಗತಿ ಎಂದರು.
ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಬದಲಾದ ದಿನಮಾನಗಳಲ್ಲಿ ಸೌಹಾರ್ದತೆ ತನ್ನ ಅರ್ಥ ಕಳೆದುಕೊಳ್ಳುತ್ತಿದೆ. ತಾನೊಬ್ಬ ಸುಖವಾಗಿದ್ದರೆ ಸಾಕು ಎನ್ನುವ ಯೋಚನೆ ಜನರ ಮನಸ್ಸಿನಲ್ಲಿದೆ. ಎಲ್ಲರೂ ಚೆನ್ನಾಗಿರಬೇಕು ಎಂದು ಬಯಸುವುದು ಸೌಹಾರ್ದ ಸಹಕಾರಿ ಸಂಸ್ಥೆಗಳು ಎನ್ನುವುದು ಗಮನಾರ್ಹ ಸಂಗತಿ. ಅಕ್ಷಯ ಸಾಗರ ಸೌಹಾರ್ದತೆ ಮನೋಭಾವ ಬಿತ್ತುವ ಕೆಲಸ ಮಾಡಿಕೊಂಡು ಬರುತ್ತಿದೆ. ಇಪ್ಪತ್ತೈದು ವರ್ಷಗಳ ನೆನಪಿಗಾಗಿ ಅತ್ಯಂತ ಸುಂದರವಾದ ಬೆಳ್ಳಿಭವನ ನಿರ್ಮಿಸಿರುವುದು ಸಂಸ್ಥೆಯ ಆರ್ಥಿಕ ದೃಢತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಳಲಿಮಠದ ಶ್ರೀಗಳು, ಜಡೆಮಠದ ಶ್ರೀಗಳು, ಕೋಣಂದೂರು ಬ್ರಹನ್ಮಠದ ಶ್ರೀಗಳು, ಮೂಲೆಗದ್ದೆ ಮಠದ ಶ್ರೀಗಳು, ಕ್ಯಾಸನೂರು ಮಠದ ಶ್ರೀಗಳು, ಮಾಜಿ ಸಚಿವ ಹರತಾಳು ಹಾಲಪ್ಪ, ನಂಜನಗೌಡ್ರು, ಎ.ಆರ್.ಪ್ರಸನ್ನಕುಮಾರ್, ಎಚ್.ಬಿ..ಮಲ್ಲಿಕಾರ್ಜುನ ಹಕ್ರೆ, ಬಿ.ಎ.ಇಂದೂಧರ ಗೌಡ, ಚಂದ್ರಶೇಖರ್ ನಾಗಭೂಷಣ್ ಕಲ್ಮನೆ, ಎಂ.ಎಚ್.ಗೌಡ್ರು, ಬಸಪ್ಪ ಗೌಡ್ರು ಕೆರೋಡಿ, ಜಗದೀಶ್ ಒಡೆಯರ್, ಎಂ.ಎಸ್.ಗೌಡರ್ ಇನ್ನಿತರರು ಹಾಜರಿದ್ದರು.
ಈ ಕಾರ್ಯಕ್ರಮದಲ್ಲಿ ನಂದಿನಿ ಬಸವರಾಜ್ ಪ್ರಾರ್ಥಿಸಿದರು. ಅಕ್ಷಯಸಾಗರ ಸೌಹಾರ್ದ ಸಹಕಾರಿ ಅಧ್ಯಕ್ಷ ಬಿ.ಜಿ.ದಿನೇಶ್ ಬರದವಳ್ಳಿ ಸ್ವಾಗತಿಸಿದರು. ಟಿ.ಡಿ.ಮೇಘರಾಜ್ ಪ್ರಾಸ್ತಾವಿಕ ಮಾತನಾಡಿದರು. ಲೋಕನಾಥ್ ಬಿಳಿಸಿರಿ ವಂದಿಸಿದರು. ಸಮನ್ವಯ ಕಾಶಿ ನಿರೂಪಿಸಿದರು.
ಆಧಾರ್ ಕಾರ್ಡ್ ಪಡೆಯುವುದು ಮತ್ತಷ್ಟು ಸರಳ: ಜಸ್ಟ್ ಹೀಗೆ ಮಾಡಿ | Aadhaar Card
‘ಸ್ವ ಉದ್ಯೋಗಾಕಾಂಕ್ಷಿ’ಗಳ ಗಮನಕ್ಕೆ: ಟೈಲರಿಂಗ್ ಸೇರಿ ವಿವಿಧ ‘ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ
BIG NEWS : ಅನರ್ಹರ `BPL’ ಕಾರ್ಡ್ ಗಳು ಮಾತ್ರ ವಾಪಸ್ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