Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದ ಅರಣ್ಯ ಪ್ರದೇಶಗಳ ಸಮಗ್ರ ಕ್ರೋಡಿಕೃತ ದಾಖಲೀಕರಣಕ್ಕೆ ‘ತಜ್ಞರ ಸಮಿತಿ’ ರಚನೆ
KARNATAKA

BIG NEWS: ರಾಜ್ಯದ ಅರಣ್ಯ ಪ್ರದೇಶಗಳ ಸಮಗ್ರ ಕ್ರೋಡಿಕೃತ ದಾಖಲೀಕರಣಕ್ಕೆ ‘ತಜ್ಞರ ಸಮಿತಿ’ ರಚನೆ

By kannadanewsnow0924/10/2024 7:36 PM

ಬೆಂಗಳೂರು: ರಾಜ್ಯದ ಅಧಿಸೂಚಿತ, ದಾಖಲಿತ ಅರಣ್ಯ ಮತ್ತು ಪರಿಭಾವಿತ ಅರಣ್ಯ ಭೂಮಿಗಳ ಸಮಗ್ರ ದಾಖಲೀಕರಣಕ್ಕಾಗಿ 15 ದಿನಗಳಲ್ಲಿ ತಜ್ಞರ ಸಮಿತಿ ರಚಿಸಲು ಅರಣ್ಯ ಮತ್ತು ಕಂದಾಯ ಸಚಿವರ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವನ್ ಸಂರಕ್ಷಣ ಏವಂ ಸಂವರ್ಧನ ಅಧಿನಿಯಮ 1980ರ ನಿಯಮ 16ರಡಿ ಹೊಸದಾಗಿ ತಜ್ಞರ ಸಮಿತಿ ರಚಿಸಲು ಅವಕಾಶವಿದ್ದು, ಈ ನೂತನ ಸಮಿತಿ ರಾಜ್ಯದ ಅಧಿಸೂಚಿತ ಮತ್ತು ದಾಖಲಿತ ಅರಣ್ಯದ ಸಮಗ್ರ ದಾಖಲೀಕರಣ ರಚಿಸುವದೊಂದಿಗೆ ಪ್ರಸ್ತುತ ಪರಿಭಾವಿತ ಅರಣ್ಯ ಪ್ರದೇಶದ ನ್ಯೂನತೆಗಳನ್ನು ಪರೀಶಿಲಿಸಿ, ಸರಿಪಡಿಸಿ 6 ತಿಂಗಳೊಳಗೆ ಕ್ರೋಡಿಕೃತ ವರದಿ ಸಲ್ಲಿಸಲಿದೆ.

ಕೇಲವು ಪರಿಭಾವಿತ ಅರಣ್ಯ ಎಂದು ಗುರುತಿಸಿರುವ ಪ್ರದೇಶದಲ್ಲಿ ಅಧಿಸೂಚಿತ ಅರಣ್ಯ, ಪಟ್ಟಾಭೂಮಿ, ಸರ್ಕಾರಿ ಕಚೇರಿ, ಶಾಲೆ ಕಾಲೇಜುಗಳೂ ಇವೆ ಹೀಗಾಗಿ ಇದರ ಪರೀಶಿಲನೆ ಆಗಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಸಹ ಅಧ್ಯಕ್ಷತೆಯಲ್ಲಿಂದು ವಿಕಾಸಸೌಧದಲ್ಲಿ ಮಹತ್ವದ ಸಭೆ ನಡೆಸಲಾಯಿತು.

ಗೋದಾವರ್ಮನ್ ತಿರುಮಲ್ಪಾಡ್ V/s ಕೇಂದ್ರ ಸರ್ಕಾರ ಹಾಗೂ ಇತರರು ಪ್ರಕರಣದಲ್ಲಿ ಸುಪ್ರೀಂಕೋರ್ಟ್ 1996ರಲ್ಲಿ ಅರಣ್ಯ ಮತ್ತು ಅರಣ್ಯ ಭೂಮಿಯ ಬಗ್ಗೆ ವ್ಯಾಖ್ಯಾನ ನೀಡಿ, ಅರಣ್ಯ ಗುರುತಿಸಲು ತಜ್ಞರ ಸಮಿತಿ ರಚಿಸಿ ಅಫಿಡವಿಟ್ ನಲ್ಲಿ ವಾಸ್ತವ ವರದಿ ಸಲ್ಲಿಸಲು ಸೂಚಿಸಿತ್ತು.

ತಜ್ಞರ ಸಮಿತಿ -1 ಸಮೀಕ್ಷೆ ನಡೆಸಿ 9,94,881.11 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಎಂದು ಗುರುತಿಸಿತ್ತು. ಆದರೆ ಈ ಗುರುತಿಸುವಿಕೆಯಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ, ಕಂದಾಯ ವಿಭಾಗ ಮತ್ತು ರಾಜ್ಯ ಮಟ್ಟದ ಸಮಿತಿಗಳನ್ನು ನೇಮಿಸಲಾಗಿತ್ತು. ಈ ಸಮಿತಿ 3,30,186.93 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಎಂದು ಗುರುತಿಸಿತ್ತು.

