Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : 8ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಿಂದ ಮರಾಠ ಸಾಮ್ರಾಜ್ಯದ ನಕ್ಷೆ ತೆಗೆದು ಹಾಕಿದ ‘NCERT’

20/03/2026 5:34 AM

BREAKING : ರಾಜ್ಯದಲ್ಲಿ ಇನ್ಮುಂದೆ ಜಯಂತಿ, ಉತ್ಸವಗಳಲ್ಲಿ ಡಿಜೆ ಬ್ಯಾನ್? : ಆಡಳಿತ, ವಿಪಕ್ಷ ನಾಯಕರಿಂದ ಆಗ್ರಹ!

20/03/2026 5:30 AM

ಹೊಸ `ಪ್ಯಾನ್ ಕಾರ್ಡ್’ ಪಡೆಯಲು ಆಧಾರ್ ಕಾರ್ಡ್ ಜೊತೆಗೆ ಈ ದಾಖಲೆಗಳು ಕಡ್ಡಾಯ : ಏ.1ರಿಂದ ಹೊಸ ರೂಲ್ಸ್ !

20/03/2026 5:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ 6 ಟಾಸ್ಕ್ ಫೊರ್ಸ್ ರಚನೆ: ಸಚಿವ ಎಂ.ಬಿ ಪಾಟೀಲ
KARNATAKA

ರಾಜ್ಯದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ 6 ಟಾಸ್ಕ್ ಫೊರ್ಸ್ ರಚನೆ: ಸಚಿವ ಎಂ.ಬಿ ಪಾಟೀಲ

By kannadanewsnow0910/06/2025 8:30 PM

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ತಯಾರಿಕಾ ವಲಯದಲ್ಲಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸರಕಾರವು 6 ಪ್ರಮುಖ ವಲಯಗಳ ಪ್ರಗತಿಗೆ ಪ್ರತ್ಯೇಕ ಟಾಸ್ಕ್-ಫೋರ್ಸ್ ಗಳನ್ನು ರಚಿಸಲಿದೆ. ಇದಕ್ಕೆ ಬೇಕಾದ ಸಮಗ್ರ ಟೌನ್-ಶಿಪ್ ಗಳ ಅಭಿವೃದ್ಧಿಯಿಂದ ಹಿಡಿದು ಕೈಗಾರಿಕಾ ಪ್ರದೇಶಗಳಿಂದ ಮಂಗಳೂರು ಮತ್ತು ಚೆನ್ನೈ ಬಂದರುಗಳಿಗೆ ಬೇಕಾದ ಸಮರ್ಪಕ ಸಂಪರ್ಕದವರೆಗೆ ಪ್ರತಿಯೊಂದು ಸೌಲಭ್ಯಗಳನ್ನೂ ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಹೇಳಿದ್ದಾರೆ.

ತಯಾರಿಕಾ ವಲಯದ ಬಲವರ್ಧನೆಗೆ ಆಗಬೇಕಾದ ಕಾಯಕಲ್ಪ ಕುರಿತು 60 ಕಂಪನಿಗಳ 80 ಮುಖ್ಯಸ್ಥರು ಮತ್ತು ಸಿಇಒಗಳೊಂದಿಗೆ ನಡೆದ `ಉತ್ಪಾದನಾ ಮಂಥನ’ ಸಮಾವೇಶದಲ್ಲಿ ಅವರು ಮಾತನಾಡಿದರು.

ಈ ಸಮಾವೇಶದಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್, ಕ್ಯಾಪಿಟಲ್ ಗೂಡ್ಸ್ ಮತ್ತು ರೋಬೋಟಿಕ್ಸ್, ಆಟೋ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್, ಟೆಕ್ನಿಕಲ್ ಮತ್ತು ಎಂಎಂಎಫ್ ಬೇಸ್ಡ್ ಟೆಕ್ಸ್ಟೈಲ್ಸ್ ಹಾಗೂ ಪಾದರಕ್ಷೆ, ಗೊಂಬೆ ಮತ್ತು ಎಫ್ಎಂಸಿಜಿ ಉತ್ಪನ್ನಗಳನ್ನು ಒಳಗೊಂಡಿರುವ ಗ್ರಾಹಕ ಉತ್ಪನ್ನಗಳ ವಲಯಗಳ ಮೇಲೆ ಗಮನ ಕೇಂದ್ರೀಕರಿಸಲಾಗಿತ್ತು. ಇದಕ್ಕೆ ಪೂರಕವಾಗಿ ಒಂದೊಂದು ವಲಯಕ್ಕೂ ಸಂಬಂಧಿಸಿದಂತೆ ಏರ್ಪಡಿಸಿದ್ದ ವಿಚಾರ ಸಂಕಿರಣ ಮತ್ತು ಪ್ರಾತ್ಯಕ್ಷಿಕೆ ಪ್ರದರ್ಶನಗಳಲ್ಲಿ ಸಚಿವರು ಇಡೀ ದಿನ ಇದ್ದು, ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಕೈಗಾರಿಕಾ ವಲಯವು ತಯಾರಿಕಾ ವಲಯಕ್ಕೆ ಹೊರಳಿಕೊಳ್ಳಬೇಕಾಗಿದೆ. ಇದಕ್ಕಾಗಿ ರಫ್ತು ಕೇಂದ್ರಿತವಾಗಿರುವಂಥ `ಫ್ರೀ ಟ್ರೇಡ್ ವೇರ್-ಹೌಸಿಂಗ್ ಝೋನ್’ಗಳು, ರಫ್ತನ್ನೇ ಮುಖ್ಯವಾಗಿ ಹೊಂದಿರುವ ಕೈಗಾರಿಕಾ ಪಾರ್ಕುಗಳು, ಬಂದರುಗಳಿಗೆ ತ್ವರಿತ ಸಂಪರ್ಕ ವ್ಯವಸ್ಥೆ ಎಲ್ಲವನ್ನೂ ಕಲ್ಪಿಸಲಾಗುವುದು. ಉದ್ಯಮಿಗಳು ಮಾಡಿರುವ ಶಿಫಾರಸುಗಳನ್ನು ಸರಕಾರದ ಕ್ರಿಯಾ ಯೋಜನೆಯ ಭಾಗವನ್ನಾಗಿ ಮಾಡಿಕೊಳ್ಳಲಾಗುವುದು. ಜೊತೆಗೆ, ಆರೂ ವಲಯಗಳಲ್ಲಿ ಪ್ರಗತಿ ಸಾಧಿಸಲು ಟಾಸ್ಕ್-ಫೋರ್ಸ್ ಗಳನ್ನು ರಚಿಸಲಾಗುವುದು. ಇದಕ್ಕಾಗಿ 2030ರ ಹೊತ್ತಿಗೆ 7.5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಜತೆಗೆ, 20 ಲಕ್ಷ ಉದ್ಯೋಗ ಸೃಷ್ಟಿಸುವತ್ತ ದಾಪುಗಾಲು ಇಡಬೇಕಾಗಿದೆ. ಮೂರು ತಿಂಗಳ ಬಳಿಕ ಮತ್ತೊಮ್ಮೆ ಸಾಧಕಬಾಧಕಗಳನ್ನು ಚರ್ಚಿಸಲಾಗುವುದು ಎಂದಿದ್ದಾರೆ.

ಉದ್ಯಮಿಗಳು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್ ಉತ್ಪಾದನೆಗೆ ಅನುಕೂಲವಾಗುವಂತೆ ಐಚ್ಛಿಕ ಕೋರ್ಸ್ ಆರಂಭಿಸಬೇಕು, ಸುಗಮ ವಹಿವಾಟಿಗೆ ಕಸ್ಟಮ್ಸ್ ವ್ಯವಸ್ಥೆ ಸುಲಭವಾಗಬೇಕು, ಪ್ಲಗ್ ಅಂಡ್ ಪ್ಲೇ ಮಾದರಿಯಲ್ಲಿ ಕೈಗಾರಿಕಾ ಟೌನ್ಶಿಪ್ ಗಳು ನಿರ್ಮಾಣವಾಗಬೇಕು, ಆಧುನಿಕ ತಯಾರಿಕಾ ಸಂಸ್ಥೆ ಬರಬೇಕು, ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ರಾಜ್ಯವು ನಿರ್ದಿಷ್ಟ ಟ್ರೇಡ್ ಡೆಸ್ಕ್ಸ್ ಪ್ರಾರಂಭಿಸಬೇಕು, ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮೋದನೆ ಪಡೆಯುವ ಪ್ರಕ್ರಿಯೆ ಸರಳವಾಗಬೇಕು ಎಂಬ ಸಲಹೆಗಳನ್ನು ನೀಡಿದ್ದಾರೆ. ಸರಕಾರವು ಇವೆಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ, ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ವೈಮಾನಿಕ ಕ್ಷೇತ್ರದಲ್ಲಿ ಉತ್ಪಾದಿಸುವಂತಹ ಗುಣಮಟ್ಟದ ಸ್ಟೀಲ್ ಅಲಾಯ್ ಮತ್ತು ಕಾಂಪೋಸಿಟ್ ಮೆಟೀರಿಯಲ್ ಗಳಿಗೆ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸಬೇಕೆಂಬ ಬೇಡಿಕೆಯನ್ನು ಪರಿಶೀಲಿಸಲಾಗುವುದು. ಬ್ಯಾಟರಿ ಮತ್ತು ಇತರ ಬಿಡಿಭಾಗಗಳನ್ನು ತಯಾರಿಸುವ ಕೈಗಾರಿಕಾ ಕ್ಲಸ್ಟರುಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ವಿದ್ಯುತ್-ಚಾಲಿತ ವಾಹನ ತಯಾರಿಕೆ ಕ್ಷೇತ್ರಕ್ಕೆ ಬಲ ತುಂಬಲಾಗುವುದು. ಅಲ್ಲದೆ, ಗ್ರೀನ್ ಹೈಡ್ರೋಜನ್, ಮೆಡ್-ಟೆಕ್, ವೈಮಾಂತರಿಕ್ಷ ಎಂಆರ್ ಒ, ಪ್ರಿಸಿಷನ್ ಎಂಜಿನಿಯರಿಂಗ್ ಮತ್ತು ಸ್ಪೇಸ್-ಟೆಕ್ ಕ್ಷೇತ್ರಗಳಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿರುವಂತೆ ನೋಡಿಕೊಳ್ಳಲಾಗುವುದು ಎಂದು ಪಾಟೀಲ ನುಡಿದಿದ್ದಾರೆ.