ಸಚಿವ ಈಶ್ವರ ಖಂಡ್ರೆ ಸಲಹೆ:

ಪುನರ್ ಪರಿಶೀಲನೆಗೆ ನೇಮಿಸಲಾಗುವ ಸಮಿತಿ ಈಗಾಗಲೇ ಸುಪ್ರೀಂಕೋರ್ಟ್ ಗೆ ಪ್ರಮಾಣಪತ್ರದಲ್ಲಿ ತಿಳಿಸಲಾಗಿರುವ 3,30,186.93 ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಸರ್ಕಾರಿ ಕಚೇರಿ, ಶಾಲೆ, ಪಟ್ಟಾಭೂಮಿ ಇತ್ಯಾದಿ ಇದ್ದಲ್ಲಿ, ಇದಕ್ಕೆ ಪರ್ಯಾಯವಾಗಿ ಮರಗಿಡಗಳಿಂದ ಸಮೃದ್ಧವಾದ ಇತರ ಪ್ರದೇಶವನ್ನು ಗುರುತಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ ಈಗಾಗಲೇ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದು, ರಾಜ್ಯದ 20 ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಒಂದೆರೆಡು ಜಿಲ್ಲೆ ಆಯ್ಕೆ ಮಾಡಿಕೊಂಡು ಜಂಟಿ ಸರ್ವೆ ನಡೆಸಿದಲ್ಲಿ ಸಮಸ್ಯೆಗಳು, ಗೊಂದಲಗಳ ಬಗ್ಗೆ ತಿಳಿಯುತ್ತದೆ. ಇದು ನೂತನ ತಜ್ಞರ ಸಮಿತಿ ವರದಿ ಸಲ್ಲಿಕೆಗೆ ನೆರವಾಗಲಿದೆ ಎಂದು ತಿಳಿಸಿದರು.

ಅರಣ್ಯ ಇಲಾಖೆ ಕಂದಾಯ ಇಲಾಖೆಗೆ ಎಲ್ಲ ಅಧಿಸೂಚಿತ ಮತ್ತು ಪರಿಭಾವಿತ ಅರಣ್ಯದ ಪಟ್ಟಿಯನ್ನು ತಮ್ಮ ಬಳಿ ಇರುವ ನಕ್ಷೆಯೊಂದಿಗೆ ನೀಡಿದಲ್ಲಿ, ತಾಳೆ ಮಾಡಿ ಪರಿಶೀಲನೆಗೆ ಅನುಕೂಲವಾಗುತ್ತದೆ ಎಂದೂ ಅವರು ಸಲಹೆ ನೀಡಿದರು.

ಜಂಟಿ ಸರ್ವೆ:

ಅದೇ ರೀತಿ ಪರಿಭಾವಿತ ಅರಣ್ಯಕ್ಕೆ ಸಂಬಂಧಿಸಿದಂತೆ ಎಲ್ಲೆಲ್ಲಿ ಗೊಂದಲ ಇದೆಯೋ ಆ ಜಿಲ್ಲೆಗಳಲ್ಲಿ ಮತ್ತು ಒಂದೇ ಸರ್ವೆ ನಂಬರ್ ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಎರಡೂ ಇರುವ ಭೂಮಿಯ ಜಂಟಿ ಸರ್ವೆ ನಡೆಸಲು ಉಳಿದಂತೆ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ಮುಂದೆ ಯಾವುದೇ ಲೋಪದೋಷಕ್ಕೆ ಆಸ್ಪದ ಇಲ್ಲದಂತೆ ಪರಿಭಾವಿತ ಅರಣ್ಯದ ವಾಸ್ತವ ವರದಿ ಸಲ್ಲಿಸಲು ಸೂಚಿಸುವ ಬಗ್ಗೆ ಚರ್ಚಿಸಲಾಯಿತು.

ತಂತ್ರಜ್ಞಾನದ ನೆರವು:

ಹೊಸದಾಗಿ ರಚಿಸಲಾಗುವ ತಜ್ಞರ ಸಮಿತಿ ಅರಣ್ಯ ಇಲಾಖೆ ಈಗಾಗಲೇ ಸಿದ್ಧಪಡಿಸಿರುವ ಅರಣ್ಯ ದತ್ತಾಂಶವನ್ನು ಬಳಸಲು ಮತ್ತು ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಜಿಐಎಸ್ ಮತ್ತು ದೂರಸಂವೇದಿ ನೆರವನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ(KSRSAC) ದಿಂದ ಪಡೆಯಲೂ ನಿರ್ಧರಿಸಲಾಯಿತು.

ಈ ಸಮಿತಿಯ ರಚನೆಯಿಂದ ಪರಿಭಾವಿತ ಮತ್ತು ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಇರುವ ಗೊಂದಲ ಪರಿಹಾರವಾಗುವ ವಿಶ್ವಾಸವನ್ನು ಸಭೆ ವ್ಯಕ್ತಪಡಿಸಿತು.

ಈ ಸಭೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ ಮತ್ತು ಎರಡೂ ಇಲಾಖೆಗಳ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.

ಶಿಗ್ಗಾಂವಿಯಿಂದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲೊಬ್ಬ ಅಪರೂಪದ ‘ಡೊಳ್ಳು ಕಲಾವಿದ’: ಇವರ ಸಾಧನೆ ಕೇಳಿದ್ರೆ ‘ನೀವೇ ಶಾಕ್’ ಆಗ್ತೀರಿ

Share. Facebook Twitter LinkedIn WhatsApp Email

Related Posts

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM1 Min Read

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM2 Mins Read

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM2 Mins Read
Recent News

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM

ಸುರಕ್ಷಿತ ಲೈಂಗಿಕತೆ: ಆರೋಗ್ಯಕರ ಜೀವನಕ್ಕೆ ಒಂದು ಮಾರ್ಗದರ್ಶಿ, ಇಲ್ಲಿದೆ ಟಿಪ್ಸ್

15/03/2026 9:43 PM
State News
KARNATAKA

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

By kannadanewsnow0915/03/2026 10:37 PM KARNATAKA 1 Min Read

​ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿವಂಗತ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್‌ ಅವರೊಂದಿಗಿನ ತಮ್ಮ ಒಡನಾಟ ಮತ್ತು ಲಂಕೇಶ್‌ ಪತ್ರಿಕೆಯಲ್ಲಿ…

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM

ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ

15/03/2026 7:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.