ಉತ್ಪಾದನಾ ಮಂಥನದಲ್ಲಿ ಆ್ಯಕ್ಸೆಲ್ ಕಂಪನಿಯ ಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್, ಏಕಸ್ ಕಂಪನಿಯ ಮುಖ್ಯಸ್ಥ ಅರವಿಂದ್ ಮೆಳ್ಳಿಗೇರಿ, ಡೆಲ್ಟಾ ಎಲೆಕ್ಟ್ರಾನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ನಾಯಕ್, ಅಪ್ಲೈಡ್ ಮೆಟೀರಿಯಲ್ಸ್ ಮುಖ್ಯಸ್ಥ ಅವಿನಾಶ ಅವುಲಾ, ಕ್ರೋನ್ಸ್ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಹನಗೂಡು, ವಿಂಗ್ಸ್ ಆಗ್ರೋ ಸಿಇಒ ಹಿರೇನ್ ಸೋಧಾ, ಶಾಹಿ ಎಕ್ಸ್ಪೋರ್ಟ್ಸ್ ಮುಖ್ಯಸ್ಥ ಪಿ ಬಿ ಆನಂದ್, ನಾರ್ ಬ್ರೆಮ್ಸ್ ಸಿಟಿಒ ಶ್ರೀಕಿರಣ್ ಕೋಸನಂ ಮತ್ತು ನ್ಯೂಸ್ಪೇಸ್ ಕಂಪನಿಯ ಸಹ ಸಂಸ್ಥಾಪಕ ದಿಲೀಪ್ ಛಾಬ್ರಿಯಾ ಮುಂತಾದವರು ಪಾಲ್ಗೊಂಡಿದ್ದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವುಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಒಂದೇ ಒಂದು ಫೋನ್ ಕರೆ, ಖಾತೆಯಿಂದ 1.4 ಕೋಟಿ ರೂ. ಮಾಯ ; ಹೇಗಾಯ್ತು ಅಂತಾ ಗೊತ್ತಾದ್ರೆ ಶಾಕ್ ಆಗ್ತೀರಾ!

ನೀವು ಕಾರಲ್ಲಿ ‘ಸೀಟ್ ಬೆಲ್ಟ್’ ಹಾಕದೇ ಹೋಗ್ತೀರಾ? ಈ ಸುದ್ದಿ ಓದಿ

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಇನ್ಮುಂದೆ ಜಯಂತಿ, ಉತ್ಸವಗಳಲ್ಲಿ ಡಿಜೆ ಬ್ಯಾನ್? : ಆಡಳಿತ, ವಿಪಕ್ಷ ನಾಯಕರಿಂದ ಆಗ್ರಹ!

20/03/2026 5:30 AM1 Min Read

ಹೊಸ `ಪ್ಯಾನ್ ಕಾರ್ಡ್’ ಪಡೆಯಲು ಆಧಾರ್ ಕಾರ್ಡ್ ಜೊತೆಗೆ ಈ ದಾಖಲೆಗಳು ಕಡ್ಡಾಯ : ಏ.1ರಿಂದ ಹೊಸ ರೂಲ್ಸ್ !

20/03/2026 5:25 AM2 Mins Read

ಪೋಷಕರೇ ಇತ್ತ ಗಮನಿಸಿ: ನಿಮ್ಮ ಮಕ್ಕಳ `SSLC-PUC’ ಬಳಿಕ ಯಾವ ಕೋರ್ಸ್ ಬೆಸ್ಟ್? ಇಲ್ಲಿದೆ ವಿವರ !

20/03/2026 5:20 AM2 Mins Read
Recent News

BIG NEWS : 8ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಿಂದ ಮರಾಠ ಸಾಮ್ರಾಜ್ಯದ ನಕ್ಷೆ ತೆಗೆದು ಹಾಕಿದ ‘NCERT’

20/03/2026 5:34 AM

BREAKING : ರಾಜ್ಯದಲ್ಲಿ ಇನ್ಮುಂದೆ ಜಯಂತಿ, ಉತ್ಸವಗಳಲ್ಲಿ ಡಿಜೆ ಬ್ಯಾನ್? : ಆಡಳಿತ, ವಿಪಕ್ಷ ನಾಯಕರಿಂದ ಆಗ್ರಹ!

20/03/2026 5:30 AM

ಹೊಸ `ಪ್ಯಾನ್ ಕಾರ್ಡ್’ ಪಡೆಯಲು ಆಧಾರ್ ಕಾರ್ಡ್ ಜೊತೆಗೆ ಈ ದಾಖಲೆಗಳು ಕಡ್ಡಾಯ : ಏ.1ರಿಂದ ಹೊಸ ರೂಲ್ಸ್ !

20/03/2026 5:25 AM

ಪೋಷಕರೇ ಇತ್ತ ಗಮನಿಸಿ: ನಿಮ್ಮ ಮಕ್ಕಳ `SSLC-PUC’ ಬಳಿಕ ಯಾವ ಕೋರ್ಸ್ ಬೆಸ್ಟ್? ಇಲ್ಲಿದೆ ವಿವರ !

20/03/2026 5:20 AM
State News
KARNATAKA

BREAKING : ರಾಜ್ಯದಲ್ಲಿ ಇನ್ಮುಂದೆ ಜಯಂತಿ, ಉತ್ಸವಗಳಲ್ಲಿ ಡಿಜೆ ಬ್ಯಾನ್? : ಆಡಳಿತ, ವಿಪಕ್ಷ ನಾಯಕರಿಂದ ಆಗ್ರಹ!

By kannadanewsnow0520/03/2026 5:30 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ನಡೆಸಲಾಗುವ ಜಯಂತಿ ಹಾಗೂ ಉತ್ಸವಗಳಲ್ಲಿ ಡಿಜೆ ಸೌಂಡ್, ಐಟಂ ಸಾಂಗ್ ಬ್ಯಾನ್ ಮಾಡುವ ಬಗ್ಗೆ ವಿಧಾನಸಭೆಯಲ್ಲಿ…

ಹೊಸ `ಪ್ಯಾನ್ ಕಾರ್ಡ್’ ಪಡೆಯಲು ಆಧಾರ್ ಕಾರ್ಡ್ ಜೊತೆಗೆ ಈ ದಾಖಲೆಗಳು ಕಡ್ಡಾಯ : ಏ.1ರಿಂದ ಹೊಸ ರೂಲ್ಸ್ !

20/03/2026 5:25 AM

ಪೋಷಕರೇ ಇತ್ತ ಗಮನಿಸಿ: ನಿಮ್ಮ ಮಕ್ಕಳ `SSLC-PUC’ ಬಳಿಕ ಯಾವ ಕೋರ್ಸ್ ಬೆಸ್ಟ್? ಇಲ್ಲಿದೆ ವಿವರ !

20/03/2026 5:20 AM

ಸರ್ಕಾರ ನೀಡಿದ ಜಮೀನಿಗೆ ಸರ್ಕಾರದಿಂದಲೇ ಪೋಡಿ, 2.16 ಲಕ್ಷ ಅರ್ಜಿ ಪರಿಶೀಲಿಸಿ ಪೋಡಿಗೆ ಆದೇಶ : ಸಚಿವ ಕೃಷ್ಣ ಭೈರೇಗೌಡ

20/03/2026 5:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.